ಲೋಕಸಭಾ ಚುನಾವಣೆ ವೇಳೆ ಗಲಭೆ ಸೃಷ್ಟಿಸುವ ಸಾಧ್ಯತೆ ಹಿನ್ನೆಲೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ತುಡಕೂರು ಮಂಜು ಅವರಿಗೆ ಜಿಲ್ಲಾಡಳಿತ ಗಡಿಪಾರಿನ ನೋಟೀಸು ನೀಡಿದೆ.
ಚಿಕ್ಕಮಗಳೂರು (ಮಾ.9): ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ತುಡಕೂರು ಮಂಜು ಅವರಿಗೆ ಜಿಲ್ಲಾಡಳಿತ ಗಡಿಪಾರಿನ ನೋಟೀಸು ನೀಡಿದೆ. ಕರ್ನಾಟಕದ ಪೋಲಿಸ್ ಕಾಯ್ದೆ ಕಲಂ 55(ಎಬಿ) ಅಡಿ ಗಡಿ ಪಾರಿನ ನೋಟಿಸ್ ನೀಡಲಾಗಿದ್ದು, ನಿಮ್ಮನ್ನ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಲಾಗಿದೆ. ಮಾರ್ಚ್ 14 ರಂದು ಜಿಲ್ಲಾಧಿಕಾರಿ ಎದುರು ಹಾಜರಾಗಲು ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಮಂಜು ಅವರಿಗೆ ಬಿಜೆಪಿ ಪಕ್ಷದಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇದ್ದು, ಗಲಭೆ ಸೃಷ್ಟಿಸುವ ಉದ್ದೇಶ ಹೊಂದಿದ್ದಾರೆ ಎನ್ನುವುದು ಜಿಲ್ಲಾಡಳಿತ ನೀಡಿರುವ 17 ಕಾರಣಗಳ ಪೈಕಿ ಒಂದಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಈ ನೋಟೀಸು ಜಾರಿಯಾಗಿರುವ ಬಗ್ಗೆ ಹಿಂದೂ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಡಕೂರು ಮಂಜು ಭಜರಂಗದಳ ಮಾಜಿ ಜಿಲ್ಲಾ ಸಂಚಾಲಕರಾಗಿದ್ದಾರೆ. ಕೆಲವು ದಿನಗಳಿಂದ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ.
undefined
ನಮ್ಮ ಗುರಿ ಒಂದೇ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು: ಸಿಟಿ ರವಿ
ಖುಲಾಸೆಯಾಗಿರುವ ಪ್ರಕರಣವನ್ನೂ ನೋಟೀಸಿನಲ್ಲಿ ಉಲ್ಲೇಖ
ಈ ಕುರಿತು ಪ್ರತಿಕ್ರಿಯಿಸಿರುವ ಮಂಜು, ಸಂಘಟನೆಯ ಹೋರಾಟದಲ್ಲಿ 24 ಪ್ರಕರಣ ದಾಖಲಾಗಿದೆ. ಈ ಪೈಕಿ 22 ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ನ್ಯಾಯಾಲಯದಲ್ಲಿ 2 ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿದ್ದರೂ ಖುಲಾಸೆಯಾಗಿರುವ ಪ್ರಕರಣವನ್ನೂ ನೋಟೀಸಿನಲ್ಲಿ ಸೇರಿಸಲಾಗಿದೆ. ಅಲ್ಲದೆ, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಾರಣಕ್ಕೆ ನೋಟೀಸು ನೀಡಿದಂತಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಬಿಜೆಪಿ ಕಾರ್ಯಕರ್ತರನ್ನು ಗಡಿಪಾರು ಮಾಡಿಸಬಹುದು ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ. ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.