
ಮಂಡ್ಯ (ಜ. 20): ತಮ್ಮ ಪುತ್ರನ ಚಿತ್ರ 'ಬ್ಯಾಡ್ ಮ್ಯಾನರ್ಸ್' ಚಿತ್ರೀಕರಣಕ್ಕಾಗಿ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಬಳಸಿಕೊಳ್ಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಮೈಷುಗರ್ ಕಾರ್ಖಾನೆಯಲ್ಲಿ ಪುತ್ರನ ಸಿನೆಮಾ ಶೂಟಿಂಗ್ ನಡೆಸಿ ಅಧಿಕಾರ ದುರುಪಯೋಗ ಮಾಡಿದ್ದಾರೆಂಬ ಆರೋಪ ವಿಚಾರವಾಗಿ ಮಾತನಾಡಿ, ಕಾರ್ಖಾನೆಯಲ್ಲಿ ಶೂಟಿಂಗ್ ನಡೆಯುವುದರಿಂದ ಯಾವ ನಷ್ಟವೂ ಇಲ್ಲ. ರೈತ ಮುಖಂಡರ ಪತ್ರ ನೋಡಿ ನಗಬೇಕೋ ಇಲ್ಲ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಇದೆಲ್ಲಾ ಕಾಮನ್‌ಸೆನ್ಸ್ ಇಲ್ಲದೇ ಇರುವ ಮಾತುಗಳು. ಶೂಟಿಂಗ್ ನಡೆಯುವ ಜಾಗ ಹೈಲೈಟ್ ಆಗುತ್ತೆ ಎಲ್ಲರಿಗೂ ಲಾಭ ಆಗುತ್ತೆ. ಮಂಡ್ಯದಲ್ಲಿ ಶೂಟಿಂಗ್‌ಗೆ ನಿರ್ಬಂಧ ಇದ್ಯ..? ಎಂದು ಪ್ರಶ್ನಿಸಿದ್ದಾರೆ.
"
ಸುಮಲತಾ ಹೆಸರು ಹೇಳಿದ್ರೆ ಪಬ್ಲಿಸಿಟಿ ಸಿಗುತ್ತೆ ಅಂತ ಹೀಗೆ ಮಾಡ್ತಿದ್ದಾರೆ. ಕಾರ್ಖಾನೆ ನನ್ನ ಆಸ್ತಿ ಅನ್ನೋದು ಮೂರ್ಖತನದ ಹೇಳಿಕೆಯಾಗಿದೆ. ಶೂಟಿಂಗ್ ನಡೆಸಿದ್ರೆ ಆ ಜಾಗ ಹೇಗೇ ನನ್ನದಾಗುತ್ತೆ ಅನ್ನೋದನ್ನ ಅವರೇ ಹೇಳಿಕೊಡಲಿ. ಫ್ಯಾಕ್ಟರಿಯಲ್ಲಿ ಸುದೀಪ್, ದರ್ಶನ್ ಸೇರಿದಂತೆ ಎಷ್ಟೋ ನಟರ ಸಿನೆಮಾ ಶೂಟಿಂಗ್ ನಡೆದಿದೆ' ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