WATCH: ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ನಿಗೂಢ ನಾಪತ್ತೆ!

Published : Oct 06, 2024, 10:36 AM ISTUpdated : Oct 07, 2024, 07:59 AM IST
WATCH: ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ನಿಗೂಢ ನಾಪತ್ತೆ!

ಸಾರಾಂಶ

ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (53) ಇಂದು ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದು, ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿರುವುದು ಹಲವು ಅನುಮಾಗಳು ಹುಟ್ಟುಹಾಕಿದೆ.

ಮಂಗಳೂರು (ಅ.6) ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (53) ಇಂದು ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದು, ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿರುವುದು ಹಲವು ಅನುಮಾಗಳು ಹುಟ್ಟುಹಾಕಿದೆ.

ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಮನೆಯಿಂದ ಕಾರು ಚಲಾಯಿಸಿಕೊಂಡು ಹೋಗಿದ್ದರು ಎನ್ನಲಾಗಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಮೇಲೆ ಮುಮ್ತಾಜ್ ಅಪಘಾತ ನಡೆದ ಸ್ಥಿತಿಯಲ್ಲಿ ಬಿಎಂಡಬ್ಲ್ಯು ಕಾರು ಪತ್ತೆಯಾಗಿದೆ. ಅಪಘಾತವಾಯ್ತ? ಅಥವಾ ಆತ್ಮಹತ್ಯೆ ಮಾಡಿಕೊಂಡರಾ? ನಿಗೂಢವಾಗಿದೆ.

ರಾಣೇಬೆನ್ನೂರು: ಟಿಪ್ಪರ್-ಸ್ಕೂಟಿ ಮಧ್ಯೆ ಅಪಘಾತ, ಬೈಕ್‌ ಸವಾರನ ತಲೆ ಛಿದ್ರ ಛಿದ್ರ, ಭಯಾನಕ ವಿಡಿಯೋ ಸಿಸಿಟಿಯಲ್ಲಿ ಸೆರೆ!

ಘಟನೆ ಬಳಿಕ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೊಯಿದ್ದೀನ್ ಬಾವ ನಾಪತ್ತೆಯಾದ ಸಹೋದರನ ನೆನದು ಕಣ್ಣೀರು ಹಾಕಿದರು. ಅಪಘಾತವಾಗಿ ನದಿಯಲ್ಲಿ ಬಿದ್ದಿರುವ ಸಾಧ್ಯತೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿರುವ ಎನ್‌ಡಿಆರ್‌ಎಫ್ ಅಗ್ನಿ ಶಾಮಕದಳದಿಂದ ಹುಡುಕಾಟ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಬಂದ FSL ತಂಡ:

ಘಟನೆ ಬಳಿಕ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಆಗಮಿಸಿ ಕಾರು ಪತ್ತೆಯಾದ ಸ್ಥಳದಲ್ಲಿ ಇಂಚಿಂಚು ಬಿಡದೆ ಶೋಧಿಸುತ್ತಿರುವ ಸಿಬ್ಬಂದಿ. ನಸುಕಿನ ಜಾಗ ನಿದ್ದೆ ಮಂಪರಿನಲ್ಲಿ ಅಪಘಾತವಾಯ್ತ? ಅಥವಾ ನದಿಗೆ ಹಾರಿದ್ರಾ? ಮತ್ತೇನಾದ್ರೂ ನಡೆಯಿತಾ? ನಾಪತ್ತೆಯಾಗಿರುವ ಮುಮ್ತಾಜ್ ಅಲಿ ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಬೇರೆ ಏನಾದರೂ ನಡೆದಿದೆಯಾ ಎಂದು ಇಂಚಿಂಚು ಬಿಡದೆ ಶೋಧಿಸಿದ ಸಿಬ್ಬಂದಿ. ಕಾರಿನ ಡೂರ್ ಹ್ಯಾಂಡಲ್ ಬಳಿ ಫಿಂಗರ್ ಪ್ರಿಂಟ್ ಮಾದರಿ ಸಂಗ್ರಹಿಸಿದ ಸಿಬ್ಬಂದಿ.

ಇತ್ತ ನದಿಯಲ್ಲಿ ಎಸ್‌ಡಿಆರ್‌ಎಫ್, ಎನ್ಡಿಆರ್‌ಎಫ್, ಅಗ್ನಿಶಾಮಕದಳದಿಂದ ಹುಡುಕಾಟವೂ ನಡೆದಿದೆ. ಕೂಳೂರು ಬ್ರಿಡ್ಜ್ ಅಡಿ ಭಾಗದಲ್ಲಿ ಬೋಟ್‌ಗಳ ಮೂಲಕ ಮುಳುಗುತಜ್ಞರಾದ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಸ್ಕೂಬಾ ಡೈವ ಪರಿಕರ ಬಳಸಿಕೊಂಡು ಹುಡುಕಾಟ  ನಡೆಸಿದ್ದಾರೆ. ನದಿ ನೀರು ಸಮುದ್ರ ಸೇರುವ ಮುನ್ನವೇ ಕಾರ್ಯಾಚರಣೆಗಿಳಿದಿರುವ ಸಿಬ್ಬಂದಿ.

ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನಿಂದ ಬಿದ್ದು 6 ವರ್ಷದ ಮಗು ಸಾವು

ಅನುಮಾನ ಹುಟ್ಟಿಸಿದ ಕಾರು ಅಪಘಾತ:

ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಮನೆಯಿಂದ ಯಾಕೆ ಹೋಗಿದ್ದರು? ಎಲ್ಲಿಗೆ ಹೋಗಿದ್ದರು? ಹೋಗುವಾಗ ಮನೆಯಲ್ಲಿ ತಿಳಿಸಿದ್ದರೆ? ಯಾರಿಗೂ ಹೇಳದೆ ಹೋಗಿದ್ದಾರೆ. ಅಷ್ಟಕ್ಕೂ ಮುಮ್ತಾಜ್ ಕಾರು ಕೂಳುರು ಬ್ರಿಡ್ಜ್ ಬಳಿಯೇ ಅಪಘಾತವಾಗಿದ್ದೇಕೆ ಹೇಗೆ? ಭಾರೀ ಅನುಮಾನ ಹುಟ್ಟಿಸಿದೆ.

ಮುಮ್ತಾಜ್ ಆಲಿಯನ್ನ ರಾತ್ರಿಯೇ ಹಿಂಬಾಲಿಸಿಕೊಂಡು ಬಂದಿದ್ದ ಮನೆಯವರು. ಈ ವೇಳೆ ಕೂಳೂರು ಬ್ರಿಡ್ಜ್ ಮಧ್ಯೆ ಕಾರು ಅಪಘಾತವಾದ ಸ್ಥಿತಿಯಲ್ಲಿ ಕಂಡುಬಂದಿದೆ. ಮುಮ್ತಾಜ್ ನಾಪತ್ತೆ ಹಿನ್ನೆಲೆ ಕಾರು ಬದಿಗೆ ತಂದಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದ ಕುಟುಂಬಸ್ಥರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!