ಮುಡಾ ದಾಖಲೆ ತಿದ್ದುವಂತಹ ನೀಚ ಕೆಲಸ ಮಾಡಿಲ್ಲ: ಸಚಿವ ಬೈರತಿ ಸುರೇಶ್

By Kannadaprabha NewsFirst Published Aug 22, 2024, 10:19 AM IST
Highlights

ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲ. ಹಾಗಾಗಿ ಅಷ್ಟೇ ವಿಸ್ತೀರ್ಣದ ಜಮೀನು ನೀಡಿ, ಇಲ್ಲವೇ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸಿದ್ದರಾಮಯ್ಯ ಅವರ ಪತ್ನಿ ಸ್ಪಷ್ಟವಾಗಿ ಕೇಳಿದ್ದಾರೆ. ವರ್ಷ ನಮೂದಿಸುವುದರಲ್ಲಿ ತಪ್ಪಾಗಿರಬಹುದು, ವಿಜಯನಗರ ಲೇಔಟ್‌ನಲ್ಲಿ ನೀಡಿ ಎಂದು ಎಲ್ಲಿ ಬರೆದಿದ್ದಾರೆ. ಮಾಧ್ಯಮಗಳು ಎಲ್ಲವನ್ನು ನೋಡಿ ಹಾಕಬೇಕು ಎಂದ ಸಚಿವ ಬೈರತಿ ಸುರೇಶ್

ಬೆಂಗಳೂರು(ಆ.22):  ಮುಡಾ ಪ್ರಕರಣದಲ್ಲಿ ದಾಖಲೆ ತಿದ್ದುವಂತಹ ನೀಚ ಕೃತ್ಯವನ್ನು ಯಾರೂ ಮಾಡಿಲ್ಲ. ಅಂತಹ ಪರಿಸ್ಥಿತಿ ಬಂದಿಲ್ಲ. ಈ ಬಗ್ಗೆ ಯಾವುದೇ ದಾಖಲೆ ಇದ್ದರೆ ಎಚ್.ಡಿ. ಕುಮಾರಸ್ವಾಮಿ ಕೋರ್ಟ್‌ಗೆ ಸಲ್ಲಿಸಲಿ ಎಂದು ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸಿದ್ದಾರೆ. 

ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲ. ಹಾಗಾಗಿ ಅಷ್ಟೇ ವಿಸ್ತೀರ್ಣದ ಜಮೀನು ನೀಡಿ, ಇಲ್ಲವೇ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಸಿದ್ದರಾಮಯ್ಯ ಅವರ ಪತ್ನಿ ಸ್ಪಷ್ಟವಾಗಿ ಕೇಳಿದ್ದಾರೆ. ವರ್ಷ ನಮೂದಿಸುವುದರಲ್ಲಿ ತಪ್ಪಾಗಿರಬಹುದು, ವಿಜಯನಗರ ಲೇಔಟ್‌ನಲ್ಲಿ ನೀಡಿ ಎಂದು ಎಲ್ಲಿ ಬರೆದಿದ್ದಾರೆ. ಮಾಧ್ಯಮಗಳು ಎಲ್ಲವನ್ನು ನೋಡಿ ಹಾಕಬೇಕು ಎಂದರು. 

Latest Videos

ಮುಡಾ ದಾಖಲೆ ಕಾಪ್ಟರ್‌ನಲ್ಲಿ ತಂದು ತಿದ್ದಿದ್ದಾರೆ: ಕೇಂದ್ರ ಕೈಗಾರಿಕಾ ಸಚಿವ ಕುಮಾರಸ್ವಾಮಿ

ಪ್ರಕರಣದ ಸಂಬಂಧ ಕುಮಾರಸ್ವಾಮಿ ಅವರ ಬಳಿ ಏನೇ ದಾಖಲೆ ಇದ್ದರೂ ಅದನ್ನು ಕೋರ್ಟ್‌ಗೆ ಸಲ್ಲಿಸಲಿ. ಅದನ್ನು ಕೋರ್ಟ್ ಪರಿಗಣಿಸುವುದಿಲ್ಲವೇ? ನ್ಯಾಯಾಧೀಶರೇ ಬಗೆಹರಿಸುತ್ತೇನೆ ಖುದ್ದು ಎಂದಿದ್ದಾರೆ. ಅಲ್ಲಿವರೆಗೆ ಕಾಯಲು ಏನಾಗಿದೆ ಎಂದು ಅವರು ಪ್ರಶ್ನಿಸಿದರು.

click me!