ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಳ? ಸಚಿವ ತಿಮ್ಮಾಪುರ ಹೇಳಿದ್ದಿಷ್ಟು

By Kannadaprabha News  |  First Published Jun 17, 2023, 8:28 AM IST

ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಯಾವುದೇ ಅಧಿಕೃತ ಆದೇಶವೂ ಆಗಿಲ್ಲ. ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ. ಹೆಚ್ಚಳ ಮಾಡಿದ್ದರೆ ನಾವೇ ಮಾಹಿತಿ ನೀಡುತ್ತಿದ್ದೆವು: ಆರ್‌.ಬಿ. ತಿಮ್ಮಾಪುರ 


ಬೆಂಗಳೂರು(ಜೂ.17):  ರಾಜ್ಯ ಸರ್ಕಾರವು ಯಾವುದೇ ರೀತಿಯಲ್ಲೂ ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ಯಾವುದೇ ಮದ್ಯದ ದರ ಹೆಚ್ಚಳವಾಗಿಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ರಾಜ್ಯ ಸರ್ಕಾರವು ಮದ್ಯದ ಮೇಲಿನ ಅಬಕಾರಿ ತೆರಿಗೆ ಹಚ್ಚಳ ಮಾಡದಿದ್ದರೂ ಬಾರ್‌ಗಳಲ್ಲಿ ಮದ್ಯ ಮಾರಾಟ ಬೆಲೆ ಹೆಚ್ಚಳ ಆಗಿರುವುದಾಗಿ ಕೆಲವರು ತಿಳಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಬಾರ್‌ಗಳು ಅಕ್ರಮವಾಗಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದರೆ ರಿಯಾಲಿಟಿ ಚೆಕ್‌ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Tap to resize

Latest Videos

ಕೋಲಾರ: ನಮ್ಮೂರಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರ ಆಕ್ರೋಶ..!

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಯಾವುದೇ ಅಧಿಕೃತ ಆದೇಶವೂ ಆಗಿಲ್ಲ. ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ. ಹೆಚ್ಚಳ ಮಾಡಿದ್ದರೆ ನಾವೇ ಮಾಹಿತಿ ನೀಡುತ್ತಿದ್ದೆವು ಎಂದು ಹೇಳಿದರು. ಕಳೆದ ಒಂದು ವಾರದಿಂದ ಬಿಯರ್‌ ದರ 20 ರು. ಜಾಸ್ತಿ ಆಗಿದೆ ಎಂಬ ಪ್ರಶ್ನೆಗೆ, ಆ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನಮ್ಮ ಸರ್ಕಾರದಿಂದ ಅಂತೂ ದರ ಹೆಚ್ಚಳ ಆಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಮದ್ಯ ಕಂಪೆನಿಗಳಿಂದ ದರ ಹೆಚ್ಚಳ: ಬಾರ್‌ ಮಾಲೀಕರ ಸಂಘ

ಬೆಂಗ​ಳೂ​ರು: ರಾಜ್ಯ ಸರ್ಕಾರ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲ ಎಂಬುದು ಸತ್ಯ. ಆದರೆ ಕೆಲ ಬಿಯರ್‌ ಹಾಗೂ ವಿಸ್ಕಿಯ ಬ್ರ್ಯಾಂಡ್‌ನ ಕಂಪೆನಿಗಳು ಮೂಲ ಬೆಲೆಯಲ್ಲಿ ತುಸು ಹೆಚ್ಚಳ ಮಾಡಿವೆ. ಹೀಗಾಗಿ ಬಾರ್‌ಗಳಲ್ಲಿ ಮದ್ಯದ ದರ ಹೆಚ್ಚಳ ಆಗಿದೆ ಎಂದು ಕರ್ನಾಟಕ ವೈನ್‌ ಮರ್ಚೆಂಟ್ಸ್‌ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್‌ ಹೆಗ್ಡೆ ತಿಳಿಸಿದ್ದಾರೆ.

‘ಪ್ರತಿ ಮೂರನೇ ತ್ರೈಮಾಸಿಕ ಬಳಿಕ ಕಂಪೆನಿಗಳ ಲಾಭ, ನಷ್ಟದ ಆಧಾರದ ಮೇಲೆ ತಮ್ಮ ಉತ್ಪನ್ನದ ದರ ಹೆಚ್ಚು, ಕಡಿಮೆ ಮಾಡಲು ಅವಕಾಶವಿರುತ್ತದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಅವುಗಳ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಆದರೆ ಮಾತ್ರ ಸರ್ಕಾರದ ಪಾತ್ರವಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

click me!