ಕೇರಳ ಸ್ಟೋರಿ ಬಳಿಕ ಲೋಕಸಭಾ ಚುನಾವಣೆ ಹೊತ್ತಲ್ಲಿ ಮೆಹಬೂಬ ತೆರೆಗೆ, ಮುಸ್ಲಿಮರ ಆಕ್ರೋಶ!

By Ravi Janekal  |  First Published Mar 14, 2024, 7:18 PM IST

'ದಿ ಕೇರಳ ಸ್ಟೋರಿ' ಮಾದರಿಯಲ್ಲಿ ಕರಾವಳಿಯ ನೈಜ ಘಟನೆ ಆಧರಿಸಿ 'ಮೆಹಬೂಬ' ಚಿತ್ರ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಸಿನಿಮಾ ಬಿಡುಗಡೆಗೆ ಇಂದೇ ತಡೆಯಾಜ್ಞೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರಿಗೆ ದೂರು ನೀಡಲಾಗಿದೆ.


ಮಂಗಳೂರು (ಮಾ.14): 'ದಿ ಕೇರಳ ಸ್ಟೋರಿ' ಮಾದರಿಯಲ್ಲಿ ಕರಾವಳಿಯ ನೈಜ ಘಟನೆ ಆಧರಿಸಿ 'ಮೆಹಬೂಬ' ಚಿತ್ರ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಸಿನಿಮಾ ಬಿಡುಗಡೆಗೆ ಇಂದೇ ತಡೆಯಾಜ್ಞೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರಿಗೆ ದೂರು ನೀಡಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಲ್ ಕಾಲೇಜ್ ಸ್ಟುಡೆಂಟ್ ಅಸೋಸಿಯೇಶನ್ ಅಧ್ಯಕ್ಷ ಬಾತೀಷ್, ಲೋಕಸಭಾ ಚುನಾವಣೆ ಲಾಭ ಪಡೆಯಲು 'ದಿ ಕೇರಳ ಸ್ಟೋರಿ' ಮಾದರಿಯಲ್ಲಿ 'ಮೆಹಬೂಬ' ಸಿನಿಮಾ ಬಿಡುಗಡೆ ಮಾಡುವ ಮೂಲಕ ಮುಸ್ಲಿಂ ಯುವತಿಯರು ಸೇರಿದಂತೆ ಯುವ ಸಮೂಹದ ದಾರಿ ತಪ್ಪಿಸುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ವೇಳೆ ಬಿಡುಗಡೆಗೆ ತಡೆ ನೀಡಬೇಕು. ನಮ್ಮ ವಕೀಲರು ತಡೆಯಾಜ್ಞೆ ತರಲು ಇಂದು ಯತ್ನಿಸುತ್ತಿದ್ದಾರೆಕ. ನಮ್ಮ ವಿರೋಧದ ನಡುವೆಯೂ ಸಿನಿಮಾ ಬಿಡುಗಡೆ ಮಾಡಿದರೆ ಅದರ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.

Latest Videos

undefined

ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್‌ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್

ಲೋಕಸಭಾ ಚುನಾವಣೆಯ ಲಾಭ ಪಡೆಯಲು ಬಿಜೆಪಿಯ ಬೆಂಬಲಿಗರೇ ಈ ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಚಿತ್ರ ಬಿಡುಗಡೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ, ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

 

ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!

ಮಂಗಳೂರಿನಲ್ಲಿ ಹಿಂದುತ್ವ ಜಿಹಾದ್‌ಗೆ ಬಲಿಯಾದ ನಿಜ ಜೀವನದ ಕತೆಯನ್ನು 'ಮೆಹಬೂಬ' ಎಂಬ ಹೆಸರಿನಲ್ಲಿ ಕನ್ನಡ ಚಿತ್ರತಂಡ ಸಿನಿಮಾ ನಿರ್ಮಾಣ ಮಾಡಿದೆ.  ಮಾ.15ರಂದು ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ ಆದರೆ ಈ ಸಿನಿಮಾ ಮುಸ್ಲಿಂ ಯುವತಿಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ರಾಜ್ಯ ಸರ್ಕಾರ ಕೂಡಲೇ ಬಿಡುಗಡೆಗೆ ತಡೆ ನೀಡುವಂತೆ ಟ್ವಿಟ್ಟರ್ ಎಕ್ಸ್‌ನಲ್ಲಿ Bathish Alakemajalu ಎಂಬುವವರು ಪೋಸ್ಟ್ ಮಾಡಿದ್ದಾರೆ. 

click me!