* ರಮೇಶ್‌ಗೆ ಸಚಿವ ಸ್ಥಾನಕ್ಕೆ ಸಿಎಂ ತೀರ್ಮಾನ
* ಮುನಿರತ್ನ, ಜಾರಕಿಹೊಳಿ ಆರೋಪಗಳಿಂದ ಆದಷ್ಟು ಬೇಗ ಮುಕ್ತವಾಗಲಿದ್ದಾರೆ
* ಇಬ್ಬರೂ ಶೀಘ್ರದಲ್ಲೇ ಸಚಿವರಾಗುತ್ತಾರೆ
ಮಡಿಕೇರಿ/ಮೈಸೂರು(ಜು.02): ಶಾಸಕ ರಮೇಶ್ ಜಾರಕಿಹೊಳಿ ಶೀಘ್ರದಲ್ಲೇ ಮತ್ತೆ ಸಚಿವರಾಗಲಿದ್ದು, ಮುಖ್ಯಮಂತ್ರಿಗಳೂ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಸಚಿವ ತಿಳಿಸಿದ್ದಾರೆ.
ಮಡಿಕೇರಿ ಮತ್ತು ಮೈಸೂರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕ ಮುನಿರತ್ನ ಅವರ ಮೇಲಿನ ಪ್ರಕರಣ ಈಗಾಗಲೇ ಇತ್ಯರ್ಥವಾಗಿದ್ದು, ಶಾಸಕ ಕೂಡ ತಮ್ಮ ಮೇಲಿನ ಆರೋಪಗಳಿಂದ ಆದಷ್ಟು ಬೇಗ ಮುಕ್ತವಾಗಲಿದ್ದಾರೆ. ಇಬ್ಬರೂ ಸದ್ಯದಲ್ಲೇರಾಗುತ್ತಾರೆ ಎಂದರು.
ಜಾರಕಿಹೊಳಿಗೆ ಸಚಿವ ಸ್ಥಾನ ವಿಚಾರ: ಗಿಣಿ ತಂದುಕೊಡಿ ಶಾಸ್ತ್ರ ಹೇಳ್ತೀನಿ!
ಇದೇ ವೇಳೆ ಮಂತ್ರಿಗಿರಿ ತಪ್ಪಲು ಬಿಜೆಪಿಯ ಕೆಲ ಪ್ರಮುಖ ಕೈವಾಡವೇ ಕಾರಣ ಎಂದು ರಮೇಶ್ ಆರೋಪಿಸಿದ್ದಾರಲ್ವಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಇದು ಸತ್ಯಕ್ಕೆ ದೂರವಾಗಿದ್ದು ಅಂಥ ಯಾವುದೇ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.