ಮತಗಳ್ಳತನದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

Published : Oct 24, 2025, 01:32 PM ISTUpdated : Oct 24, 2025, 01:46 PM IST
Aland constituency voter list scam

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ಧ ಗಂಭೀರ ಮತಗಳ್ಳತನದ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದ ಪ್ರಕರಣ ಉಲ್ಲೇಖಿಸಿ, ಎಸ್‌ಐಟಿ ತನಿಖೆ ಮುಗಿದ ನಂತರ ದಾಖಲೆ ಸಮೇತ ಎಲ್ಲವನ್ನೂ ಜನರ ಮುಂದಿಡುವುದಾಗಿ ಹೇಳಿದ್ದಾರೆ. ಚುನಾವಣೆ ಆಯೋಗವು ಒಂದು ಪಕ್ಷದ ಕಪಿಮುಷ್ಠಿಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

ವಿಧಾನಸೌಧ (ಅ.24): ಬಿಜೆಪಿಯವರಿಂದ ಮತಗಳ್ಳತನ ನಡೆಯುತ್ತಿದೆ. ಇದನ್ನು ಹಲವು ತಿಂಗಳಿನಿಂದ ಹೇಳುತ್ತಿದ್ದೇನೆ. ಪತ್ರಿಕೆಗಳಿಂದ ಸಾರ್ವಜನಿಕರಿಗೆ ಮಾಹಿತಿ ಸಿಗ್ತಿದೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.

ಸಾಕ್ಷ್ಯ ಸಮೇತ ಜನರ ಮುಂದೆ ಇಡುತ್ತೇವೆ:

ಕಲಬುರಗಿ ಆಳಂದ ಮತಗಳವು ಪ್ರಕರಣ ಬಳಿಕ ಇದೀಗ ಎಸ್‌ಐಟಿಗೆ ಮತ್ತೆರಡು ಸ್ಥಳಗಳಲ್ಲಿ ಮತಗಳವು ನಡೆದಿರುವುದು ಪತ್ತೆಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಖರ್ಗೆ, ಬಿಜೆಪಿಯವ್ರು ಒಂದು ವೋಟು ತೆಗೆಯಲು 80 ರೂಪಾಯಿ ತೆಗೆದುಕೊಳ್ಳುತ್ತಿದ್ದರು ಅಂತ ಹಿಂದಿನಿಂದಲೂ ಹೇಳ್ತಿದ್ದೇನೆ. ರಾಹುಲ್ ಗಾಂಧಿಯವರು ಕೂಡ ಇದನ್ನೇ ಹೇಳಿದ್ರು. ಇದನ್ನ ನಂಬಲಿಲ್ಲ, ಬಹಳಷ್ಟು ಜನ ಟೀಕೆ ಮಾಡಿದ್ರು. ಇನ್ನು ಎಸ್‌ಐಟಿ ತನಿಖೆ ವೇಳೆ ಒಂದೊಂದೇ ಮಾಹಿತಿ ಹೊರಗೆ ಬರ್ತಿದೆ ತನಿಖೆ ಇನ್ನೊಂದು ವಾರದಲ್ಲಿ ಮುಕ್ತಾಯವಾಗಬಹುದು. ದಾಖಲೆ ಸಮೇತ ಜನರ ಮುಂದೆ ಇಡುತ್ತೇವೆ ಎಂದರು.

