ಎಂಇಎಸ್‌ ಪುಂಡಾಟ : ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ

Contributor Asianet   | Asianet News
Published : Dec 20, 2021, 08:38 AM ISTUpdated : Dec 20, 2021, 09:59 AM IST
ಎಂಇಎಸ್‌ ಪುಂಡಾಟ : ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ

ಸಾರಾಂಶ

 ಎಂಇಎಸ್‌ ಪುಂಡಾಟ : ರಾಜ್ಯ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ಪುಣೆಗೆ ಹೋಗಿದ್ದ ಸುರಪುರದ ಬಸ್‌ಗೆ ಕಲ್ಲು ತೂರಿದ ದುಷ್ಕರ್ಮಿಗಳು  

ಹುಣಸಗಿ (ಯಾದಗಿರಿ) (ಡಿ.20):  ಕನ್ನಡ (Kannada) ಧ್ವಜ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಮಾಡಿ ವಿಕೃತಿ ಮೆರೆದ ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡಾಟಿಕೆ ಮೀತಿಮೀರಿದ್ದು, ಇಲ್ಲಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳಿದ್ದ ರಾಜ್ಯ ಸಾರಿಗೆ ಬಸ್‌ ಗಳ (Bus)  ಮೇಲೆ ಕಲ್ಲು ತೂರಾಟ ನಡೆಸಿ, ಪುಂಡಾಟಿಕೆ ಮುಂದುವರೆಸಿದೆ. ಸುರಪುರ ಡಿಪೋಗೆ ಸೇರಿದ ಎನ್ನಲಾದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ಮಹಾರಾಷ್ಟ್ರ ಪುಣೆಗೆ ಹೋಗಿದ್ದ ಸಂದರ್ಭದಲ್ಲಿ, ಭಾನುವಾರ ಮುಂಜಾನೆ ಬಸ್‌ ನಿಲ್ದಾಣದಲ್ಲಿ ಸಾರಿಗೆ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆಯೆಲ್ಲದೆ, ಚಾಲಕ ಹಾಗೂ ನಿರ್ವಾಹಕರಿಗೆ ಜೀವಬೇದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

"

ಈ ಕುರಿತು ಮಹಾರಾಷ್ಟ್ರದ ಪುಣೆಯ ಖಡ್ಕಿ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೀವ ಬೆದರಿಕೆಯಿಂದ ಚಾಲಕ ಸುರಪುರಕ್ಕೆ ಬಸ್‌ ತೆಗೆದುಕೊಂಡು ಬರಲು ಆತಂಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ರದ್ದುಗೊಳಿಸಿ :  ಕರ್ನಾಟಕ (Karnataka)  ಧ್ವಜಕ್ಕೆ ಅವಮಾನಗೊಳಿಸಿದ ಶಿವಸೇನೆ ಮತ್ತು ಎಂಇಎಸ್‌ (MES) ಪುಂಡರಿಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಂಡು ಮತ್ತು ಕನ್ನಡಿಗರ ಮೇಲೆ ಹಾಕಿದ ಕೊಲೆ ಪ್ರಯತ್ನ ಪ್ರಕರಣವನ್ನು ದೋಷಮುಕ್ತಗೊಳಿಸುವಂತೆ ಒತ್ತಾಯಿಸಿ ನಗರದ ಗಂಜ್‌ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡ ಹೋರಾಟಗಾರರು ಮಹಾ ಸರ್ಕಾರದ ವಿರುದ್ಧ ಕಿಡಿಕಾರಿ, ಕರ್ನಾಟಕ (Karnataka) ರಾಜ್ಯದ ಏಳುಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಬರುವ ನಿಟ್ಟಿನಲ್ಲಿ ಮಹಾರಾಷ್ಟ್ರ (Maharashtra) ಶಿವಸೇನೆ, ಮತ್ತು ಎಂ.ಇ.ಎಸ್‌. ಸಂಘಟನೆಗಳು ಮಹಾರಾಷ್ಟ್ರದ ಕೋಲ್ಹಾಪೂರ ಜಿಲ್ಲೆಯಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಮೂಲಕ ನಾಡದ್ರೋಹದ ಕೃತ್ಯ ಎಸಗಿದ್ದಾರೆ, ಇಂತಹ ಸಂಘಟನೆಗಳಿಗೆ ಮಹಾರಾಷ್ಟ್ರ ಸರ್ಕಾರ ಬೆಂಬಲಿಸುತ್ತಿದ್ದು, ಕನ್ನಡಿಗರ ಭಾವನೆಗಳಿಗೆ ಧಕ್ಕೆ ಬರುವ ಕೃತ್ಯಗಳಿಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿ ಕಾರಿದರು.

