ರಾಮಮಂದಿರ ಸ್ಫೋಟ ಬೆದರಿಕೆ ಹಿನ್ನೆಲೆ; ದೇವಸ್ಥಾನಗಳಿಗೆ ಪೊಲೀಸ್ ಭದ್ರತೆಗೆ ರಾಮಲಿಂಗಾರೆಡ್ಡಿ ಸೂಚನೆ

By Kannadaprabha NewsFirst Published Mar 10, 2024, 5:56 AM IST
Highlights

ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕುವಂತಹ ಪ್ರಕರಣಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಯಾ ವಲಯಗಳ ಪೊಲೀಸ್ ಮಹಾ ನಿರೀಕ್ಷಕರು ಕ್ರಮ ಕೈಗೊಳ್ಳುತ್ತಾರೆ ಎಂದು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಪ್ಪಾಣಿಯಲ್ಲಿ ಶ್ರೀರಾಮ ಮಂದಿರ ಸ್ಫೋಟಿಸುವ ಬೆದರಿಕೆ ಪತ್ರದ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆ (ಮಾ.10): ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕುವಂತಹ ಪ್ರಕರಣಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಯಾ ವಲಯಗಳ ಪೊಲೀಸ್ ಮಹಾ ನಿರೀಕ್ಷಕರು ಕ್ರಮ ಕೈಗೊಳ್ಳುತ್ತಾರೆ ಎಂದು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಪ್ಪಾಣಿಯಲ್ಲಿ ಶ್ರೀರಾಮ ಮಂದಿರ ಸ್ಫೋಟಿಸುವ ಬೆದರಿಕೆ ಪತ್ರದ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಉದ್ಘಾಟಿಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕುವುದು, ಇ ಮೇಲ್ ಕಳಿಸುವುದನ್ನು ಮಾಡುತ್ತಿರುತ್ತಾರೆ. ಅದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಕೆಎಸ್ಸಾರ್ಟಿಸಿಗೂ ಬೆದರಿಕೆ ಬಂದಿದೆ ಎಂದರು.

ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನರು: ಸಂಸದ ಪ್ರತಾಪ್ ಸಿಂಹ

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಎಲ್ಲಾ ಲಗೇಜುಗಳ ಪರಿಶೀಲನೆ, ತನಿಖೆಗೆ ಸೂಚನೆ ನೀಡಿದ್ದೇನೆ. ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಿಗೂ ಸೂಕ್ತ ಭದ್ರತೆ ಕಲ್ಪಿಸಲು ಸೂಚಿಸುತ್ತೇನೆ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ. ನಮ್ಮ ಸರ್ಕಾರದ ರಾಜೀನಾಮೆ ಕೇಳುತ್ತಿರುವ ಬಿಜೆಪಿ ಅಧಿಕಾರಾವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿಯೇ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ 6 ಕಡೆ ಬಾಂಬ್ ಸ್ಫೋಟವಾಗಿದೆ. ಪ್ರಪಂಚ ಹುಟ್ಟಿದಾಗಿನಿಂದಲೂ ಇಂತಹ ಘಟನೆಗಳು ಆಗುತ್ತಿರುತ್ತವೆ. ಸರ್ಕಾರಗಳೂ ಬಿಗಿಯಾಗಿ ಕೆಲಸ ಮಾಡುತ್ತಿವೆ. ಹಿಂದೆ ಇದೇ ಬಿಜೆಪಿ ಅಧಿಕಾರಾವಧಿಯಲ್ಲಿ ಚಿನ್ನಸ್ವಾಮಿ ಸ್ಡೇಡಿಯಂ ಬಳಿ ಸ್ಫೋಟ, ಸರಣಿ ಸ್ಫೋಟಗಳು, ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ, ತುಂಗಾ ಪ್ರಯೋಗ ಬಾಂಬ್ ಸ್ಫೋಟಿಸಿತ್ತು ಎಂದು ಅವರು ತಿಳಿಸಿದರು.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತೀರಾ ಈಚೆಗೆ ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಹಾಕಲಾಗಿತ್ತು. ಸಂಸತ್ ಸ್ಮೋಕ್ ಬಾಂಬ್ ಸ್ಫೋಟದ ಆರೋಪಿಗೆ ಪಾಸ್ ಕೊಟ್ಟಿದ್ದು, ಇದೇ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅಲ್ಲವೇ? ನಾವು ಯಾರ ರಾಜೀನಾಮೆ ಕೇಳಬೇಕು? ಬಿಜೆಪಿಯವರೇ ಪ್ರತಾಪ ಸಿಂಹ್ ರಾಜೀನಾಮೆ ಕೇಳಬೇಕಲ್ಲವೇ ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ನೀತಿ ತಂದಿದೆ. ಸಬ್ ಇನ್ಸಪೆಕ್ಟರ್ ಗಳ ವರ್ಗಾವಣೆಗೆ ಕನಿಷ್ಠ ಅವಧಿ ಇರಲೆಂಬ ಕಾರಣಕ್ಕೆ ಇದನ್ನು ಮಾಡಿದ್ದೇವೆ. ಈಗ ಎಸ್‌ಐಗಳು ಕನಿಷ್ಠ 2 ಅಥವಾ ಎರಡೂವರೆ ವರ್ಷ ಒಂದು ಕಡೆ ಸಂಪೂರ್ಣವಾಗಿ ಕೆಲಸ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಂತಾಗಿದೆ. ಹಿಂದೆ ಬಿಜೆಪಿ ಅವಧಿಯಲ್ಲಿ 1 ವರ್ಷವೂ ಒಂದು ಕಡೆ ಇರಲು ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಬಿಡುತ್ತಿರಲಿಲ್ಲ. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.

ನಿಪ್ಪಾಣಿ ಶ್ರೀರಾಮ ಮಂದಿರಕ್ಕೆ ಬಾಂಬ್ ಬೆದರಿಕೆ; ಇಂಥ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಹೆದರೊಲ್ಲ: ಪ್ರಮೋದ್ ಮುತಾಲಿಕ್ ಕಿಡಿ

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಸಿ.ಟಿ.ರವಿಯಂತಹವರು ನೀವು ಮಾಧ್ಯಮದವರು ತೋರಿಸು ತ್ತೀರಿ ಅಂತಾ ಮಾತನಾಡುತ್ತಾರೆ. ಇಂತಹವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಇತರರು ಇದ್ದರು.

click me!