* ಬಕ್ರೀದ್ ಹಬ್ಬದ ಆಚರಣೆಗೆ ಗೈಡ್ ಲೈನ್ಸ್
* ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ
* ಸಾಮೂಹಿಕ ನಮಾಜ್ ಗೆ ನಿಷೇಧ
ಬೆಂಗಳೂರು, (ಜುಲೈ.16): ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಎಲ್ಲಾ ಧರ್ಮಗಳ ಹಬ್ಬಗಳ ಅದ್ಧೂರಿ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.
ಅದರಂತೆ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬ ಆಚರಣೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
undefined
ಗೈಡ್‌ಲೈನ್ಸ್ ಪ್ರಕಾರವೇ ಬಕ್ರೀದ್ ಹಬ್ಬ ಆಚರಣೆ ಮಾಡಬೇಕೆಂದು ರಾಜ್ಯ ಸರ್ಕಾರ ಇಂದು (ಶುಕ್ರವಾರ) ಸುತ್ತೋಲೆ ಹೊರಡಿಸಿದೆ. ಇನ್ನು ಬಕ್ರೀದ್ ಹೇಗೆ ಆಚರಿಸಬೇಕು ಎನ್ನುವ ಮಾರ್ಗಸೂಚಿ ಈ ಕೆಳಗಿನಂತಿವೆ.
ಬಕ್ರೀದ್ ಹಬ್ಬದ ಆಚರಣೆಗೆ ಗೈಡ್ ಲೈನ್ಸ್
* ಈದ್ಗಾಗಳಲ್ಲಿ ಸಾಮೂಹಿಕ ನಮಾಜ್ ಗೆ ನಿಷೇಧ
* ಮಸೀದಿಗಳಲ್ಲಿ 50 ಜನರಿಗೆ ಮಾತ್ರ ನಮಾಜ್ ಗೆ ಅವಕಾಶ
* 65 ವರ್ಷ ಮೇಲ್ಪಟ್ಟವರು 10 ವರ್ಷ ಕೆಳಗಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡುವುದು
* ನಮಾಜ್ ಮಾಡುವವರ ಮಧ್ಯೆ 6 ಅಡಿ ಅಂತರ ಇರಬೇಕು
* ಮಸೀದಿ ಪ್ರವೇಶಿಸುವವರಿಗೆ ದೇಹದ ತಾಪಮಾನ ಚೆಕ್ ಮಾಡುವುದು
* ಮನೆಯಿಂದಲೇ ಮುಸಲ್ಲಾವನ್ನು ತರಬೇಕು
* ಹಸ್ತಲಾಘವ ಹಾಗೂ ಆಲಿಂಗನ ಮಾಡುವಂತಿಲ್ಲ
* ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು