'ನನಗೆ ಪ್ರೀತಿಸೋ ಹಕ್ಕಿಲ್ಲವೇ?' ಕತಾರ್‌ನಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಸಂದೇಶ ಕಳಿಸಿದ ಚೈತ್ರಾ ಹೆಬ್ಬಾರ!

By Ravi Janekal  |  First Published Mar 3, 2024, 11:04 AM IST

ಮಂಗಳೂರಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ಹೋಗಿರುವುದು ತಿಳಿದು ಬಂದಿದೆ. 'ನಾನು ಪ್ರಬುದ್ಧಳಾಗಿದ್ದೇನೆ. ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಕತಾರ್‌ನಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಾಳೆ.


ಮಂಗಳೂರು (ಮಾ.3): ಮಂಗಳೂರಿನ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ತನಿಖೆ ನಡೆಸಿದ್ದರು. ಲವ್ ಜಿಹಾದ್ ಮಾಡಿದ್ದಾನೆ ಎನ್ನಲಾದ ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಶಾರೂಕ್‌ ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾರೂಕ್-ಚೈತ್ರಾ ಹೆಬ್ಬಾರ್ ಪ್ರೀತಿ ವಿಚಾರ ಬೆಳಕಿಗೆ ಬಂದಿದೆ. ತಾನು ಚೈತ್ರಾ ಹೆಬ್ಬಾರ್ ಪ್ರೀತಿಸುತ್ತಿರುವುದಾಗಿ ಶಾರೂಕ್ ಒಪ್ಪಿಕೊಂಡಿದ್ದಾನೆ. ಆದರೆ ಚೈತ್ರಾ ಹೆಬ್ಬಾರ್ ವಿಸಿಟಿಂಗ್ ವೀಸಾದಡಿ ದೇಶಬಿಟ್ಟು ಕತಾರ್‌ಗೆ ತೆರಳಿರುವುದು ದೃಢಪಟ್ಟಿದೆ. ಇದೀಗ ಅಲ್ಲಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಮಾಡಿದ್ದು, ನಾನು ಪ್ರಬುದ್ಧಳಾಗಿದ್ದು, ನನಗೆ ಪ್ರೀತಿಸುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿ ಮೇಲ್ ಮಾಡಿದ್ದಾಳೆ. 

ನನಗೆ ಯಾವುದೇ, ಯಾರದೇ ಒತ್ತಡವಿಲ್ಲ ಸ್ವಇಚ್ಚೆಯಿಂದ ನನ್ನ ಇಷ್ಟದಂತೆ ನಾನು ಕತಾರ್‌ಗೆ ಬಂದಿದ್ದೇನೆ. ನನಗೆ ಬದುಕುವ ಹಕ್ಕಿಲ್ಲವೇ ಎಂದು ಪೊಲೀಸರಿಗೆ ಕಳುಹಿಸಿರುವ ಮೇಲ್‌ನಲ್ಲಿ ಪ್ರಶ್ನಿಸಿದ್ದಾಳೆ. ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿರೋ ಚೈತ್ರಾ. ಅಲ್ಲಿಂದ ದೆಹಲಿ ಏರ್ಪೋರ್ಟ್ ಗೆ ಆಗಮಿಸಿ ಕತಾರ್ ಗೆ ಪ್ರಯಾಣ ಮಾಡಿರೋದು ದೃಢಪಟ್ಟಿದೆ. ಶಾರೂಕ್‌ನಿಂದಲೇ ಚೈತ್ರಾ ಕತಾರ್ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. 

