ಸಿದ್ದರಾಮಯ್ಯ ಇರದಿದ್ದರೆ ಅನೇಕ ಕುಟುಂಬ ಸಾಲದಲ್ಲಿ ಬದುಕಬೇಕಿತ್ತು: ಮಹದೇವಪ್ಪ

Kannadaprabha News, Ravi Janekal |   | Kannada Prabha
Published : Nov 22, 2025, 06:44 AM IST
HC Mahadevappa on social justic:

ಸಾರಾಂಶ

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳು ಮತ್ತು ಹಿಂದುಳಿದ ವರ್ಗಗಳ ಪರವಾದ ನಿಲುವುಗಳನ್ನು ಶ್ಲಾಘಿಸಿದರು. ಸಿದ್ದರಾಮಯ್ಯನವರ ನಾಯಕತ್ವವು ಸಂವಿಧಾನದ ಆಶಯದಂತೆ ಸಮಾನತೆ ತರಲು ಸಹಕಾರಿ ಎಂದರು.

 ಮೈಸೂರು (ನ.22): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಹಣಕಾಸಿನ ಸಚಿವರಾಗದಿದ್ದರೆ ಅನೇಕರ ಕುಟುಂಬಗಳು ಕೂಲಿ ಮಾಡಿ, ಸಾಲ ಮಾಡಿ ಬದುಕಬೇಕಾಗುತ್ತಿತ್ತು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ಇರದಿದ್ದರೆ ಬಡವರು ಕತ್ತಲೆಯಲ್ಲಿ ಕಳೆಯಬೇಕಿತ್ತು:

ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡದಿದ್ದರೆ ನನ್ನ ಜೀವನ ಸಂಪೂರ್ಣ ಕತ್ತಲಲ್ಲಿ ಕಳೆಯಬೇಕಿತ್ತು ಎಂದು ಅನೇಕ ಮಂದಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೇಳುತ್ತಾರೆ. ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜಕೀಯ ತೀರ್ಮಾನವಲ್ಲ, ವೋಟು ಪಡೆಯುವ ತೀರ್ಮಾನ ಅಲ್ಲ, ಜಾತಿ, ಧರ್ಮದ ತೀರ್ಮಾನವೂ ಅಲ್ಲ. ಸಂವಿಧಾನದ ಆಶಯದಂತೆ ಸಮಾನತೆ, ಸಮಾನ ಅವಕಾಶದ ಪೂರಕವಾದ ನಿರ್ಧಾರ. ಅದರ ಮೂಲಕ ಸಮೃದ್ಧ ನಾಡು ಕಟ್ಟುವ, ತುಳಿತಕ್ಕೆ ಒಳಗಾದ ಜನರಿಗೆ ಅವಕಾಶ ನೀಡಿ, ಸ್ವಾಭಿಮಾನದಿಂದ ಬದುಕುವ ಅವಕಾಶವನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದರು.

ಹಳೇ ವಿದ್ಯಾರ್ಥಿಗಳು ಒಳ್ಳೆ ಒಳ್ಳೆಯ ಹುದ್ದೆಗೆ ಹೋಗಿದ್ದೀರಿ. ನೀವು ಸಮಾಜದ ಪರಿವರ್ತನೆಗೆ ಕಾರಣರಾಗಬೇಕು. ಸಿದ್ದರಾಮಯ್ಯ ಅವರ ನಾಯಕತ್ವ ಈ ರಾಜ್ಯಕ್ಕೆ ಮತ್ತು ದೇಶಕ್ಕೆ ಅಗತ್ಯ ಅನಿವಾರ್ಯ. ಅದನ್ನು ಗಟ್ಟಿಗೊಳಿಸುವ ಬಲಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಜಾಗೃತಿ ಮತ್ತು ಅರಿವು ಮೂಡಿಸುತ್ತ, ಬಹಿಷ್ಕೃತ ಯುಗದ ಸಭೆ ಕರೆದರು. ಯಾವ ಜನರಿಗೆ ಅವಕಾಶ ಸಿಗಬೇಕೋ, ಶೋಷಣೆಗೆ ಒಳಗಾಗಿದ್ದರೋ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕು ಪಡೆಯಬೇಕು ಅಷ್ಟೆ ಎಂದರು.

ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗದವರ ಪರವಾಗಿ ಕೆಲಸ ಮಾಡಿದರು. ಯಾವ ಜನ ಸಾಲ ಮಾಡಿ ಸಾಲದ ಬಡ್ಡಿಗೆ ದುಡಿಯುತ್ತಿದ್ದ ಕಾಲದಲ್ಲಿ ಅವರಿಗೆ ಋಣಮುಕ್ತ ಕಾಯಿದೆ. ಉಳುವವನೇ ಭೂಮಿ ಒಡೆಯ ಮುಂತಾದ ಕಾಯ್ದೆ ಜಾರಿಗೊಳಿಸಿದರು. ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸಿದರು. ಅವರು ಗಟ್ಟಿ ನಾಯಕತ್ವವನ್ನು ಕೊಟ್ಟರು. ಒಬ್ಬ ವ್ಯಕ್ತಿಗೆ ಜಮೀನು ಇದೆ ಎಂದರೆ ಸಾಮಾಜಿಕ ಸ್ಥಾನಮಾನ ಸಿಗುತ್ತದೆ ಎಂಬ ಕಾರಣಕ್ಕೆ ಭೂಮಿ ದೊರಕುವಂತೆ ಮಾಡಿದರು. ಹಾವನೂರು ಆಯೋಗ ಜಾರಿಗೊಳಿಸಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದ್ದಾಗಿ ಅವರು ಹೇಳಿದರು.

ಸಿದ್ದರಾಮಯ್ಯ ಹಿಂದೂಳಿದವರ ಪರ:

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಜನರ ಬದುಕಿನ ಸ್ಥಿತಿಗತಿಗೆ ಅನುಗುಣವಾಗಿ ಮಾಹಿತಿ ಸಂಗ್ರಹಿಸಬೇಕು. ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ನೂರಾರು ಕೋಟಿ ಕೊಟ್ಟಿದ್ದಾರೆ. ಹಿಂದುಳಿದವರ ಸಮೀಕ್ಷೆಗೆ ಎಷ್ಟು ಸವಾಲು, ವಿರೋಧ ಎದುರಿಸಬೇಕಾಯಿತು ಎಂಬುದು ನಿಮಗೆ ಗೊತ್ತಿದೆ. ಸಂವಿಧಾನ ಬದ್ಧ ಅವಕಾಶ ಕೊಡಲು ಎಷ್ಟೊಂದು ವಿರೋಧವನ್ನು ಅವರು ಎದುರಿಸಬೇಕಾಯಿತು ಎಂಬುದು ನಿಮಗೆ ಗೊತ್ತಿರಬೇಕು. ಆದರೆ ಸಿದ್ದರಾಮಯ್ಯ ಎಂದಿಗೂ ಧಕ್ಕುವುದಿಲ್ಲ ಎಂದು ಅವರು ಶ್ಲಾಘಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!