ಆನೆಗಳು ದಾಳಿಗೆ ಯತ್ನಿಸಿದರೆ ಅವುಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದಿದ್ದ ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹಾಗೂ ಅವರ ಕುಟುಂಬದವರ ಬಳಿ ಇರುವ ಆಯುಧಗಳ ಪರವಾನಗಿ ರದ್ದು ಮಾಡುವಂತೆ ಹಾಗೂ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಮನೇಕಾ ಗಾಂಧಿ ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಹಾಸನ (ಡಿ.24): ಆನೆಗಳು ದಾಳಿಗೆ ಯತ್ನಿಸಿದರೆ ಅವುಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದಿದ್ದ ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹಾಗೂ ಅವರ ಕುಟುಂಬದವರ ಬಳಿ ಇರುವ ಆಯುಧಗಳ ಪರವಾನಗಿ ರದ್ದು ಮಾಡುವಂತೆ ಹಾಗೂ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಪ್ರಾಣಿ ಹಕ್ಕುಗಳ ಸಂರಕ್ಷಣಾ ಕಾರ್ಯಕರ್ತೆ, ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕವಾಗಿ ಆಡಿದ ಮಾತಿಗೆ ಸಾರ್ವಜನಿಕರ ಕ್ಷಮೆಯಾಚನೆ ಮಾಡುವಂತೆ ಹಾಸನ ಜಿಲ್ಲಾಧಿಕಾರಿ ಅರ್ಚನಾ.ಎಂ.ಎಸ್.ಗೆ ದೂರು ನೀಡಿದ್ದಾರೆ. ಮನೇಕಾ ಸಂಜಯ್ ಗಾಂಧಿ ದೂರಿನ ಅನ್ವಯ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ಗೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಏಳು ದಿನಗಳ ಒಳಗೆ ಆಯುಧ ಮತ್ತು ಆಯುಧ ಪರವಾನಗಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಠೇವಣಿ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ.
ಕೇಂದ್ರದಿಂದ 28 ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ: ಸಚಿವೆ ಶೋಭಾ ಕರಂದ್ಲಾಜೆ
ನ.7 ರಂದು ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಅಧ್ಯಯನಕ್ಕೆ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದ ಉನ್ನತಮಟ್ಟದ ಅಧಿಕಾರಿಗಳ ತಂಡವು ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಡಾನೆ ಸಂತ್ರಸ್ಥ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಅಧಿಕಾರಿಗಳು ಸಭೆ ನಡೆಸಿದ್ದರು. ಸಭೆಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಆಕ್ರೋಶವನ್ನು ಹೊರಹಾಕಿದ್ದರು. ನೀವು ಬೆಂಗಳೂರಿಗೆ ಹೋಗಿ ಕೊಡೋ ರಿಪೋರ್ಟ್ ಬೇರೆ ಆದ್ರೆ, ನಾನು ಮೂರು ಗನ್ ತರ್ಸಿದಿನಿ. ನನಗೆ ಡಬಲ್ ಬ್ಯಾರೆಲ್ ಗನ್ ಕೊಟ್ಟಿದರೆ, ಲೈಸನ್ಸ್ ಇದೆ.
ನಿಂತಿದ್ದ ಕಬ್ಬಿನ ಲಾರಿಗೆ ಟಿಟಿ ವಾಹನ ಡಿಕ್ಕಿ: ಇಬ್ಬರು ಸಾವು, ಐವರ ಸ್ಥಿತಿ ಗಂಭೀರ
ನಾನು ನನ್ನ ತೋಟಕ್ಕೆ ಹೋದಾಗ ಅಟ್ಯಾಕ್ ಮಾಡಲು ಆನೆ ಬಂದರೆ ನಾನು ಶೂಟ್ ಮಾಡ್ತಿನಿ. ನನ್ನನ್ನು ಕೊಲ್ಲಲು ಬಂದರೆ, ನಾನು ಆನೆ ಕೊಲ್ತಿನಿ, ನೀವು ಬೇಕಿದ್ರೆ ನನ್ನ ಅರೆಸ್ಟ್ ಮಾಡಿ. ನಾನು ಮೊನ್ನೆ ಎರಡು ಗನ್ ತರಿಸಿ ಇಟ್ಟುಕೊಂಡಿದ್ದೀನಿ. ಕಾಡಾನೆ ಬಂದ್ರೆ ಶೂಟ್ ಮಾಡ್ತಿನ. ಇಲ್ಲಿ ಇರೋರಿಗೆ ನೋವು ಸಿಟ್ಟು ಇರೋದು ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದರು. ಇನ್ನು ಎಚ್.ಎಂ.ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗೋ ಭೀತಿಯಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮನವಿ ಮಾಡುತ್ತಾ ಆಕ್ರೋಶದಲ್ಲಿ ಆನೆ ಕೊಲ್ಲೊ ಮಾತನಾಡಿದ್ದರು.