ಬಿಜೆಪಿ ಪ್ರಜಾಪ್ರಭುತ್ವ ಮಾರಾಟಕ್ಕಿಟ್ಟಿದೆ:

ಮತಗಳವು ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳು ಸಿಕ್ಕಿರುವ ಬಗ್ಗೆ ಮಾಹಿತಿ ಇದೆ. ನಾವು ಎಲೆಕ್ಷನ್ ಕಮಿಷನ್‌, ಬಿಜೆಪಿಯನ್ನ ಪ್ರಶ್ನೆ ಮಾಡ್ತೇವೆ. ಪ್ರಜಾಪ್ರಭತ್ವ ಇವರು ಮಾರಾಟಕ್ಕೆ ಇಟ್ಟಿದ್ದಾರೆ. ಇದು ಆಳಂದ ಕ್ಷೇತ್ರದ ಸಮಸ್ಯೆ ಅಷ್ಟೇ ಅಲ್ಲ. ಅಸ್ಸಾಂ, ಹರಿಯಾಣ ಬಿಹಾರ ಚುನಾವಣೆ ನೋಡಿದ್ರೆ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಫೇರ್ ಆಗಿ ಮಾಡ್ತಿಲ್ಲ. ಆಳಂದ ರೀತಿಯಲ್ಲಿ ಹಲವಾರು ರಾಜ್ಯಗಳಲ್ಲಿ ಮತಗಳ್ಳತನದಿಂದ ಆಯ್ಕೆ ಆಗಿದ್ದಾರೆ. ಇದರ ಬಗ್ಗೆ ದಾಖಲೆ ಸಮೇತ ಜನರ ಮುಂದೆ ಇಡ್ತೇವೆ ಎಂದರು.

ಏನೆ ದಾಖಲೆ ಸಿಕ್ಕಿದೆ ಅದರ ಬಗ್ಗೆ ಈಗ ನಾನು ಮಾತಾಡೋುದು ಸೂಕ್ತವಲ್ಲ. ತನಿಖೆ ಮುಿಯಲಿ ಇಷ್ಟು ವರ್ಷ ಕಾದಿದ್ದೇವೆ ಇನ್ನು ಸ್ವಲ್ಪ ದಿನಗಳು ಬಳಿಕ ಎಲ್ಲ ಬಯಲು ಮಾಡುತ್ತೇವೆ. ಇದು ಇಡೀ ವ್ಯವಸ್ಥೆಯ ಬುಡುಮೇಲು ಮಾಡಿದೆ. ರಾಹುಲ್ ಗಾಂಧಿ ಪ್ರಶ್ನೆಮಾಡಿದ್ರೆ ಎಲೆಕ್ಷನ್ ಕಮಿಷನ್ ಅಫಿಡೆವಿಟ್ ಕೇಳ್ತಿದೆ. ಮತದಾರರ ಪಟ್ಟಿ ಶುದ್ಧವಾಗಬೇಕು. ಅದರ ಕೆಲಸ, ಜವಾಬ್ದಾರಿ ಯಾರದ್ದು? ಚುನಾವಣೆಗಳು ನಿಷ್ಪಕ್ಷಪಾತವಾಗಿರಬೇಕು. ಆದರೆ ಆ ರೀತಿ ಆಗುತ್ತಿಲ್ಲ ಅನ್ನೋದು ಈಗ ಸಾಬೀತಾಗಿದೆ. ಎಲೆಕ್ಷನ್ ಕಮಿಷನ್ ಒಂದು ಪಕ್ಷದ ಕಪಿಮುಷ್ಠಿಯಲ್ಲಿದೆ ಆರೋಪಿಸಿದರು

