'ಸ್ಪೋಟಕ ವಸ್ತುಗಳನ್ನು ಹಿಂತಿರುಗಿಸದಿದ್ದರೆ ಲೈಸೆನ್ಸ್ ರದ್ದು'

By Suvarna News  |  First Published Feb 26, 2021, 8:04 PM IST

ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಜಿಲೆಟಿನ್ ಸ್ಫೋಟದ ಬಳಿಕೆ ಅಲರ್ಟ್ ಆಗಿರುವ ಸರ್ಕಾರ, ಸ್ಪೋಟಕ ವಸ್ತುಗಳ ಬಗ್ಗೆ ಎಚ್ಚರಿಕೆ ಕೊಟ್ಟಿದೆ.


ರಾಯಚೂರು, ( ಹಟ್ಟಿ ಚಿನ್ನದ ಗಣಿ), (ಫೆ.26): ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಯಾರಾದರೂ ಕಾನೂನುಬಾಹಿರವಾಗಿ ಸ್ಟೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ,ನಾಲ್ಕು ವಾರದೊಳಗೆ  ಹಿಂತಿರಿಗಿಸಬೇಕು.ಇಲ್ಲದಿದ್ದರೆ ಅಂತಹವರ ಲೈಸೆನ್ಸ್ ( ಪರವನಾಗಿ)ಯನ್ನು ರದ್ದುಪಡಿಸಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಎಚ್ಚರಿಕೆ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶಕ್ಕೆ ಇಂದು (ಶುಕ್ರವಾರ) ಭೇಟಿ ನೀಡಿ ನಂತರ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾಲ್ಕು ವಾರದ ನಂತರ ಸ್ಪೋಟಕ ವಸ್ತುಗಳನ್ನು ಇಲಾಖೆಗೆ ವಶಪಡಿಸಲು ಸೂಚಿಸಲಾಗಿದೆ.ಬಳಿಕವೂ ಕಂಡುಬಂದರೆ,ಅಂತಹ ಗಣಿ ಗುತ್ತಿಗೆ ರದ್ದು ಮಾಡಲಾಗುವುದು ಎಂದು ಹೇಳಿದರು.

Latest Videos

undefined

ಕಣ್ಣ ಮುಂದೆ ಕ್ವಾರಿ ದಂಧೆ; ಕೈಕಟ್ಟಿ ಕುಳಿತ ಸರ್ಕಾರ! 

ಹಟ್ಟಿ ಚಿನ್ನದ ಗಣಿ ೧೭೦೦ ಕೆಜಿ ಚಿನ್ನ ಉತ್ಪಾದನೆಯಾಗಿದೆ.ಗಣಿಯನ್ನು ಅಧುನಿಕರಣವನ್ನುಗೊಳಿಸಲು ಚಿಂತನೆ ನಡೆಸಲಾಗಿದೆ.ಈಗಾಗಲೇ ಅಧುನಿಕರಣಕ್ಕೆ ವರದಿ ತಯಾರಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಚಿನ್ನ ಉತ್ಪಾದನೆಗೆ ಕಡಿತವಾಗಿತ್ತು.ಈಗ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣಿಗಾರಿಕೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದೆ ಇದಕ್ಕೆ ಕಾರಣ.ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಪದೇ ಪದೇ ಕೇಳಿ ಬರುತ್ತಿದೆ.ಮುಂದೆ ಇಂತಹ ದೂರುಗಳು ಕೇಳಿ ಬಂದರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

click me!