Tap to resize

Latest Videos

ಚಿಕ್ಕಮಗಳೂರು: ಲವ್ ಜಿಹಾದ್ ಪ್ರಕರಣ, ಡ್ಯಾನ್ಸ್ ಮಾಸ್ಟರ್ ವಿರುದ್ದ ಫೋಕ್ಸೋ ಪ್ರಕರಣ

ಈ ಹಿಂದೆ ಕತಾರ್ ನಲ್ಲೇ ಕೆಲಸ ಮಾಡಿಕೊಂಡಿದ್ದ ಶಾರೂಕ್ ಬಳಿಕ ಅಲ್ಲಿ ಜೈಲು ಸೇರಿ ಬಿಡುಗಡೆಯಾಗಿ ಊರಿಗೆ ಬಂದಿದ್ದ. ಆದರೆ ಪಾಸ್ ಪೋರ್ಟ್ ನಲ್ಲಿ ಎಕ್ಸಿಟ್ ಇರೋ ಕಾರಣ ಶಾರೂಕ್ ಗೆ ಯುಎಇ ಪ್ರಯಾಣ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ವಿಸಿಟಿಂಗ್ ವೀಸಾ ಮೂಲಕ ಚೈತ್ರಾಳನ್ನ ಕಳುಹಿಸಿರೋ ಅನುಮಾನ. ಸದ್ಯ ಚೈತ್ರಾ ಕತಾರ್ ನ ಭಾರತೀಯ ರಾಯಭಾರಿ ಕಚೇರಿ ಮೂಲಕ ಉಳ್ಳಾಲ ಪೊಲೀಸರಿಗೆ ಇಮೇಲ್ ಸಂದೇಶ ರವಾನಿಸಿದ್ದಾಳೆ. ಹೀಗಾಗಿ ವಶಕ್ಕೆ ಪಡೆದಿದ್ದ ಶಾರೂಕ್ ಬಿಟ್ಟು ಕಳುಹಿಸಿರೋ ಪೊಲೀಸರು. ಇಬ್ಬರು ಪ್ರಬುದ್ಧರಾಗಿರುವ ಕಾರಣ ಅಸಹಾಯಕರಾದ ಪೊಲೀಸರು. ಭಜರಂಗದಳದ ಎಚ್ಚರಿಕೆ ಬಳಿಕ ಆತಂಕದಿಂದ ಎಸ್ಕೇಪ್ ಆಗಿರೋ ಚೈತ್ರಾ ಮೂರು ತಿಂಗಳು ಕಳೆದು ಊರಿಗೆ ಬರೋದಾಗಿ ಚೈತ್ರಾ ಮಾಹಿತಿ ಇಮೇಲ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 

ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ: ಹಿಂದೂಪರ ಸಂಘಟನೆಯ 7 ಮಂದಿ ಬಂಧನ, ರುಮಾನ್ ವಿರುದ್ಧವೂ ಪ್ರತಿದೂರು

ಪುತ್ತೂರು ನಿವಾಸಿ ದಿ.ಸತೀಶ್‌ ಹೆಬ್ಬಾರ್‌ ಪುತ್ರಿಯಾಗಿರುವ ಚೈತ್ರಾ ಹೆಬ್ಬಾರ್‌ ಫೆ.17ರಂದು ಪಿಜಿಯಿಂದ ಹೊರಹೋದಾಕೆ ಕಾಲೇಜಿಗೂ ತೆರಳದೆ ನಾಪತ್ತೆಯಾಗಿದ್ದರು. ಕೋಟೆಕಾರು ಮಾಡೂರು ಬಳಿ ಪಿಜಿಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್‌ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು. ಇತ್ತ ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರೂಕ್ ಮಾಡೂರಿನಲ್ಲಿರುವ ಇವಳ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಸ್ಥಳೀಯರು ಈ ಸಂಗತಿಯನ್ನು ಬಜರಂಗದಳದ ಗಮನಕ್ಕೆ ತಂದಿದ್ದರು. ಪಿಜಿಯಲ್ಲಿ ವಿಚಾರಿಸಿದಾಗ ಹಿಂದೂ ವಿದ್ಯಾರ್ಥಿನಿಯರು ಇರುತ್ತಿದ್ದ ಪಿಜಿಯಲ್ಲಿ ಆತನೂ ಉಳಿಯುತ್ತಿದ್ದ ಎಂಬ ಸಂಗತಿ ಬಯಲಾಗಿತ್ತು. ಈ ಕುರಿತು ಆಕೆಯ ಚಿಕ್ಕಪ್ಪ ಪ್ರಕಾಶ್‌ ಹೆಬ್ಬಾರ್‌, ಉಳ್ಳಾಲ ಪೊಲೀಸ್‌ ಠಾಣೆ(Ullal police station)ಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

click me!