ಇನ್ಫೋಸಿಸ್ ನಾರಾಯಣಮೂರ್ತಿಯ ಕಾಂಗ್ರೆಸ್‌ ಗ್ಯಾರಂಟಿ ಕುರಿತ ಹೇಳಿಕೆ ಬೆಂಬಲಿಸಿದ ಸಚಿವ ಪ್ರಿಯಾಂಕ ಖರ್ಗೆ!

By Sathish Kumar KHFirst Published Nov 30, 2023, 6:39 PM IST
Highlights

ಸರ್ಕಾರದ ಗ್ಯಾರಂಟಿಗಳ ಕುರಿತ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು ನಮ್ಮ ದೇಶದಲ್ಲಿ ಕಳೆದ 10 ವರ್ಷದಿಂದ ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಹೇಳಿದ್ದಾರೆ. 

ಬೆಂಗಳೂರು (ನ.30): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಕುರಿತ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು ನಮ್ಮ ದೇಶದಲ್ಲಿ ಕಳೆದ 10 ವರ್ಷದಿಂದ ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಹೇಳಿದ್ದಾರೆ. 

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು 'ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ. ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂತಿರುಗಿ ಕೊಡಬೇಕು. ಆಗ ಉಚಿತ ಉಡುಗೊರೆಗಳಿಗೆ ಅರ್ಥ ಸಿಗುತ್ತದೆ' ಎಂದ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದರು. ನಾರಾಯಣ ಮೂರ್ತಿ ಅವರ ಹೇಳಿಕೆ ಬೆನ್ನಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಕಳೆದ ಒಂದು ದಶಕದಿಂದ ಜನ ಬಡತನ ರೇಖೆಗಿಂತ ಎಷ್ಟು ಕೆಳಗೆ ಹೋಗಿದ್ದಾರೆ ಅನ್ನೋದನ್ನ ನೋಡಬೇಕು. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಬಡವರು ಬಡವರಾಗಿ ಇರುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Latest Videos

ರಾಜಸ್ಥಾನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಕೊಟ್ಟ ಸಿಎನ್‌ಎನ್! ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಇಲ್ಲಿದೆ ನೋಡಿ..

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ದೇಶದಲ್ಲಿ ಬಂಡವಾಳ ಶಾಹಿಗಳು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇಟ್ಟುಕೊಳ್ಳಬೇಕು ಅಂತ ನಾರಾಯಣ ಮೂರ್ತಿಯವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಆ ರೀತಿ ಎಷ್ಟು ಜನ ಮಾಡುತ್ತಾರೆ ಹೇಳಿ? ನಮ್ಮ ದೇಶದಲ್ಲಿ ಸಾಕಷ್ಟು ಬಂಡವಾಳಶಾಹಿಗಳು ಇದ್ದಾರೆ. ಎಷ್ಟು ಕಂಪನಿಗಳು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇಟ್ಟುಕೊಂಡಿದ್ದಾರೆ. ಎಲ್ಲರೂ ವಿಶಾಲ ಮನಸ್ಸಿನಿಂದ ಯೋಚನೆ ಮಾಡೋದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಕಳೆದ ಒಂದು ದಶಕದಿಂದ ಜನ ಬಡತನ ರೇಖೆಗಿಂತ ಎಷ್ಟು ಕೆಳಗೆ ಹೋಗಿದ್ದಾರೆ ಅನ್ನೋದನ್ನ ನೋಡಬೇಕು. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ.. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ನಾರಾಯಣ ಮೂರ್ತಿಯವರು ಅವರು ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸಾಕಷ್ಟು ಕೆಲಸ ಮಾಡಿದ್ದಾರೆ, ಈಗಲೂ ಮಾಡ್ತಿದ್ದಾರೆ. ನೀವೇನು ಸೇವೆ ಕೊಡ್ತಾ ಇದ್ದೀರಾ ಅದರ ಜೊತೆಗೆ ನಾಗರಿಕ ಜವಾಬ್ದಾರಿ ಕೂಡ ಇರಲಿ ಅಂತ ಹೇಳಿದ್ದಾರೆ. ನೀವು ಸಿಟಿಜನ್ ರೈಟ್ ಅಂತ ಹೇಳ್ತೀರಾ ಸಿಟಿಜನ್ ಡ್ಯೂಟಿಸ್ ಅನ್ನು ಕೂಡ ಹೇಳಬೇಕು ಎಂದಿದ್ದಾರೆ. ಅದರ ಅರ್ಥ ನಾವು ಸರ್ಕಾರದ ಯೋಜನೆಗಳನ್ನ ಇನ್ಸೆಂಟಿವ್ ರೀತಿ ಕೊಡಬೇಕು ಅಂತ ಹೇಳಿದ್ದಾರೆ ಎಂದು ಪ್ರಯಾಂಕ ಖರ್ಗೆ ತಿಳಿಸಿದರು.

