'ಇಂದು ಕಾಶ್ಮೀರದಲ್ಲಿ, ನಾಳೆ ನಮ್ಮ ಮೇಲೆ..' ಮಂತ್ರಾಲಯ ಶ್ರೀಗಳು ಹಿಂದೂಗಳಿಗೆ ಎಚ್ಚರದಿಂದರಬೇಕು ಎಂದಿದ್ದೇಕೆ?

Published : Apr 24, 2025, 07:35 PM ISTUpdated : Apr 24, 2025, 08:03 PM IST
'ಇಂದು ಕಾಶ್ಮೀರದಲ್ಲಿ, ನಾಳೆ ನಮ್ಮ ಮೇಲೆ..' ಮಂತ್ರಾಲಯ ಶ್ರೀಗಳು ಹಿಂದೂಗಳಿಗೆ ಎಚ್ಚರದಿಂದರಬೇಕು ಎಂದಿದ್ದೇಕೆ?

ಸಾರಾಂಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ರಾಯಚೂರು(ಏ.24): ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಶ್ರೀ ಸುಬುಧೇಂದ್ರ ತೀರ್ಥರು ಮಾತನಾಡಿ, 'ನಾವು ಭಾರತೀಯರು ಶಾಂತಿಪ್ರಿಯರು. ನಮ್ಮ ದೇಶದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳು. ಜಾತಿ, ಧರ್ಮದ ಭೇದವಿಲ್ಲದೆ ಒಗ್ಗಟ್ಟಿನಿಂದ ಬದುಕುತ್ತೇವೆ. ಆದರೆ, ಬೇರೆ ದೇಶಗಳಿಂದ ಬಂದವರು ನಮ್ಮಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಅಶಾಂತಿ ಮತ್ತು ದುಷ್ಕೃತ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ಭಾರತೀಯರು ಒಂದಾಗಿ ಎದುರಿಸಬೇಕು' ಎಂದು ಕರೆ ನೀಡಿದರು.

ಇದನ್ನೂ ಓದಿ: ಪಹಲ್ಗಾಮ್‌ ಟೆರರಿಸ್ಟ್ ಅಟ್ಯಾಕ್: ಪಾಕಿಸ್ತಾನದ ಕುತಂತ್ರ ಬಯಲು ಮಾಡಿದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ!

ಇಂದು ಕಾಶ್ಮೀರದಲ್ಲಿ ನಾಳೆ ನಮ್ಮ ಮೇಲೆ:
ಎಲ್ಲಾ ಹಿಂದೂಗಳು ಜಾಗೃತರಾಗಿರಬೇಕು. ನಮ್ಮ ಹೆಣ್ಣು ಮಕ್ಕಳು, ಧರ್ಮ, ದೇವಸ್ಥಾನಗಳನ್ನು ರಕ್ಷಿಸಿಕೊಳ್ಳಬೇಕು. ಇಂದು ಕಾಶ್ಮೀರದಲ್ಲಿ ದಾಳಿ ನಡೆದಿದೆ, ಮುಂದೊಂದು ದಿನ ನಮ್ಮ ಊರಿನಲ್ಲಿ ಆಗಬಹುದು. ನಾವು ಎಚ್ಚರಿಕೆಯಿಂದ ಇರಬೇಕು'ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪಹಲ್ಗಾಮ್‍ ಉಗ್ರರ ದಾಳಿ: ಈ ಪೈಶಾಚಿಕ ಕೃತ್ಯ ಮನಸಿಗೆ ಆಘಾತ ನೀಡಿದೆ -ಶ್ರೀಗಳು ಕಂಬನಿ

ಹಣದಿಂದ ಮೃತರು ವಾಪಸ್ ಬರೋದಿಲ್ಲ:
ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ ಶ್ರೀಗಳು, ಕರ್ನಾಟಕದ ಮೂವರು ಮೃತಪಟ್ಟಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಸಾದ ರೂಪದಲ್ಲಿ ಆ ಮೂರು ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುತ್ತೇವೆ. ಹಣದಿಂದ ಮೃತರು ವಾಪಸ್ ಬರುವುದಿಲ್ಲ, ಆದರೆ ಈ ಕುಟುಂಬಗಳ ಬೆಂಬಲಕ್ಕೆ ನಾವು ಇದ್ದೇವೆ' ಎಂದು ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಕಾಶ್ಮೀರದ ಈ ದಾಳಿಯ ಬಗ್ಗೆ ರಾಜ್ಯದ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