ಕಾರವಾರಕ್ಕೆ ಬಂದಿಳಿದ ಡಿಫೆನ್ಸ್ ಸ್ಟ್ಯಾಂಡಿಂಗ್ ಕಮಿಟಿ

By Suvarna News  |  First Published Jan 20, 2021, 3:43 PM IST

ಡಿಫೆನ್ಸ್ ಸ್ಟ್ಯಾಂಡಿಂಗ್ ಕಮಿಟಿಯ 30 ಮಂದಿ ಸದಸ್ಯರು ಹಾಗೂ ಅಧಿಕಾರಿಗಳು ಕಾರವಾರ ನೇವಲ್ ಬೇಸ್‌ಗೆ ಆಗಮಿಸಿದ್ದಾರೆ. ಅಧ್ಯಯನದ ಉದ್ದೇಶದಿಂದ ಭೇಟಿ ನೀಡಿದ್ದಾರೆ


ಕಾರವಾರ (ಜ.20): ಅಧ್ಯಯನ ಉದ್ದೇಶದಿಂದ ಡಿಫೆನ್ಸ್ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯರು ಹಾಗೂ ಅಧಿಕಾರಿಗಳು ಕಾರವಾರ ನೇವಲ್ ಬೇಸ್‌ಗೆ ಆಗಮಿಸಿದ್ದಾರೆ. 

ಚೇರ್‌ಪರ್ಸನ್ ಜುಯಲ್ ಓರಮ್, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾದ ಶರದ್ ಪವಾರ್, ಅಜಯ್ ಭಟ್, ಪ್ರೊ. ರಾಮ್ ಶಂಕರ್ ಕಥೇರಿಯಾ, ಜುಗಲ್ ಕಿಶೋರ್ ಶರ್ಮಾ, ಡಾ. ಶ್ರೀಕಾಂತ್ ಏಕನಾಥ್ ಶಿಂಧೆ, ಪ್ರತಾಪ್ ಸಿಂಹ, ಪ್ರೇಮ್ ಚಂದ್ ಗುಪ್ತ, ಶರದ್ ಪವಾರ್, ಸಂಜಯ್ ರೌತ್, ಕಾಮಾಖ್ಯಾ ಪ್ರಸಾದ್, ಸುದಾನ್ಶು ತ್ರಿವೇದಿ ಸೇರಿ 30 ಮಂದಿ ಭೇಟಿ ನೀಡಿದ್ದಾರೆ.

Latest Videos

undefined

ಶರದ್ ಪವಾರ್ ಸೇರಿ 11 ಮಂದಿ ರಾಜ್ಯಸಭೆ, ಲೋಕಸಭೆ ಸದಸ್ಯರಿಗೆ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಇನ್ನು ಗೋವಾ ಬಾರ್ಡರ್‌ನಲ್ಲಿ ಭಿಗಿ ಬಂದೋಬಸ್ತ್ ಒದಗಿಸಲಾಗಿದೆ.  ಗೋವಾ ಪೊಲೀಸರು, ಕರ್ನಾಟಕ ಪೊಲೀಸರು, ನೇವಿ ಅಧಿಕಾರಿಗಳಿಂದ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಿದ್ದಾರೆ. 

ರಕ್ಷಣಾ ಪಡೆ ಅಧಿಕಾರಿಗಳ ನಿವೃತ್ತಿ ವಯೋಮಿತಿ ಹೆಚ್ಚಳ? ...
 
ನೇವಿ ಅಧಿಕಾರಿಗಳು ಲೋಕಸಭೆ, ರಾಜ್ಯ ಸಭೆ ಹಾಗೂ ಲೋಕಸಭೆಯ ಸೆಕ್ರೇಟರಿಯೇಟ್ ಅಧಿಕಾರಿಗಳು ಅಧ್ಯಯನಕ್ಕಾಗಿ ಆಗಮಿಸಿದ್ದಾರೆ.

ಸುಮಾರು 30 ವಾಹನಗಳಲ್ಲಿ ಬಂದಿದ್ದು,  ನೇವಲ್ ಬೇಸ್‌ನ ಎರಡನೇ ಹಂತದ ಕಾಮಗಾರಿ, ವಜ್ರಕೋಶ, ನಾಗರಿಕ ವಿಮಾನಯಾನ ಸೇವೆ, ಟ್ಯುಪೋಲೆವ್ ಯುದ್ಧ ವಿಮಾನದ ಮ್ಯೂಸಿಯಂ ನಿರ್ಮಾಣದ ಸ್ಥಳ ವೀಕ್ಷಣೆ ಹಾಗೂ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ.

click me!