ಮಹಾರಾಷ್ಟ್ರದ ಶಿವಸೇನೆ ಎಂ.ಇ.ಎಸ್‌. (MES) ಸಂಘಟನೆಗಳು ರದ್ದತಿಗೆ ಹಾಗೂ ಶಿವಸೇನೆ ಮತ್ತು ಎಂ.ಇ.ಎಸ್‌. ಸಂಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಲು ಮನವಿ ಮಾಡುತ್ತೇವೆ. ಈ ಕೃತ್ಯ ಮಾತ್ರವಲ್ಲದೇ ಪ್ರತಿ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಂದು ಹಾಗೂ ಬೆಳಗಾವಿ ಅ​ವೇಶನ ನಡೆಯುವ ಸಂದರ್ಭದಲ್ಲಿ ಕಪ್ಪು ಪಟ್ಟಿಧರಿಸಿ ನಾಡಿಗೆ ಅವಮಾನಿಸುವುದು, ಕನ್ನಡ ನಾಮಫಲಕಗಳನ್ನು ಧ್ವಂಸಗೊಳಿಸುವುದು, ಕನ್ನಡ ನಾಡಿನ ಧಿ​ೕಮಂತ ನಾಯಕರು ಕವಿಗಳಿಗೆ ಅವಮಾನಿಸುವುದು, ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ಈ ರೀತಿಯ ಕೃತ್ಯಗಳು ಪ್ರತಿಸಲ ನಡೆಯುತ್ತಲೇ ಇವೆ. ಕಾರಣ ಮಹಾರಾಷ್ಟ್ರದ ಶಿವಸೇನೆ (Shivasene) ಮತ್ತು ಎಂ.ಇ.ಎಸ್‌. ಸಂಘಟನೆಗಳನ್ನು ರದ್ದುಪಡಿಸಲು ಹಾಗೂ ಮಹಾರಾಷ್ಟ್ರ (Maharashtra) ಸರ್ಕಾರ ವಜಾಗೊಳಿಸಲು ಒತ್ತಾಯಿಸಿದರು.

ಅಶೋಕ ಕರಾಟೆ, ಸಂಗಮೇಶ ಭೀಮನಳ್ಳಿ, ಸಾಬಣ್ಣ ಮುಂಡರಗಿ, ರೆಡ್ಡಿ ಕೊಟ್ರಿಕಿ, ಶಿವರಾಜ ಹಡಪದ, ಮಹೇಶÜ ಚಿಂತನಳ್ಳಿ, ವಿಜಯಕುಮಾರ ಮಡಿವಾಳ, ಧರ್ಮಣ್ಣ ತೆಲುಗುರು, ವೆಂಕಟೇಶ ಕ್ಯಾಶಪ್ಪನಳ್ಳಿ, ಮಲ್ಲುಗೌಡ ಹೊಸಳ್ಳಿ, ಸಂಜೀವರೆಡ್ಡಿ ತುಮಕೂರು ಇತರರು ಹಾಜರಿದ್ದರು.

ಕನ್ನಡ ವಿರೋಧಿ ಚಟುವಟಿಕೆ ಸಹಿಸಲ್ಲ: ಸುನೀಲ್‌ಕುಮಾರ್‌

ಚಿಕ್ಕಮಗಳೂರು: ಎಂಇಎಸ್‌ ಅಥವಾ ಇನ್ಯಾವುದೇ ಸಂಘಟನೆ ಕನ್ನಡ ವಿರೋಧಿ ಚಟುವಟಿಕೆ ನಡೆಸಿದ್ರೆ ಯಾವುದೇ ಕಾರಣಕ್ಕೂ ಈ ಸರ್ಕಾರ ಸಹಿಸೋದಿಲ್ಲ. ಅಂಥವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್‌ ಹೇಳಿದ್ದಾರೆ.

ಎಲ್ಲೋ ಒಂದು ಕಡೆ ಪಿತೂರಿಯ ಕಾರಣಕ್ಕೆ ಜನರ ಮನಸ್ಸನ್ನ ಬೇರೆಡೆ ಸೆಳೆಯಬೇಕು ಅಂತಾ ಪ್ರಯತ್ನ ದುಷ್ಕರ್ಮಿಗಳು ನಡೆಸಿದರೆ, ಸರ್ಕಾರ ಕಾನೂನು ಕ್ರಮ ಖಂಡಿತ ತೆಗೆದುಕೊಳ್ಳುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.  ಎಷ್ಟೋ ದೊಡ್ಡವರಾದ್ರೂ ಕನ್ನಡದ ನೆಲ, ಧ್ವಜ, ಸಾಹಿತ್ಯ ನಾವೆಲ್ಲರೂ ಗೌರವಿಸಬೇಕು, ಅಗೌರವದಿಂದ ನಡೆದುಕೊಂಡರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!