ರಾಜ್ಯದಲ್ಲಿ ಕಡಿಮೆಯಾದ ಮಳೆ, ಉಷ್ಣಾಂಶ ಏರಿಕೆ; ಪ.ಬಂಗಾಳ -ಗುಜರಾತ್‌ಗೆ ಮಂತಾ ಚಂಡಮಾರುತ

Published : Oct 31, 2025, 08:19 AM IST
Delhi temperature

ಸಾರಾಂಶ

ರಾಜ್ಯದಲ್ಲಿ ಕಡಿಮೆಯಾದ ಮಳೆ, ಉಷ್ಣಾಂಶ ಏರಿಕೆ; ಪ.ಬಂಗಾಳ -ಗುಜರಾತ್‌ಗೆ ಮಂತಾ ಚಂಡಮಾರುತ ಆತಂಕ ಹೆಚ್ಚಾಗಿದೆ. ಕರ್ನಾಟಕದಲ್ಲಿ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಕೂಲ್ ಕೂಲ್ ವಾತಾವರಣ ಮಾಯವಾಗುತ್ತಿದೆ.

ಬೆಂಗಳೂರು (ಅ.31) ಮಂತಾ ಚಂಡಮಾರುತದಿಂದ ರಾಜ್ಯದೆಲ್ಲೆಡೆ ಮಳೆ ಅಬ್ಬರ ಇದೀಗ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದು, ಉಷ್ಣಾಂಶ ಹೆಚ್ಚಾಗಿದೆ. ಕಳೆದೆರಡು ದಿನದಿಂದ ತಾಪಮಾನದಲ್ಲಿ ಭಾರಿ ಏರಿಕೆಯಾಗಿದೆ. ಸಾಮಾನ್ಯ ಉಷ್ಣಾಂಶಗಿಂತ 1 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗಿದೆ. ಇತ್ತ ಕೂಲ್ ಕೂಲ್ ಆಗಿದ್ದ ಬೆಂಗಳೂರಿನಲ್ಲಿ ಉರಿ ಬಿಸಿಲು ಜನರನ್ನೈ ಹೈರಾಣು ಮಾಡುತ್ತಿದೆ.

ಕಳೆದ‌ ಎರಡು ದಿನಗಳಿಂದ ತಾಪಮಾನದಲ್ಲಿ ಏರಿಕೆ

ಬೆಂಗಳೂರು ನಗರ

ಸಾಮಾನ್ಯ ಉಷ್ಣಾಂಶ- 27. 7

ಈಗಿನ ಉಷ್ಣಾಂಶ- 28.5

ಬೆಂ.ಕೆಂಪೇಗೌಡ ವಿಮಾನ ನಿಲ್ದಾಣ

ಸಾಮಾನ್ಯ ಉಷ್ಣಾಂಶ- 28.6

ಈಗಿನ ಉಷ್ಣಾಂಶ- 29.1

ಹೆಚ್‌ಎಎಲ್ ವಿಮಾನ ನಿಲ್ದಾಣ

ಸಾಮಾನ್ಯ ಉಷ್ಣಾಂಶ- 27.5

ಈಗಿನ ಉಷ್ಣಾಂಶ- 28.9

ಕ್ಷೀಣಿಸಿದ ಮಂತಾ ಚಂಡಮಾರುತ

ಆಂಧ್ರ ಪ್ರದೇಶ ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸದ ಮಂತಾ ಚಂಡಮಾರುತದಿಂದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಒಡಿಶಾ ರಾಜ್ಯದಲ್ಲಿ ಭಾರಿ ಮಳೆಯಾಗಿತ್ತು. ಇತ್ತ ಕರ್ನಾಟಕದ ಮೇಲೂ ಮಂತಾ ಚಂಡಮಾರು ಪರಿಣಾಮ ಬೀರಿತ್ತು. ಇದೀಗ ಮಂತಾ ಚಂಡಮಾರುತದ ಅಬ್ಬರ ಕ್ಷೀಣಿಸಿದೆ. ದಕ್ಷಿಣ ಭಾಗದದಿಂದ ಇದೀಗ ಚಂಡಮಾರುತ ಚತ್ತೀಸಘಡ ವ್ಯಾಪ್ತಿಗೆ ಚಲಿಸಿದೆ. ಮಂತಾ ಅಬ್ಬರ ಕ್ಷೀಣಿಸುತ್ತಿದೆ. ಆದರೆ ಪಶ್ಚಿಮ ಬಂಗಾಳ ಹಾಗೂ ಗುಜರಾತ್ ಭಾಗದಲ್ಲಿ ಮಂತ ಚಂಡಮಾರುತದಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ಚಂಡಮಾರುತದಿಂದ ಮಳೆ ಸಂಭವ

ಚತ್ತೀಸಘಡ ಭಾಗದತ್ತ ಮಂತ ಚಂಡಮಾರುತ ಚಲಿಸಿರುವ ಕಾರಣ ಚತ್ತೀಚಸಘಡ, ಗುಜರಾತ್ ಭಾಗದಲ್ಲೂ ಮಳೆಯಾಗಲಿದೆ. ಮುಂದಿನ ಕೆಲ ದಿನ ಗುಜರಾತ್‌ನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಪೈಕಿ ಸೌರಾಷ್ಟ್ರ ಹಾಗೂ ಕಚ್‌ನಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಇನ್ನು ಪಶ್ಚಿಮ ಬಂಗಾಳದ ಆಲಿಪುರ್ದೌರ್ ಹಾಗೂ ಕೂಚ್‌ಬಿಹಾರದಲ್ಲಿ ನವೆಂಬರ್ 1ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇನ್ನು ಬೀರ್ಬೂಮ್, ಮುಶಿರಾಬಾದ್, ಪಶ್ಚಿಮ ಭರ್ದಮಾನ್, ಪುರುಲಿಯಾದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.  ಈಶಾನ್ಯ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾದಲ್ಲಿ ನವೆಂಬರ್ 1ರ ವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!