ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ: ಸಚಿವ ಬಿಸಿ ಪಾಟೀಲ್ ಮಾಹಿತಿ

By Suvarna News  |  First Published Jul 16, 2021, 9:26 PM IST

* ವಿಕಾಸಸೌಧದಲ್ಲಿ ಇಂದು (ಶುಕ್ರವಾರ) ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಸಿ ಪಾಟೀಲ್
* ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ ಮುಂದುವರಿಕೆ
* 5 ಹೆಕ್ಟೇರ್ ಜಮೀನು ಹೊಂದಿದ ರೈತರಿಗೆ ಶೇಕಡ 45 ರಷ್ಟು ಸಬ್ಸಿಡಿ


ಬೆಂಗಳೂರು, (ಜು.16):  ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಸಬ್ಸಿಡಿ ಮುಂದುವರೆಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು (ಶುಕ್ರವಾರ) ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೈಕ್ರೋ ಇರಿಗೇಷನ್ ಸಬ್ಸಿಡಿಯಲ್ಲಿ ಗೊಂದಲವಾಗಿತ್ತು. ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಅದೇ ಮಾದರಿಯಲ್ಲಿ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಈ ಹಿಂದೆ ಎಲ್ಲಾ ವರ್ಗದ ಎರಡು ಹೆಕ್ಟೇರ್ ಜಮೀನು ಹೊಂದಿದ ರೈತರಿಗೆ ಶೇಕಡ 90 ರಷ್ಟು, 5 ಹೆಕ್ಟೇರ್ ಜಮೀನು ಹೊಂದಿದ ರೈತರಿಗೆ ಶೇಕಡ 45 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶದ ಅನ್ವಯ ಹಿಂದಿನ ಮಾದರಿಯಲ್ಲಿಯೇ ಸಬ್ಸಿಡಿ ಮುಂದುವರೆಸಲಾಗುವುದು. 5 ಹೆಕ್ಟೇರ್ ಮೇಲ್ಪಟ್ಟ ರೈತರಿಗೆ ಸಬ್ಸಿಡಿ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ಇನ್ನು ರೈತರ ಮಕ್ಕಳಿಗೆ ಕೃಷಿ ವಿವಿಯಲ್ಲಿ 50% ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ವರ್ಷದಿಂದಲೇ 50%% ಮೀಸಲಾತಿ ಸಿಗಲಿದೆ ಎಂದರು.

click me!