ಮತ ಡಿಲಿಟ್ ಮಾಡದ ವ್ಯಕ್ತಿ ಯಾವ ಪಕ್ಷದವರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರು ಪರವಾಗಿ ಇದ್ರು ಅನ್ನೋದಲ್ಲ, ದುಡ್ಡು ಕೊಟ್ಟರೆ ಪ್ರಜಾಪ್ರಭುತ್ವ ಖರೀದಿ ಮಾಡ್ತಾರಾ ಇವರು? ಮತದಾರರ ಪಟ್ಟಿ ನೋಡಿಕೊಳ್ಳುವುದು, ರಕ್ಷಣೆ ಮಾಡೋದು ಬಿಆರ್ ಪಾಟೀಲ್‌ ಕೆಲಸನಾ? ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಜವಾಬ್ದಾರಿ ಯಾರದು? ಗುತ್ತೇದಾರ ಇರಲಿ, ಬೇರೆ ಯಾರೇ ಇರಲಿ, ವೋಟರ್ ಲಿಸ್ಟ್ ಇಲ್ಲ ಅಂದ್ರೆ ಚುನಾವಣೆಗೆ ಹೋಗೋದು ಹೇಗೆ? ಆಳಂದ, ಮಹದೇವಪುರ ಇವೆಲ್ಲವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಒಂದು ಸಂತೋಷದ ವಿಚಾರ ಅಂದ್ರೆ ಮೊದಲೆಲ್ಲ ಮಾಹಿತಿ ಕೊಡ್ತಿದ್ದರು. ಈಗ ಅನುಮತಿ ಕೇಳುತ್ತಿದ್ದಾರೆ, ಇತಿಹಾಸದಲ್ಲಿ ಮೊದಲ ಬಾರಿಗೆ ಅನುಮತಿ ಕೇಳಿದ್ದಾರೆ. ಯಾರೂ ಕೂಡ ಮಾಡಬೇಡಿ ಅಂತ‌ ಹೇಳಿಲ್ಲ, ಅನುಮತಿ ಕೇಳಿ ಅಂತ‌ ಹೇಳಿದ್ದು. ಸರ್ಕಾರ ಸರಿ ಎನಿಸಿದ್ರೆ ಅವತ್ತು ಮಾಡಿ, ಇಲ್ಲ ಎರಡು ದಿನ ಮುಂದೂಡಿ. ಇಲ್ಲ‌ ನಾವು ಮಾಡೇ ಮಾಡ್ತಿವಿ ಅಂದ್ರೆ ಇವರಿಗೆ ಕಾನೂನು ಇಲ್ಲವೆಂದು ಅರ್ಥ. 11 ಅಂಶಗಳಲ್ಲಿ ಏನೇನು ಕೇಳಿದ್ದಾರೆ ನೋಡಲಿ. ಕೋರ್ಟ್ ಆದೇಶ ಏನು ಬರುತ್ತದೆ ನೋಡೋಣ ಎಂದರು. ಇದೇ ವೇಳೆ

ಪ್ರಿಯಾಂಕ್ ಖರ್ಗೆ ಮೇಲೆ ನಿಂದನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದೇನು ಹೊಸದಾ? ಇದರ ಬಗ್ಗೆ ಬಿಜೆಪಿಯವರಿಗೆ ಕೇಳಬೇಕಲ್ಲ. ಬಿಜೆಪಿಯವರು ನನಗೆ ಎಷ್ಟು ಖಂಡನೆ ಮಾಡ್ತಿದ್ದಾರೆ, ನಿಂದನೆ ಮಾಡಿದವರ ಬಗ್ಗೆ ಮಾತಾಡಿಲ್ಲ. ಬಿಜೆಪಿಯವರು ಯಾರಾದರೂ ಒಬ್ಬರು ಖಂಡನೆ ಮಾಡಿದ್ರಾ? ಅವರ ಕುಮ್ಮಕ್ಕಿನಿಂದಲೇ ಈ ರೀತಿ ಮಾಡ್ತಿದ್ದಾರೆ ಅಂತ‌. ಇದು ನಮ್ಮ ಸಂಸ್ಥೆ ಅಲ್ಲ ಅಂತ ಯಾರಾದರೂ ಒಬ್ಬರು ಹೇಳಿದ್ರಾ? ನಾವು ಸಾಕ್ಷಿ ಕೊಟ್ಟರು ಯಾರೊಬ್ಬರೂ ಖಂಡಿಸಲಿಲ್ಲ. ಬಿಜೆಪಿ ಅಭ್ಯರ್ಥಿ ಮಾತಾಡಿದ್ದನ್ನೂ ಖಂಡಿಸಲಿಲ್ಲ. ಕೇಳಿದ ಪ್ರಶ್ನೆಗೆ ಉತ್ತರ ಕೊಡಲಿಕ್ಕೆ ಆಗದೇ ವೈಯಕ್ತಿಕ ನಿಂದನೆ ನಡೆದಿದೆ. ಮಹಾತ್ಮ ಗಾಂಧಿ, ಅಂಬೇಡ್ಕರ್, ಸಿಜೆಐ, ಕಲ್ಬುರ್ಗಿ, ಗೌರಿ ಲಂಕೇಶ್ ಗೆ ಬಿಟ್ಟಿಲ್ಲ ಇನ್ನು ನನ್ನ ಬಿಡ್ತಾರಾ? ಎಂದು ಮರುಪ್ರಶ್ನಿಸಿದರು.

