ಮಂಗಳೂರು: ವಕ್ಫ್ ಪ್ರತಿಭಟನೆ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ, ಎಲ್ಲೆಲ್ಲಿ?

Published : Apr 18, 2025, 05:34 AM ISTUpdated : Apr 18, 2025, 05:35 AM IST
ಮಂಗಳೂರು: ವಕ್ಫ್ ಪ್ರತಿಭಟನೆ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ, ಎಲ್ಲೆಲ್ಲಿ?

ಸಾರಾಂಶ

ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಏ.18ರಂದು ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್- ಕಣ್ಣೂರು- ಅಡ್ಯಾರ್- ಸಹ್ಯಾದ್ರಿ- ಅರ್ಕುಳ (ಎರಡು ಕಡೆಯಿಂದ) ಮಾರ್ಗಗಳ ಬದಲಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಪೊಲೀಸ್‌ ಇಲಾಖೆ ಕೋರಿದೆ.

ಮಂಗಳೂರು (ಏ.18) ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ನಗರದ ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಏ.18ರಂದು ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆವರೆಗೆ ಸಂಚಾರ ದಟ್ಟಣೆ ಆಗಬಹುದಾದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್- ಕಣ್ಣೂರು- ಅಡ್ಯಾರ್- ಸಹ್ಯಾದ್ರಿ- ಅರ್ಕುಳ (ಎರಡು ಕಡೆಯಿಂದ) ಮಾರ್ಗಗಳ ಬದಲಾಗಿ ಪರ್ಯಾಯ ಮಾರ್ಗಗಳನ್ನು ಉಪಯೋಗಿಸಲು ಪೊಲೀಸ್‌ ಇಲಾಖೆ ಕೋರಿದೆ.

ಸ್ಥಳೀಯ, ತುರ್ತು ಹಾಗೂ ಅತ್ಯಗತ್ಯ ಕಾರಣಗಳಿಗೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಬದಲಿ ಮಾರ್ಗ ಬಳಸುವಂತೆ ತಿಳಿಸಲಾಗಿದೆ.

ಮೆಲ್ಕಾರು ಜಂಕ್ಷನ್- ಪುತ್ತೂರು/ ಬಂಟ್ವಾಳ/ ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ/ ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್- ಬೊಳಿಯಾರ್- ಮುಡಿಪು- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು.

ಇದನ್ನೂ ಓದಿ: ಹೊಸ ವಕ್ಫ್‌ ಕಾನೂನು ಜಾರಿಗೆ ಸುಪ್ರೀಂ ಬ್ರೇಕ್‌ : ಏನಿದು ವಿವಾದ?

ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್- ನೀರುಮಾರ್ಗ- ಬೈತುರ್ಲಿ- ಕುಲಶೇಖರ- ನಂತೂರು ಮೂಲಕ ಸಂಚರಿಸುವುದು.

ವಳಚ್ಚಿಲ್ ಜಂಕ್ಷನ್- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು- ನೀರುಮಾರ್ಗ- ಬೈತುರ್ಲಿ- ನಂತೂರು ಮೂಲಕ ಸಂಚರಿಸುವುದು.

ಅಡ್ಯಾರ್ ಕಟ್ಟೆ- ಬಿ.ಸಿ.ರೋಡ್/ ತುಂಬೆ/ ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್- ಕೊಣಾಜೆ- ದೇರಳಕಟ್ಟೆ- ತೊಕ್ಕೊಟ್ಟು ಮೂಲಕ ಸಂಚರಿಸುವುದು.

ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು- ದೇರಳಕಟ್ಟೆ- ಮುಡಿಪು- ಬೊಳಿಯಾರ್- ಮೆಲ್ಕಾರ್ ಮೂಲಕ ಸಂಚರಿಸುವುದು.

ನಂತೂರು ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ- ಕುಲಶೇಖರ- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪನೆ ಜಂಕ್ಷನ್- ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.

ಕೆ.ಪಿ.ಟಿ. ವೃತ್ತ- ಮಂಗಳೂರು ನಗರ/ ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ- ಪಚ್ಚನಾಡಿ- ವಾಮಂಜೂರು- ಬೈತುರ್ಲಿ ಜಂಕ್ಷನ್- ನೀರುಮಾರ್ಗ- ಕಲ್ಪನೆ ಮೂಲಕ ಅಥವಾ ಬೋಂದೆಲ್- ಕಾವೂರು- ಬಜಪೆ- ಕೈಕಂಬ- ಮೂಡುಬಿದಿರೆ ಮೂಲಕ ಸಂಚರಿಸುವುದು.

ಇದನ್ನೂ ಓದಿ: ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ? ಸುಪ್ರೀಂ ವಿರುದ್ಧ ಉಪರಾಷ್ಟ್ರಪತಿ ಕಟುಟೀಕೆ

ಮೂಲ್ಕಿ ವಿಜಯಸನ್ನಿಧಿ- ಉಡುಪಿ/ ಮೂಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ- ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವುದು.

ಪಡುಬಿದ್ರಿ- ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ - ಮೂಡುಬಿದಿರೆ- ಸಿದ್ದಕಟ್ಟೆ - ಬಂಟ್ವಾಳ ಮೂಲಕ ಸಂಚರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