ಐದು ವರ್ಷ ನಾಪತ್ತೆಯಾಗಿದ್ರು. ಎಲ್ಲಿಯೂ ಕಾಣಲಿಲ್ಲ. ಮತದಾರರಿಗೂ ಮುಖ ತೋರಿಸಲಿಲ್ಲ. ಈಗ ಚುನಾವಣೆ ಬಂದ ಕಾರಣ ಮತ್ತೆ ಹೊರಗೆ ಬಂದು ಹಿಂದು-ಮುಸ್ಲಿಂ ಅಂತಾ ಹೇಳಿಕೆ ಕೊಡುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡೋಕೆ ಸಿದ್ಧತೆ ನಡೆಸಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗ್ಡೆ ವಿರುದ್ಧ ಸಚಿವ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ವಿಜಯಪುರ (ಫೆ.24) ಐದು ವರ್ಷ ನಾಪತ್ತೆಯಾಗಿದ್ರು. ಎಲ್ಲಿಯೂ ಕಾಣಲಿಲ್ಲ. ಮತದಾರರಿಗೂ ಮುಖ ತೋರಿಸಲಿಲ್ಲ. ಈಗ ಚುನಾವಣೆ ಬಂದ ಕಾರಣ ಮತ್ತೆ ಹೊರಗೆ ಬಂದು ಹಿಂದು-ಮುಸ್ಲಿಂ ಅಂತಾ ಹೇಳಿಕೆ ಕೊಡುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡೋಕೆ ಸಿದ್ಧತೆ ನಡೆಸಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗ್ಡೆ ವಿರುದ್ಧ ಸಚಿವ ಎಂಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ವಿಜಯಪುರದ ಇಂಡಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಒಬ್ಬ ಸಂಸದನಾಗಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ. ಸಂಸದ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದು, ಯಾವುದಾದರೂ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಹಿಂದೆ ಕೇಂದ್ರ ಸಚಿವರಾಗಿದ್ದ ಇದೇ ಮಹಾಶಯರು ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡೋ ಅವಶ್ಯಕತೆಯಿಲ್ಲ. ಸಿಎಂಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದು, ಹಿಂದೂ ಮುಸ್ಲಿಂ ಅಂತಾ ಇವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ ಇದು ಚುನಾವಣೆ ಗಿಮಿಕ್ ಅಷ್ಟೇ ಎಂದರು.
'ನೀನು ಬಾರದಿದ್ದರೆ ರಾಮಜನ್ಮಭೂಮಿ ನಿಲ್ಲಲ್ಲ ಮಗನೇ..' ಸಿದ್ಧರಾಮಯ್ಯಗೆ ಏಕವಚನದಲ್ಲಿ ವಾಗ್ದಾಳಿ!