ಇಲ್ಲಿಯವರೆಗೆ ಸುಪ್ರೀಂ ಕೋರ್ಟ್ ಜಡ್ಜ್ ಗೆ ಆದ ಘಟನೆಗೆ ಯಾರು ಖಂಡಿಸಿಲ್ಲ. ಆದರೆ ಗೋ ರಕ್ಷಣೆ ಅಂತ ಓಡಾಡೋ ರೌಡಿಶೀಟರ್‌ನ ಒಳಗೆ ಹಾಕಿದ್ರೆ ಮಾತಾಡ್ತಾರೆ. ಚೀಫ್‌ ಜಸ್ಟಿಸ್ ಬಗ್ಗೆ ಮಾತಾಡಿದ್ರೆ ಮಾತಾಡಲ್ಲ. ನನ್ನ ಪರವಾಗಿ ಎಲ್ಲರೂ ಇದ್ದಾರೆ, ನಮ್ಮ ಪಕ್ಷ ನಮ್ಮ ಪರವಾಗಿದೆ ಬಿಜೆಪಿಯವರು ಹೇಳುವ ಹಾಗೆ ನಾವೇನು ಒಂಟಿಯಲ್ಲ ಎಂದು ತಿರುಗೇಟು ನೀಡಿದರು.

ಇನ್ನು ಮುಂದಿನ ಸಿಎಂ ಜಾರಕಿಹೊಳಿ ಎಂಬ ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಸ್ಟೇಜ್ ಮೇಲೆ ಭಾಷಣ ಮಾಡಿದಾರೆ. ನಾವು ನೀವು ಚೆನ್ನಾಗಿದಿವಿ ಅಂತ ಮಾತಾಡಿದ್ದಾರೆ, ಅದನ್ನು ಬೇರೆ ರೀತಿ ಬಿಂಬಿಸಿದ್ರೆ ಹೇಗೆ? ಐಡಿಯಾಲಜಿಕಲ್ ಚೆನ್ನಾಗಿದೇವೆ ಅಂತ ಹೇಳಿದಾರೆ ಅದರಲ್ಲಿ ತಪ್ಪೇನು? ನನ್ನ ವೈಯಕ್ತಿಕ ವಿಚಾರ ಹೇಳ್ತಿನಿ ನಾನು ಹಾಗಂತ ಅದೇ ವೇದವಾಕ್ಯ ಆಗುತ್ತಾ? ಅದನ್ನೇ ಬೇರೆಯಾಗಿ ವ್ಯಾಖ್ಯಾನ ಮಾಡಿದ್ರೆ ಸರಿನಾ? Whoever decide.. Whatever they decide Is ಎನ್ನುತ್ತಾ ಆಕಾಶದತ್ತ ಕೈ ತೋರಿಸಿ ಹೊರಟ‌ ಪ್ರಿಯಾಂಕ್ ಖರ್ಗೆ. ಪರೋಕ್ಷವಾಗಿ ಅಂತಿಮ ನಿರ್ಧಾರ ಹೈಕಮಾಂಡ್ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!