ಕೊರೋನಾ ಅಂಕಿ-ಸಂಖ್ಯೆಯಲ್ಲಿ ಸರ್ಕಾರ ತಪ್ಪು ಮಾಹಿತಿ ಕೊಡುತ್ತಿದೆ ಎನ್ನುವ ಸುದ್ದಿಗ ಹರಿದಾಡುತ್ತಿದೆ. ಇದೀಗ ಇದಕ್ಕೆ ಸ್ವತಃ ಆರೋಗ್ಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು, (ಏ.27) : ಕೋವಿಡ್ ವಿಷಯದಲ್ಲಿ ಸರ್ಕಾರ ಯಾವ ಅಂಕಿ ಸಂಖ್ಯೆಯನ್ನು ಮುಚ್ಚಿಡುವ ಕೆಲಸ ಮಾಡಿಲ್ಲ. ಯಾವುದಾದ್ರೂ ರಾಜ್ಯ ಪಾರದರ್ಶಕವಾಗಿ ಅಂಕಿ ಅಂಶಗಳನ್ನು ಜನರ ಮುಂದೆ ಇಡುತ್ತಿದ್ರೆ ಅದು ನಮ್ಮ ರಾಜ್ಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ವಿರೋಧ ಪಕ್ಷದ ನಾಯಕರು ಅನಗತ್ಯವಾಗಿ ಆರೋಪ ಮಾಡಬಾರದು. ಆಡಳಿತ ಪಕ್ಷ ವಿರೋಧ ಪಕ್ಷ ಅಂತ ಇರಬಾರದು. ಎಲ್ಲಾ ಒಟ್ಟಿಗೆ ಇರಬೇಕು ಒಬ್ಬ ವ್ಯಕ್ತಿ ಇದನ್ನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಬೇಕು ಎಂದರು.
undefined
ಇವತ್ತು (ಏ.27) ರಾತ್ರಿ 9 ಗಂಟೆಯಿಂದ ನಿರ್ಬಂಧ ಆರಂಭ ಆಗುತ್ತದೆ. 14 ದಿನ ನಿರ್ಬಂಧ ಮಾಡಿಕೊಂಡರೆ ಕೋವಿಡ್ ಚೈನ್ ಬ್ರೇಕ್ ಆಗುತ್ತದೆ. ಮಹಾರಾಷ್ಟ್ರದಲ್ಲಿ ಕರ್ಫ್ಯೂ ವಿಧಿಸಿದ ಮೇಲೆ ಕಡಿಮೆ ಆಗಿದೆ. ನಮ್ಮಲ್ಲಿ 16 ಸಾವಿರದ್ದಷ್ಟು ಪ್ರಕರಣ ಬರ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊರೋನಾ ವೈರಸ್ ಸ್ಪೋಟ: ರಾಜ್ಯಗಳಿಗೆ ಸುಪ್ರೀಂ ನೋಟಿಸ್!
ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ 1100 ಕಾಲ್ ಸೆಂಟರ್ ಓಪನ್ ಆಗುತ್ತದೆ. ಇದರಲ್ಲಿ ಯಾವ ವ್ಯಕ್ತಿ ಹೇಗೆ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಹೇಳುತ್ತಾರೆ ಹೋಮ್ ಐಸೋಲೇಶನ್ ಇರುವವರಿಗೆ ಮೆಡಿಕಲ್ ಅಡ್ವೈಸ್ ನೀಡುತ್ತಾರೆ .ಇದಕ್ಕೆ ಅಂದಾಜು 20 ಕೋಟಿ ಬೇಕಾಗುತ್ತದೆ ಒಟ್ಟು ಆರು ತಿಂಗಳು ಕಾರ್ಯ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು.
ಹೊಸ ಪ್ರಕರಣ ಯಾವ ರೀತಿಯಲ್ಲಿ ಇಳಿಕೆ ಆಗಬೇಕು ಎನ್ನುವ ಹಿನ್ನಲೆಯಲ್ಲಿ ಕರ್ಫ್ಯೂ ವಿಧಿಸಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ಇರಬೇಕು. ಅನಗತ್ಯವಾಗಿ ಓಡಾಡಬಾರದು . ಪಾಸಿಟಿವ್ ಬಂದವರು ಬೇರೆಯವರ ಜೊತೆಗೆ ಬೆರೆಯಬಾರದು. ಹೀಗೆ ಮಾಡಿದರೆ ನೀವು ಸೂಪರ್ ಸ್ಪ್ರೇಡರ್ ಆಗುತ್ತಿರಿ. ಇದು ಕಾನೂನಿನ ದೃಷ್ಟಿಯಿಂದ ಹಾಗೂ ಆರೋಗ್ಯ ದೃಷ್ಟಿಯಿಂದ ಸರಿ ಅಲ್ಲ. ಸೂಕ್ತ ವ್ಯವಸ್ಥೆ ಇಲ್ಲ ಅಂದರೆ ಸ್ಥಳೀಯ ಕೋವಿಡ್ ಕೇರ್ ಸೆಂಟರ್ ಗೆ ಹೋಗಿ ದಾಖಲು ಆಗಿ ಎಂದು ಸಲಹೆ ನೀಡಿದರು.
ಆಕ್ಸಿಜನ್ ಬೇಕಾದವರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ 2000 ರಿಂದ 3000 ಬೆಡ್ ವ್ಯವಸ್ಥೆ ಮಾಡುತ್ತೇವೆ. ವಿಕ್ಟೋರಿಯಾ, ವಾಜಪೇಯಿ ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆ ಬೆಡ್ ಹೆಚ್ಚಿಗೆ ಕ್ರಮ ಕೈಗೊಳ್ಳುತ್ತೇವೆ. ಐಸಿಯು ಹಾಸಿಗೆ ಸಿಗದೆ ಪರದಾಡುವುದನ್ನು ತಪ್ಪಿಸಬೇಕು. ಆರೋಗ್ಯ ವ್ಯವಸ್ಥೆ ಬಲಿಷ್ಠವಾಗಿ ಇರಬೇಕು ನಾವು ಸಮರ್ಥವಾಗಿ ಇರಬೇಕು ಎಂದು ರಾಜ್ಯದ ಎಲ್ಲಾ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.