Middle East war impact: LPG ದರ ಏರಿಕೆ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಶಾಕ್!

Kannadaprabha News   | Kannada Prabha
Published : Mar 13, 2026, 06:35 AM IST
After LPG Hike Cooking Oil Prices Set to Rise Impact on Households

ಸಾರಾಂಶ

Middle East war impact ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರದಲ್ಲಿ ಗಣನೀಯ ಏರಿಕೆಯಾಗಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಲೀಟರ್‌ಗೆ ₹7 ರಿಂದ ₹11 ರಷ್ಟು ಹೆಚ್ಚಳವಾಗಿದ್ದು, ಚಿಲ್ಲರೆ ವ್ಯಾಪಾರಿಗಳಿಗೆ ಬೇಡಿಕೆಯಷ್ಟು ಎಣ್ಣೆ ಪೂರೈಕೆಯಾಗುತ್ತಿಲ್ಲ.

 ಬೆಂಗಳೂರು (ಮಾ.13): ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬೆನ್ನಲ್ಲೇ ಜನತೆ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಶಾಕ್‌ ಅನುಭವಿಸುವಂತಾಗಿದೆ.

ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ಜಂಟಿ ಯುದ್ಧಕ್ಕೆ ಮುಂದಾದ ಬೆನ್ನಲ್ಲೇ ಅಡುಗೆ ಎಣ್ಣೆ ದರವೂ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಮಾರ್ಚ್‌ ಮೊದಲ ವಾರದ ದರಕ್ಕೂ ಗುರುವಾರದ ದರಕ್ಕೂ ಹೋಲಿಸಿದರೆ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ ಆಧಾರದಲ್ಲಿ ಲೀಟರ್‌ಗೆ 7 ರಿಂದ 11 ರುಪಾಯಿಯವರೆಗೂ ಹೆಚ್ಚಳವಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಯಶವಂತಪುರದ ಭಾಗ್ಯಲಕ್ಷ್ಮೀ ಟ್ರೇಡಿಂಗ್‌ ಕಾರ್ಪೊರೇಷನ್‌ನ ಶಿವಶಂಕರ್‌, ‘ಒಂದು ಲೀಟರ್‌ ಸನ್‌ಫ್ಲವರ್‌ ಆಯಿಲ್‌ಗೆ ಮಾರ್ಚ್‌ ಮೊದಲ ವಾರದಲ್ಲಿ ₹165 ಇತ್ತು. ಮಾ.4ರಂದು ₹167 ಇದ್ದದ್ದು ಮಾ.12 ರಂದು ₹172ಕ್ಕೆ ಏರಿಕೆಯಾಗಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ’ ಎಂದು ಸ್ಪಷ್ಟಪಡಿಸಿದರು.

ಯಶವಂತಪುರದ ಪದ್ಮಶ್ರೀ ಟ್ರೇಡರ್ಸ್‌ನ ನಿಖಿಲ್‌ ಮಾತನಾಡಿ, ‘ಕಳೆದ 10 ದಿನದಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕೆ ಮಧ್ಯಪ್ರಾಚ್ಯ ಯುದ್ಧವು ಪ್ರಮುಖ ಕಾರಣವಾಗಿದೆ. ಮಾರ್ಚ್‌ ಮೊದಲ ವಾರದಲ್ಲಿ ಒಂದು ಲೀಟರ್‌ ಗೋಲ್ಡ್‌ ವಿನ್ನರ್‌ ಹೋಲ್‌ಸೇಲ್‌ ದರ ₹159 ಇದ್ದದ್ದು ಗುರುವಾರ ₹166 ಆಗಿದೆ’ ಎಂದು ವಿವರಿಸಿದರು.

ಆನ್‌ಲೈನ್‌ ಆ್ಯಪ್‌ನಲ್ಲಿ ದುಬಾರಿ:

‘ಅದೇ ರೀತಿ ಸನ್‌ಫ್ಲವರ್‌ ಆಯಿಲ್‌ ಲೀಟರ್‌ಗೆ ₹160 ನಿಂದ ₹171ಕ್ಕೆ, ಫ್ರೀಡಂ ಆಯಿಲ್‌ ₹158 ರಿಂದ ₹166ಕ್ಕೆ ಬಂದು ಮುಟ್ಟಿದೆ ಎಂದು ತಿಳಿಸಿದರು. ಮತ್ತೊಂದೆಡೆ, ಹೋಲ್‌ಸೇಲ್‌ ದರದಲ್ಲಿ ಇಷ್ಟೊಂದು ವ್ಯತ್ಯಾಸವಾಗಿದ್ದರೂ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ಗಳಲ್ಲಿ ಮಾತ್ರ ಲೀಟರ್‌ಗೆ ₹2 ರಿಂದ ₹4 ಅಧಿಕವಾಗಿದೆ.

ಆದರೆ, ಚಿಲ್ಲರೆ ಮಾರಾಟಗಾರರು ಹೇಳುವುದೇ ಬೇರೆ. ‘ನಮಗೆ ಬೇಡಿಕೆಯಷ್ಟು ಅಡುಗೆ ಎಣ್ಣೆಯನ್ನು ಹೋಲ್‌ಸೇಲ್‌ ಮಾರಾಟಗಾರರು ಪೂರೈಸುತ್ತಿಲ್ಲ. ಒಂದು ವಾರದಿಂದ ಸರಿಯಾಗಿ ಅಡುಗೆ ಎಣ್ಣೆ ಸರಬರಾಜಾಗುತ್ತಿಲ್ಲ. 100 ರಿಂದ 200 ಬಾಕ್ಸ್‌ ಬುಕ್‌ ಮಾಡಿದರೆ 20 ರಿಂದ 50 ಬಾಕ್ಸ್‌ ಕಳಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: Middle East war impact - LPG ದರ ಏರಿಕೆ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಶಾಕ್!
ಕೆಪಿಎಸ್ಸಿಗೆ ಎಚ್ಚರವಾಯ್ತು! ಪರೀಕ್ಷಾ ಅಕ್ರಮ ಆರೋಪ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಸಂದರ್ಶನ ದಿನಾಂಕ ರದ್ದು!