ಕಿರಿಕ್‌ ಮೇಲೆ ಕಿರಿಕ್‌: ಸಂಪುಟ ವಿಸ್ತರಣೆ ವೇಳೆ ಮಾಧುಸ್ವಾಮಿಗೆ ಕೊಕ್..?

Suvarna News   | Asianet News
Published : May 23, 2020, 12:44 PM ISTUpdated : May 23, 2020, 12:47 PM IST
ಕಿರಿಕ್‌ ಮೇಲೆ ಕಿರಿಕ್‌: ಸಂಪುಟ ವಿಸ್ತರಣೆ ವೇಳೆ ಮಾಧುಸ್ವಾಮಿಗೆ ಕೊಕ್..?

ಸಾರಾಂಶ

ಸಿಎಂ ಯಡಿಯೂರಪ್ಪ ಸುತ್ತ - ಮುತ್ತ ಇರುವ ಆಪ್ತರೇ ಮಾಧುಸ್ವಾಮಿ ಬಗ್ಗೆ ಅಪಸ್ವರ| ಸಿಎಂ ಪ್ರತಿ ಬಾರಿ ಮಾಧುಸ್ವಾಮಿಗೆ ಬೈಯುತ್ತಾರೆ| ಸಂಪುಟ ಸಹದ್ಯೋಗಿಗಳ ಜೊತೆಯೂ ಚೆನ್ನಾಗಿಲ್ಲ|ಮಾಧುಸ್ವಾಮಿ ಬಗ್ಗೆ ಸಂಪುಟದ ಬಹುತೇಕ ಸಚಿವರ ಅಸಮಾಧಾನ ಇದೆ|

ಬೆಂಗಳೂರು(ಮೇ.23): ಕಾನೂನು ಸಚಿವ ಜೆ. ಸಿ. ಸಚಿವ ಮಾಧುಸ್ವಾಮಿ ಅವರ ಇತ್ತೀಚಿನ ನಡೆ ಬಗ್ಗೆ  ಸ್ವಪಕ್ಷದಲ್ಲೇ ಅಪಸ್ವರ ಕೇಳಿಬರುತ್ತಿದೆ. ಸಂಪುಟ ವಿಸ್ತರಣೆ ವೇಳೆ ಸಚಿವ ಮಾಧುಸ್ವಾಮಿಗೆ ಕೊಕ್‌ ನೀಡಲಾಗುತ್ತದೆ ಎಂದು ಸಿಎಂ ಆಪ್ತವಲಯದಿಂದ ಮಾಹಿತಿ ಬಂದಿದೆ ಎಂದು ಹೇಳಲಾಗುತ್ತಿದೆ. 

ಮೊದಲು ಕುರುಬ ಸಮುದಾಯದ ಸ್ವಾಮೀಜಿ ಅವರ ಜೊತೆ ವಾಗ್ವಾದ ಮಾಡಿಕೊಂಡಿದ್ದ ಸಚಿವ ಮಾಧುಸ್ವಾಮಿ ಅವರು ಇದೀಗ ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಮಾಧುಸ್ವಾಮಿ ಅವರ ನಡೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. 

ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ, ಇದೆಂಥಾ ಸಭ್ಯತೆ ಸ್ವಾಮಿ...!

ಸಚಿವರಾಗಿ ಮಾಧುಸ್ವಾಮಿ ನಡೆ ಸರಿಯಲ್ಲ, ಮೊದಲು ಬಾಯಿಗೆ ಬಂದಂಗೆ ಮಾತಾಡೋದು ಯಾಕೆ ಕ್ಷಮೆ ಕೇಳೊದು ಯಾಕೆ ಎಂದು ಸ್ವಪಕ್ಷದ ನಾಯಕರಿಂದಲೇ ಟೀಕೆಗಳು ವ್ಯಕ್ತವಾಗುತ್ತಿವೆ.  ಸಿಎಂ ಯಡಿಯೂರಪ್ಪ ಅವರ ಸುತ್ತ - ಮುತ್ತ ಇರುವ ಆಪ್ತರೆ ಈಗ ಮಾಧುಸ್ವಾಮಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ.

ರ‌್ಯಾಸ್ಕಲ್ ಎಂದಿದ್ದಕ್ಕೆ ರೈತ ಮಹಿಳೆಯ ಕ್ಷಮೆ ಕೇಳಿದ ಸಚಿವ ಮಾಧುಸ್ವಾಮಿ!

ಸಿಎಂ ಪ್ರತಿ ಬಾರಿ ಮಾಧುಸ್ವಾಮಿಗೆ ಬೈಯುತ್ತಾರೆ. ಸಂಪುಟ ಸಹದ್ಯೋಗಿಗಳ ಜೊತೆಯೂ ಚೆನ್ನಾಗಿಲ್ಲ. ಏನೋ ತಿಳಿದವರು ಬುದ್ಧಿವಂತರು ಅಂತ ಸಿಎಂ ಯಡಿಯೂರಪ್ಪ ಅವರು ಮಾಧುಸ್ವಾಮಿ ಅವರನ್ನ ಸಚಿವರನ್ನಾಗಿ ಮಾಡಿದ್ದಾರೆ. ಈಗ ಅವರ ಅತೀ ಬುದ್ಧಿವಂತಕೆಯೆ ಸರ್ಕಾರಕ್ಕೆ ಮುಜುಗರದ ಸಂಗತಿಯಾಗಿದೆ. ಸಂಪುಟ ವಿಸ್ತರಣೆ ವೇಳೆ ನಾಲ್ಕೈದು ಮಂತ್ರಿಗಳಿಗೆ ಕೊಕ್ ಕೊಡುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ಇದೆ. ಆ ಲಿಸ್ಟ್ ನಲ್ಲಿ ಮಾಧುಸ್ವಾಮಿ ಹೆಸರು ಇದ್ದರು ಅಚ್ಚರಿ ಇಲ್ಲ ಎನ್ನುತ್ತಿವೆ ಸಿಎಂ ಆಪ್ತವಲಯ. ಆದರೆ, ಸದ್ಯ ವಿಸ್ತರಣೆ ಆಗೋದಿಲ್ಲ, ಆದರೆ ಮಾಧುಸ್ವಾಮಿ ಬಗ್ಗೆ ಸಂಪುಟದ ಬಹುತೇಕ ಸಚಿವರ ಅಸಮಾಧಾನ ಇದೆ ಎಂದು ಹೇಳಲಾಗುತ್ತಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಸುತ್ತೋಲೆ ವಿವಾದಕ್ಕೆ ತೆರೆ.. ಹಾಲಿ ಪಿಯುಸಿ ಉಪನ್ಯಾಸಕರಿಗೆ ಇಲ್ಲ ಹಿಂಬಡ್ತಿ: ಸಚಿವ ಮಧು ಬಂಗಾರಪ್ಪ