ಕಸ್ತೂರಿ ರಂಗನ್ ವರದಿ: ಮಹತ್ವದ ತೀರ್ಮಾನ ಕೈಗೊಂಡ ಸರ್ಕಾರ

By Suvarna NewsFirst Published Dec 28, 2020, 8:27 PM IST
Highlights

 ಪಶ್ಚಿಮ ಘಟ್ಟಗಳನ್ನು ಸಂರಕ್ಷಿತಾರಣ್ಯವಾಗಿಸುವ ಕುರಿತಂತೆ ಕಸ್ತೂರಿ ರಂಗನ್ ವರದಿ ಜಾರಿಯ ವಿರೋಧಿಸುವಂತ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ. 

ಬೆಂಗಳೂರು, (ಡಿ.28):ಕಸ್ತೂರಿ ರಂಗನ್ ವರದಿ ವಿರೋಧಿಸಲು ಸರ್ಕಾರದಿಂದ ತಿರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕಸ್ತೂರಿ ರಂಗನ್ ವರದಿ ವಿರೋಧಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ವರದಿ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಪತ್ರ ಬರೆಯಲು ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.

ನಾಯಕರಿಗೆ ಬಿಸಿ.. ಕಸ್ತೂರಿ ರಂಗನ್ ವರದಿ ವಿರೋಧಿಸಿ ಚುನಾವಣೆ ಬಹಿಷ್ಕಾರ!

6 ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಎದುರಾಗಿದೆ. ಹೀಗಾಗಿ ಈ ವರದಿ ಸಾರಾಸಗಟಾಗಿ ತಿರಸ್ಕರಿಸಲು ತಿರ್ಮಾನಿಸಲಾಗಿದೆ. ಜನರು ಈಗ ಹೋರಾಟದ ಹಾದಿ ಹಿಡಿದಿದ್ದಾರೆ ಎಂದರು.

ಡಿಸೆಂಬರ್.31ರಂದು ಎನ್ ಜಿ ಟಿ ಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತಂತೆ ವಿಚಾರಣೆ ಇದೆ. ಅಂದು ರಾಜ್ಯ ಸರ್ಕಾರದಿಂದ ಕಸ್ತೂರಿ ರಂಗನ್ ವರದಿ ಜಾರಿ ಸಾಧ್ಯವಿಲ್ಲ ಎಂಬುದಾಗಿ ತಿಳಿಸಲಾಗುತ್ತದೆ. ಕೇಂದ್ರಕ್ಕೆ ರಾಜ್ಯದ ಜನರ ಭಾವನೆ ತಿಳಿಸುತ್ತೇವೆ ಎಂದು ತಿಳಿಸಿದರು.

click me!