ಟಿಪ್ಪು ಬಗ್ಗೆ ವಿಶ್ವನಾಥ್‌ ಹೇಳಿಕೆ ನೀಡಬಾರದಿತ್ತು: ಈಶ್ವರಪ್ಪ

By Kannadaprabha News  |  First Published Aug 28, 2020, 9:41 AM IST

ಎಚ್ ವಿಶ್ವನಾಥ್ ಟಿಪ್ಪು ಬಗ್ಗೆ ಮಾತನಾಡಿರುವುದಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಈ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ.


ಬೆಂಗಳೂರು (ಆ.28):  ಟಿಪ್ಪು ವಿಷಯ ಮುಗಿದ ಅಧ್ಯಾಯವಾಗಿರುವಾಗ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಈಗ ಪುನಃ ಈ ಬಗ್ಗೆ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಶ್ವನಾಥ್‌ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ, ಟಿಪ್ಪು ಬಗ್ಗೆ ಮತ್ತೆ ಮತ್ತೆ ಗೊಂದಲ ಮೂಡಿಸಲಾಗುತ್ತೋ ಗೊತ್ತಿಲ್ಲ. ಅವರು ಯಾಕೆ, ಎಲ್ಲಿ, ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಟಿಪ್ಪು ವಿಷಯ ಈಗ ಮುಗಿದು ಹೋದ ಅಧ್ಯಾಯ, ಟಿಪ್ಪು ಒಳ್ಳೆಯವನೋ, ಕೆಟ್ಟವನೋ ಎಂಬ ಬಗ್ಗೆ ಚರ್ಚೆಯಾಗಿದೆ. ಈಗ ಹೇಳುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಈಶ್ವರಪ್ಪ ಜೊತೆ ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚೆ ಮಾಡುವುದಾಗಿ ಹೇಳಿದರು.

Tap to resize

Latest Videos

ಎಲ್ಲರೂ ಬಿಜೆಪಿ ಸೇರ್ಪಡೆಗೊಳ್ಳಿ : ಕಾಂಗ್ರೆಸ್ ಪಕ್ಷ ಅವಸಾನದ ಅಂಚಲ್ಲಿದೆ'

ಕಠಿಣ ಕ್ರಮ:  ಬೆಳಗಾವಿ, ಗದಗ, ವಿಜಯಪುರ ಮುಂತಾದ ಜಿಲ್ಲೆಗಳಲ್ಲಿ ಅನಾಮಧೇಯವಾಗಿ ರೈತರ ಹೆಸರಿಗೆ ಬಿತ್ತನೆ ಬೀಜ ಕಳಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಕಡೆ ಈ ರೀತಿಯ ಘಟನೆಗಳು ನಡೆದಿಲ್ಲ. ಯಾರು ಈ ರೀತಿ ಬೀಜ ಕಳಿಸಿ ಕುತಂತ್ರ ಮಾಡುತ್ತಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಿ, ಅಂತವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಎಚ್. ವಿಶ್ವನಾಥ್ ಹೇಳಿದ್ದಿಷ್ಟು...

"

click me!