Latest Videos

ರೈತರ ಆದಾಯ ದ್ವಿಗುಣಕ್ಕೆ ಸಚಿವ ಬಿ.ಸಿ. ಪಾಟೀಲ್‌ ಸೂಚನೆ

By Kannadaprabha NewsFirst Published Jun 17, 2022, 4:00 AM IST
Highlights

*    ಕೃಷಿ ವಿವಿಗಳು ಕೇವಲ ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರೆ ಸಾಲದು
*   ಸಮಸ್ಯೆಗಳಿಗೆ ವೈದ್ಯರ ಮಾದರಿಯಲ್ಲಿ ಅವುಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು
*   ಆಗಬೇಕಿರುವ ಸುಧಾರಣಾ ಕ್ರಮಗಳಿಗೆ ರಾಜ್ಯದ ಪ್ರಗತಿಪರ ರೈತರ ನೆರವನ್ನೂ ಪಡೆದುಕೊಳ್ಳಬೇಕು

ಬೆಂಗಳೂರು(ಜೂ.17): ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ವಿಶ್ವವಿದ್ಯಾಲಯಗಳು, ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ಶ್ರಮಿಸಬೇಕು, ಈ ನಿಟ್ಟಿನಲ್ಲಿ ಆಗಬೇಕಿರುವ ಸುಧಾರಣಾ ಕ್ರಮಗಳಿಗೆ ರಾಜ್ಯದ ಪ್ರಗತಿಪರ ರೈತರ ನೆರವನ್ನೂ ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳೊಂದಿಗೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೃಷಿ ವಿವಿಗಳು ಕೇವಲ ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರೆ ಸಾಲದು. ಕುಲಪತಿ ಸೇರಿದಂತೆ ವಿವಿಗಳ ಎಲ್ಲ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ಕರೆದುಕೊಂಡು ರೈತರ ಹೊಲಗಳಿಗೆ ಹೋಗಬೇಕು. ಕೃಷಿ ಕ್ಷೇತ್ರದ ನೈಜ ಸವಾಲುಗಳೇನು, ರೈತರು ಎದುರಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ಮಕ್ಕಳಿಗೆ ಮನವರಿಕೆ ಕೊಟ್ಟು ವೈದ್ಯರ ಮಾದರಿಯಲ್ಲಿ ಅವುಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು ಎಂದರು.

Chitradurga: ಕಾಂಗ್ರೆಸ್ ಪ್ರತಿಭಟನೆ ಅವರ ಮೂರ್ಖತನದ ಪರಮಾವಧಿ: ಸಚಿವ ಬಿ.ಸಿ ಪಾಟೀಲ್

ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಸಿ.ಕಳಸದ, ಕೃಷಿ ಆಯುಕ್ತ ಶರತ್‌, ನಿರ್ದೇಶಕಿ ನಂದಿನಿ ಕುಮಾರಿ ಮತ್ತಿತರರು ಉಪಸ್ಥಿರಿದ್ದರು.
 

click me!