ಮಧ್ಯಾಹ್ನದ ಬಿಸಿ ಊಟ ಶುರು ಮಾಡಿದ ಉದ್ದೇಶ ಮಕ್ಕಳು ಹೆಚ್ಚು ಶಾಲೆಗೆ ಬರಬೇಕು ಎಂಬುದಾಗಿತ್ತು. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಶಾಲೆಗೆ ಬರೋದಕ್ಕೆ ಶುರು ಮಾಡಿದರು. ವಿದ್ಯಾರ್ಥಿ ವೇತನ ಕೊಡುವುದು ಶೈಕ್ಷಣಿಕವಾಗಿ ಸಹಾಯ ಆಯ್ತು. ಅಧ್ಯಯನದ ಮೇಲೆಯೇ ಯುನಿವರ್ಸಲ್ ಬೇಸಿಕ್ ಇನ್ಕಮ್ ಎಂಬ ಪರಿಕಲ್ಪನೆಯಿಂದ ಬಂದಿದೆ. ಗ್ಯಾರಂಟಿಗಳಿಂದ ಕುಟುಂಬಗಳಿಗೆ ಸಾಕಷ್ಟು ಉಳಿತಾಯ ಆಗ್ತಾ ಇದೆ. ತಿಂಗಳಿಗೆ 8,000 ರೂ.ಗಳಿಂದ 10,000 ರೂ. ಹಣ ಒಂದು ಕುಟುಂಬಕ್ಕೆ ಉಳಿತಾಯ ಆಗ್ತಾ ಇದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ, 20 ಸಾವಿರ ಉಳಿತಾಯ ಆಗುತ್ತದೆ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಕಹಳೆ ಎಂದ ಎಕ್ಸಿಟ್‌ ಪೋಲ್‌!

ಇನ್ನು ಜನರ ಹಣ ಉಳಿತಾಯದಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಅಂತ ಟ್ಯೂಷನ್ ಕಳಿಸ್ತಾರೆ. ಖರೀದಿ ಮಾಡೋದಕ್ಕೆ ಸಹಾಯ ಆಗುತ್ತದೆ. ಇದೆಲ್ಲವೂ ಕೂಡ ವಾಪಸ್ ಬರುತ್ತದೆ. ಯೂನಿವರ್ಸಲ್ ಬೇಸಿಕ್ ಇನ್ ಕಂ ಕಾನ್ಸೆಪ್ಟ್ ಗ್ಯಾರೆಂಟಿಯ ಮೂಲಕ ನಾವು ಪ್ರಯೋಗ ಮಾಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಆಚಾರ ವಿಚಾರ ಇದೆ ಪ್ರಚಾರದ ಕೊರತೆ ಇದೆ. ನಮ್ಮ ಗ್ಯಾರಂಟಿಗಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನುವುದಕ್ಕೆ ಒಂದು ವರ್ಷದ ಸೈಕಲ್ ನೋಡಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

click me!