'ಯಾರೂ ಅನಿವಾರ್ಯರಲ್ಲ..' ಜಾರಕಿಹೊಳಿ ಪರ ಯತೀಂದ್ರ ಹೇಳಿಕೆಗೆ ಸಚಿವ ಮಹದೇವಪ್ಪ ಗರಂ

Published : Oct 24, 2025, 02:40 PM IST
HC Mahadevappa statement on leadership

ಸಾರಾಂಶ

HC Mahadevappa statement on leadership:ಯತೀಂದ್ರ ಸಿದ್ದರಾಮಯ್ಯರವರ ಹೇಳಿಕೆಗೆ ಗರಂ ಆದ ಸಚಿವ ಎಚ್.ಸಿ. ಮಹದೇವಪ್ಪ, 'ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯರಲ್ಲ' ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವದ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು (ಅ.24): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಸತೀಶ್ ಜಾರಕಿಹೊಳಿ ವಿಚಾರವನ್ನು ಎಳೆದು ತಂದಿದ್ದಕ್ಕೆ ಸಚಿವ ಎಚ್.ಸಿ. ಮಹದೇವಪ್ಪ ಗರಂ ಆಗಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗೆ ನಾಂದಿ ಹಾಡುತ್ತಾ, 'ಈ ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯರಲ್ಲ!" ಎಂದು ಸಚಿವ ಮಹದೇವಪ್ಪ ಬಾಂಬ್ ಹಾಕಿದ್ದಾರೆ.

ಯತೀಂದ್ರ ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಮ್ಮ ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಅಂತ್ಯ ಹಂತದಲ್ಲಿದ್ದು, ಸತೀಶ್ ಜಾರಕಿಹೊಳಿ ಅವರಂತಹ ಐಡಿಯಾಲಜಿಕಲ್ ಮಾರ್ಗದರ್ಶನ ಮುನ್ನೆಡೆಸುತ್ತದೆ ಎಂಬಂತೆ ಹೇಳಿದ್ದರು. ಇದು 2028ರ ಚುನಾವಣೆ ಸಂಬಂಧ ಹೇಳಿಕೆಯಾಗಿತ್ತು.

ಕಾಂಗ್ರೆಸ್ ಇರೋದೇ ಐಡಿಯಾಲಾಜಿಗೋಸ್ಕರ್:

ಆದರೆ ಇದು ಡಿ.ಕೆ. ಶಿವಕುಮಾರ್ ಅವರನ್ನ ಸಿಎಂ ಆಗುವುದನ್ನ ತಡೆಯುವ ಕಾರ್ಯ ಎಂಬ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಹದೇವಪ್ಪ ಅವರು ಪ್ರತಿಕ್ರಿಯಿಸಿ, 'ಹೈಕಮಾಂಡ್ ಜಂಟ್‌ಲಿ ಮ್ಯಾನ್ ಯು ಶುಡ್ ಲೀಡ್ ಅಂತ ಹೇಳಿದ್ದಾರಾ? ಕಾಂಗ್ರೆಸ್ ಹೈಕಮಾಂಡ್ ಹೇಳಿದೆಯಾ? ಯಾಕೆ ತಲೆಕೆಡಿಸಿಕೊಳ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಂದರೆ ಸಾಕಷ್ಟು ಜನ ಸೈದ್ಧಾಂತಿಕವಾಗಿ ಗುರುತಿಸಿಕೊಂಡವರು ಪಕ್ಷದಲ್ಲಿ ಇದ್ದಾರೆ. ಕಾಂಗ್ರೆಸ್ ಇರೋದೇ ಐಡಿಯಾಲಜಿಗೋಸ್ಕರೆ. ಇಂದಿರಾ ಗಾಂಧಿಯವರು ಹೋದಾಗ ಏನಪ್ಪ ಮಾಡೋದು ಅಂತ ವಿಚಾರ ಬಂತು, ಆಗ ಸಾಕಷ್ಟು ನಾಯಕರು ಹುಟ್ಟಿಕೊಂಡರು. ಈ ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯ ಅಲ್ಲ. ಆ ಸನ್ನಿವೇಶ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಉಳಿದವೆಲ್ಲಾ ಕೇವಲ ಚರ್ಚೆಯ ವಿಷಯಗಳು ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ನನ್ನ ಹೇಳಿಕೆ ಬೇಕಾದ್ರೆ ಅನಲೈಸ್ ಮಾಡಿ ಎಂದ ಮಹದೇವಪ್ಪ:

ನನ್ನ ಹೇಳಿಕೆಯನ್ನು ನೀವು ಅನಲೈಸ್ ಮಾಡಿ. ವ್ಯವಸ್ಥೆಯಲ್ಲಿ ಯಾರೂ ಅನಿವಾರ್ಯ ಅಲ್ಲ ಅಂತ ಹೇಳಿದ ಮೇಲೆ ಮಹದೇವಪ್ಪ ಇದನ್ನ ಯಾಕೆ ಹೇಳಿದರು ಅಂತ ಅನಲೈಸ್ ಮಾಡಿ ಎಂದರು. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಾರಕಿಹೊಳಿ ಸೇರಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ್ದು ಎಂಬ ಅರ್ಥದಲ್ಲಿ ವಿಶ್ಲೇಷಿಸಲಾಗುತ್ತಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಈ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ. ಡಾ ಜಿ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅವರು ಸ್ಪೆಕ್ಯುಲೇಷನ್‌ಗಳನ್ನು ತಳ್ಳಿ ಹಾಕಿದ್ದಾರೆ. ಜಾರಕಿಹೊಳಿ ಅವರೂ ಯತೀಂದ್ರ ಹೇಳಿಕೆಯನ್ನು AHINDA ನಾಯಕತ್ವಕ್ಕೆ ಸೀಮಿತಗೊಳಿಸಿ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಒಳಪಟ್ಟು ಈ ವಿವಾದ ಮುಂದುವರಿಯಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!