
ಬೆಳಗಾವಿ (ಮಾ.26): ಭಾಷಾ ಸಾಮರಸ್ಯ ಕದಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಶುಭಂ ಶೆಳೆಯನ್ನು ಬಂಧಿಸಿ ಇನ್ನೂ 2 ದಿನ ಕಳೆದಿಲ್ಲ. ಆದರೆ, ಎಂಇಎಸ್ ಪುಂಡರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಕುರಿತಾಗಿ ಅವಹೇಳನಕಾರಿ ಪದ ಪ್ರಯೋಗಿಸಿ ಪೋಸ್ಟ್ ಹಾಕಿ ಉದ್ದಟತನ ಮೆರೆದಿದ್ದಾರೆ. ಶೆಳೆ ಬಂಧನ ಮಾಡಿರುವುದನ್ನು ಖಂಡಿಸಿ ಎಂಇಎಸ್‌ನ ಯುವ ಸಮಿತಿ ಸೀಮಾಭಾಗ್ ಪೇಜ್‌ನಲ್ಲಿ ಪೊಲೀಸರ ಅವಹೇಳನ ಮಾಡಿ, ಸಂದೇಶವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಶುಭಂ ಶೆಳ್ಮೆಯನ್ನು ರಾಜ್ಯ ಪೊಲೀಸರು ಬಂಧಿಸಿರುವ ಫೋಟೊವನ್ನು ಹಾಕಿ, 'ಸಮಿತಿಯ ಸಿಂಹ ಏಕಾಂಗಿಯಾಗಿ ಹೋರಾಡುತ್ತಿದೆ. ಸಾವಿರಾರು ನಾಯಿಗಳು ಸಿಂಹವನ್ನು ಮುಗಿಸಲು ಬೆನ್ನತ್ತಿವೆ. ಆದರೇ ಸಿಂಹ ಮುಗಿಸಲು ನಾಯಿಗಳಿಂದ ಸಾಧ್ಯವಾಗುತ್ತಿಲ್ಲ' ಎಂದು ವಿವಾದಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿವಾದಾತ್ಮಕ ಪೋಸ್ಟ್ ಹಾಕಿದರೆ ಕ್ರಮ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು. ಈ ಸಂಬಂಧ ಮಾತನಾಡಿ, ಭಾಷೆ, ಗಡಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ನೀಡಿದ್ದ ಎಂಇಎಸ್ ನಾಯಕ ಶುಭಂ ಪೇಳ್ವೆ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ, ಬಂಧಿಸಲಾಗಿದೆ. ಈತನ ಮೇಲೆ ನಗರದಲ್ಲಿ 12 ಪ್ರಕರಣಗಳು ದಾಖಲಾಗಿವೆ ಎಂದರು. ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ದೊಂಬಿ ಕ್ರಮ ಸೃಷ್ಟಿಸಲು ಯತ್ನಿಸಿದರೆ ಕಠಿಣ ಕೈಗೊಳ್ಳಲಾಗುವುದು ಎಂದರು.
ಎಂಇಎಸ್ ಸಂಘಟನೆ ನಿಷೇಧಿಸಿ: ಮರಾಠಿಗರ ದೌರ್ಜನ್ಯ ಖಂಡಿಸಿ ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ಯಾವುದೇ ಬೆಂಬಲ ದೊರೆಯಲಿಲ್ಲ. ಎಂದಿನಂತೆ ಅಂಗಡಿ-ಮುಂಗಟ್ಟು ತೆರದಿದ್ದರೆ, ಜನಜೀವನ ಸಾಮಾನ್ಯವಾಗಿತ್ತು. ಚಿತ್ರಮಂದಿರಗಳು ಸಹ ಚಿತ್ರ ಪ್ರದರ್ಶನ ಮಾಡಿದವು. ವಿವಿಧ ಕನ್ನಡಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯದ ವಿರುದ್ಧ ಪದೇಪದೇ ತಗಾದೆ ತೆಗೆಯುವ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುವ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.
ಸಂವಿಧಾನ ಬದಲು ಹೇಳಿಕೆ: ಡಿ.ಕೆ.ಶಿವಕುಮಾರ್ ವಿರುದ್ಧ ಬೀದಿಗಿಳಿದ ಬಿಜೆಪಿ, ರಾಜ್ಯವ್ಯಾಪಿ ಪ್ರತಿಭಟನೆ
ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳು ನಂತರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತುಂಗಭದ್ರಾ ಜಲಾಶಯದ ಹೂಳೆತ್ತುವುದು, ಕನಕಗಿರಿ ತಾಲೂಕಿನ ನವಲಿ ಸಮಾನಾಂತರ ಜಲಾಶಯ ಕಾಮಗಾರಿ ಕೈಗೆತ್ತಿಕೊಳ್ಳುವುದು, ಅಂಜನಾದ್ರಿ ಬೆಟ್ಟವನ್ನು ತಿರುಪತಿ ಮಾದರಿ ಅಭಿವೃದ್ಧಿಪಡಿಸಿವುದು, ಕೊಪ್ಪಳ ನಗರದಲ್ಲಿ ಸ್ಟೀಲ್ ಕಾರ್ಖಾನೆ ಅನುಮತಿ ರದ್ದುಪಡಿಸುವುದು, ಕೃಷ್ಣಾ ಬಿ ಸ್ಕೀಂ, ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು, ರಾಯಚೂರಿಗೆ ಏಮ್ಸ್ ಆಸ್ಪತ್ರೆ, ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಠಿವಾಣ ಹಾಕುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