ರಾಮ ಮಂದಿರ ನಿರ್ಮಾಣಕ್ಕೆ ಸಮಾಜ ಸೇವಕ ಹೂಡಿ ಮಂಜುನಾಥ್ ಹರ್ಷ| ತಲೆಯ ಮೇಲೆ ಇಟ್ಟಿಗೆ ಹೊತ್ತು 2019ರ ಆಗಸ್ಟ್ 16ರಿಂದ ಸುಮಾರು 66 ದಿನಗಳ ಕಾಲ 2066 ಕಿ.ಮೀ. ಸಂಚರಿಸಿ ಅಯೋಧ್ಯೆ ತಲುಪಿದ್ದ ಹೂಡಿ ಮಂಜುನಾಥ್|
ಕೆ.ಆರ್.ಪುರ(ಆ.03): ಉತ್ತರ ಪ್ರದೇಶದ ಅಯೋಧ್ಯೆವರೆಗೆ ಹೂಡಿ ಗ್ರಾಮದಿಂದ ತಲೆಯ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ ಮಾಡಿದ್ದ ರಾಮಭಕ್ತ ಮಂಜುನಾಥ್ ಮತ್ತು ಮತ್ತವರ ತಂಡ ಆ.5ರಂದು ನಡೆಯುತ್ತಿರುವ ರಾಮಮಂದಿರ ಶಿಲಾನ್ಯಾಸದ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.
ಕೃಷಿಕನಾಗಿದ್ದರೂ 10 ವರ್ಷಗಳಿಂದ ಸಮಾಜ ಸೇವೆ ರೂಢಿಸಿಕೊಂಡಿರುವ ರಾಮಭಕ್ತ ಮಂಜುನಾಥ್, ರಾಮ ಮಂದಿರ ರಾಮ ಜನ್ಮ ಭೂಮಿ ಪ್ರಕರಣ ವಿವಾದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹಿಂದೂಗಳ ಪರವಾಗಿ ಬರಬೇಕು ಎಂದು ಪಾದಯಾತ್ರೆ ಕೈಗೊಂಡಿದ್ದರು. ತಲೆಯ ಮೇಲೆ ಇಟ್ಟಿಗೆ ಹೊತ್ತು 2019ರ ಆಗಸ್ಟ್ 16ರಿಂದ ಸುಮಾರು 66 ದಿನಗಳ ಕಾಲ 2066 ಕಿ.ಮೀ. ಸಂಚರಿಸಿ ಅಯೋಧ್ಯೆ ತಲುಪಿದ್ದರು.
undefined
ರಾಮ ಮಂದಿರಕ್ಕೆ ಹುತಾತ್ಮ ಯೋಧರ ಮನೆಯ ಮಣ್ಣು!
ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ‘ನನ್ನ ದೇಶ ನನ್ನ ಜನ’ ಪುಸ್ತಕವು ಹೂಡಿ ಮಂಜುನಾಥ್ ಅವರ ಪಾದಯಾತ್ರೆಗೆ ಪ್ರೇರಣೆ ನೀಡಿತ್ತು. ತಾವು ನೀಡಿರುವ ಇಟ್ಟಿಗೆಯನ್ನು ಆಗಸ್ಟ್ 5ರಂದು ನಡೆಯುವ ಅಡಿಗಲ್ಲು ಸಮಾರಂಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಬೆಳ್ಳಿ ಇಟ್ಟಿಗೆಯ ಜೊತೆಗೆ ತಮ್ಮ ಇಟ್ಟಿಗೆಯನ್ನು ಬಳಸಿಕೊಳ್ಳುವಂತೆ ಪ್ರಧಾನಿಗೆ ಪತ್ರದ ಒಕ್ಕಣೆಯನ್ನು ಬರೆದಿದ್ದಾರೆ.
ಮಂಜಯ್ಯ ಚಾವಡಿ, ಕೇಬಲ್ ಮಂಜುನಾಥ್, ಕೆ.ಡಿ.ವೆಂಕಟೇಶ್, ಆರ್.ವೇಣು, ಮುನಿಕೃಷ್ಣ, ಆಂಜಿ, ರಕ್ಷೀತ್ ಪಾದಯಾತ್ರೆಗೆ ಸಾಥ್ ನೀಡಿದ್ದರು. ರಾಜಪಾಳ್ಯ ಮತ್ತು ತಿಗಳರಪಾಳ್ಯದ ಗ್ರಾಮಸ್ಥರು ಮತ್ತು ಹರಿಕೃಷ್ಣ ಯಾದವ್, ಶ್ರೀನಿವಾಸ್ ರಾಜು ಅವರ ತಂಡ ಬೆಂಬಲ ನೀಡಿದ್ದರು.