ಸವದಿ ಏಕೆ ದಿಲ್ಲಿಗೆ ಹೋಗಿದ್ದರೋ ಗೊತ್ತಿಲ್ಲ: ಸಿ.ಟಿ.ರವಿ

By Suvarna News  |  First Published Jul 29, 2020, 2:15 PM IST

ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಹೊರಗೆ ಕಳಿಸಬೇಕು ಎಂಬುದನ್ನ ಸಿಎಂ ನಿರ್ಧಾರ ಮಾಡುತ್ತಾರೆ| ಕೆಲವರು ನಿರೀಕ್ಷೆ ಇಟ್ಟು ಪಕ್ಷಕ್ಕೆ ಸೇರಿದ್ದಾರೆ. ಅವರಿಗೂ ಅವಕಾಶ ಕೊಡಬೇಕು. ಇದೆಲ್ಲದರ ಬಗ್ಗೆ ಅಂತಿಮವಾಗಿ ಸಿಎಂ ಯಡಿಯೂರಪ್ಪ ಅವರೇ ನಿರ್ಧಾರ ಮಾಡುತ್ತಾರೆ: ಸಿ.ಟಿ. ರವಿ|


ಬೆಂಗಳೂರು(ಜು.29):  ಕನ್ನಡ ಚಿತ್ರರಂಗದ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಇಂದು(ಬುಧವಾರ) ಸಭೆ ಮಾಡಿದ್ದೇವೆ. ನಟ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಅನೇಕ ನಾಯಕ ನಟರ ಜೊತೆ ಚರ್ಚೆ ನಡೆಸಿದ್ದೇವೆ. ಉದ್ಯಮವನ್ನೇ ಅವಲಂಬಿಸಿರುವ ಕಾರ್ಮಿಕರ ನೆರವಿಗೆ ಸರ್ಕಾರ ಬರಬೇಕು ಎಂಬ ಮನವಿ ಮಾಡಿದ್ದಾರೆ. ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿತ್ರಮಂದಿರ ಹಾಗೂ ಜಿಮ್‌ಗಳನ್ನು ರೀ ಓಪನ್ ಮಾಡಬೇಕಾದರೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ನಾಟಕ ರಂಗಕ್ಕೆ ಸಂಬಂಧಪಟ್ಟವರೂ ಕೂಡ ಭೇಟಿ ಮಾಡಿ ಸಂಕಷ್ಟಗಳನ್ನ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. 

Tap to resize

Latest Videos

ಕೇಂದ್ರ ನಾಯಕರನ್ನ ಭೇಟಿಯಾದ ಡಿಸಿಎಂ: ದಿಲ್ಲಿಯಿಂದಲೇ ಸವದಿ ಮಾತು..!

ಸಂಪುಟ ಪುನರ್‌ರಚನೆ ಸಿಎಂ ಪರಮಾಧಿಕಾರವಾಗಿದೆ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರನ್ನು ಹೊರಗೆ ಕಳಿಸಬೇಕು ಎಂಬುದನ್ನ ಸಿಎಂ ನಿರ್ಧಾರ ಮಾಡುತ್ತಾರೆ. ಕೆಲವರು ನಿರೀಕ್ಷೆ ಇಟ್ಟು ಪಕ್ಷಕ್ಕೆ ಸೇರಿದ್ದಾರೆ. ಅವರಿಗೂ ಅವಕಾಶ ಕೊಡಬೇಕು. ಇದೆಲ್ಲದರ ಬಗ್ಗೆ ಅಂತಿಮವಾಗಿ ಸಿಎಂ ಯಡಿಯೂರಪ್ಪ ಅವರೇ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. 

ಇನ್ನು ಡಿಸಿಎಂ ಲಕ್ಷ್ಮಣ ಸವದಿ ದೆಹಲಿಗೆ ಹೋಗಿದ್ದರ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಕೆಲವೊಮ್ಮೆ ಕೆಲವು ಘಟನೆಗಳು ಕಾಕತಾಳಿಯವಾಗಿ ಆಗುತ್ತವೆ. ಅವರು ದೆಹಲಿಗೆ ಯಾಕೆ ಹೋಗಿದ್ದರು ಎಂಬುದರ ಬಗ್ಗೆ ಗೊತ್ತಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

click me!