ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ: ಇಂದು ಹೈಕೋರ್ಟ್‌ನಲ್ಲಿ ಮೊದಲ ವಿಚಾರಣೆ

By Ravi Janekal  |  First Published Jul 11, 2024, 10:14 AM IST

ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಇಷ್ಟು ದಿನ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳು ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.


ಮಂಡ್ಯ (ಜು.11): ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಇಷ್ಟು ದಿನ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳು ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿ(Jamia Masjid) ಮೂಲದಲ್ಲಿ ಅದು ಮಸೀದಿಯಲ್ಲ, ಮಂದಿರ ಎಂದು ಭಜರಂಗದಳ ಸೇನೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಜಾಮಿಯಾ ಮಸೀದಿ ವಿವಾದ ಸಂಬಂಧ ಮೊದಲ ವಿಚಾರಣೆ ನಡೆಯಲಿದೆ.

Tap to resize

Latest Videos

undefined

ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ಜಾಮಿಯಾ ಮಸೀದಿ ವಿಚಾರವಾಗಿ 101 ಮಂದಿ ಹನುಮ ಭಕ್ತರಿಂದ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಮೂಲದಲ್ಲಿ ಅದು ಹನುಮಮಂದಿರವಾಗಿತ್ತು. ಟಿಪ್ಪು ಆಡಳಿತದಲ್ಲಿ ಮಂದಿರ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ದೇವಾಲಯ ಕುರುಹು ನಾಶ ಮಾಡಲು ಮೂಲ ಕಟ್ಟಡ ಹಾನಿ ಮಾಡಲಾಗ್ತಿದೆ. ಜಾಮಿಯಾ ಮಸೀದಿದಯಲ್ಲಿ ಅಕ್ರಮವಾಗಿ ಮದರಸ ನಡೆಯುತ್ತಿದೆ. ಮಸೀದಿಯ ಜಾಗದಲ್ಲಿ ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುವ ಸ್ಥಾಪನೆ ಆಗಬೇಕು. ಅಕ್ರಮ ಮದರಸವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಹೈಕೋರ್ಟ್‌ನಲ್ಲಿ ದಾವೆ ಹೂಡಿರುವ ಬಜರಂಗದಳ ಸೇನೆ.

Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್‌

ಜಾಮಿಯಾ ವಿವಾದ ಸಂಬಂಧ ಇಂದು ವಿಚಾರಣೆ ನಡೆಯಲಿರುವ ಹಿನ್ನೆಲೆ ಇಂದು ಕೋರ್ಟ್‌ಗೆ ಹಾಜರಾಗುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ಮುಜರಾಯಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

click me!