ರಾಜ್ಯದಲ್ಲಿ ಆಡಳಿತ ನಡೆಸಿ ಅನುಭವವುಳ್ಳ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರುವುದು ತಪ್ಪೆಂದು ಹೇಳಿ ಕೆರಗೋಡಿನಿಂದ ಪಾದಯಾತ್ರೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಕೊಡುತ್ತಾರೆಂದರೆ ಅದು ಈ ದೇಶದ ದುರಂತವೇ ಸರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಾಗಮಂಗಲ (ಜ.30) ರಾಜ್ಯದಲ್ಲಿ ಆಡಳಿತ ನಡೆಸಿ ಅನುಭವವುಳ್ಳ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರಿ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರುವುದು ತಪ್ಪೆಂದು ಹೇಳಿ ಕೆರಗೋಡಿನಿಂದ ಪಾದಯಾತ್ರೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಕೊಡುತ್ತಾರೆಂದರೆ ಅದು ಈ ದೇಶದ ದುರಂತವೇ ಸರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಅದ್ದೀಹಳ್ಳಿ ಸರ್ಕಲ್‌ನ ಸರ್ಕಾರಿ ಶಾಲೆಯಲ್ಲಿ ನೂತನವಾಗಿ ತೆರೆದಿರುವ ಕೂಸಿನ ಮನೆಯನ್ನು ಉದ್ಘಾಟಿಸಿದ ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನಕ್ಕೆ ಗೌರವ ಕೊಡದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಕೊಟ್ಟಿರುವ ತೀರ್ಮಾನ ಇಷ್ಟವಾಗದೆ ಈ ಕೆಲಸ ಮಾಡುತ್ತಿದ್ದಾರೆ.ಇವರಿಗೆ ಜಿಲ್ಲೆಯ ಜನ ಬುದ್ಧಿ ಕಲಿಸುತ್ತಾರೆ ಎಂದು ಮಾಜಿ ಸಿಎಂ ಎಚ್ಡಿಕೆ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ವಿರುದ್ಧ ಕಿಡಿಕಾರಿದರು.
ಶಾಸಕ ಲಕ್ಷ್ಮಣ್ ಸವದಿ ಸಂವಿಧಾನ ಬದಲಾವಣೆ ಮಾತು! ಹೇಳಿದ್ದೇನು?
ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿ ಚುನಾವಣಾ ರಾಜಕಾರಣ ಮಾಡುತ್ತಿರುವ ಇವರ ಕ್ರಮವನ್ನು ಜಿಲ್ಲೆಯ ಜನತೆಯ ಪರವಾಗಿ ಖಂಡಿಸುತ್ತೇನೆ. ಜಿಲ್ಲೆಯಲ್ಲಿ ಇಂತಹ ವಿಚಾರಗಳನ್ನು ಬಿತ್ತಿ, ಕಟ್ಟಡಗಳ ಮತ್ತು ಬ್ಯಾನರ್‌ಗಳ ಮೇಲೆ ಕಲ್ಲು ಹಾಕುವ ಮೂಲಕ ಕಾನೂನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಎರಡು ದಿನಗಳ ಕಾಲ ಬಹಳ ಕೆಟ್ಟದಾಗಿ ನಡೆದುಕೊಂಡು ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಲು ಬಂದಿದ್ದಾರೆಯೇ ವಿನಃ ಬೇರೇನೂ ಇಲ್ಲ. ಕೆರಗೋಡಿನಲ್ಲಿ ಹನುಮಧ್ವಜ ಹಾರಿಸಿರುವ ಯುವಕರ ಬಗ್ಗೆ ನಮಗೆ ಇಂದಿಗೂ ಗೌರವವಿದೆ. ಅವರೊಂದಿಗೆ ಕುಳಿತು ಮಾತನಾಡಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ನಾವೂ ಸಹ ಸಿದ್ಧರಿದ್ದೇವೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಹತಾಶರಾಗಿರುವ ಜೆಡಿಎಸ್ ನಾಯಕರು ಜಾತ್ಯಾತೀತ, ರೈತರ ಪರ, ನೀರಾವರಿ ಪರ, ಅಭಿವೃದ್ಧಿಪರ ಎನ್ನುತ್ತಿದ್ದರು. ಸದ್ಯ ಯಾವುದೇ ಅವಕಾಶಗಳು ಸಿಗದಿದ್ದಾಗ ಬಿಜೆಪಿ ಪಕ್ಷದೊಂದಿಗೆ ನಿಂತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಬುದ್ಧಿವಂತರಾಗಿರುವುದಕ್ಕೆ ಸುಮ್ಮನಿದ್ದಾರೆ. ಆರ್. ಅಶೋಕ್ ಭಾನುವಾರ ಬಂದು ಹೋಗಿ ಕೈತಪ್ಪಿಸಿಕೊಂಡಿದ್ದಾರೆ. ಆದರೆ, ಜೆಡಿಎಸ್ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ದುರಂತವೇ ಸರಿ ಎಂದು ಮಾಜಿ ಸಿಎಂ ಎಚ್ಡಿಕೆಯವರನ್ನು ಜರಿದರು.
2018ರ ಚುನಾವಣೆಯಲ್ಲಿ ನಾವೂ ಜಿಲ್ಲೆಯಲ್ಲಿ ಸೋತು ಐದು ವರ್ಷ ಸುಮ್ಮನಿದ್ದೆವು. ಆದರೆ, ಇವರ ರೀತಿ ಜನರ ಶಾಂತಿ, ನೆಮ್ಮದಿಯನ್ನು ಹಾಳು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಕೆಲಸ ಮಾಡಿರಲಿಲ್ಲ. ಕೆರಗೋಡಿನ ಧ್ವಜ ಪ್ರಕರಣ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಿಲ್ಲೆಯ ಜನರು ಬಹಳ ಬುದ್ಧಿವಂತರಿದ್ದಾರೆ. ಜೆಡಿಎಸ್ ಬಿಜೆಪಿ ನಾಯಕರ ಈ ಹೋರಾಟಕ್ಕೆ ಹಿನ್ನಡೆಯಾಗುವುದೇ ವಿನಃ ಅನುಕೂಲವಾಗುವುದಿಲ್ಲ ಎಂದು ತಿಳಿಸಿದರು.
ಹನುಮ ಮತ್ತು ಶ್ರೀರಾಮನ ಬಗ್ಗೆ ಅವರಿಗಿಂತಲೂ ನಮಗೆ ಅಪಾರ ಭಕ್ತಿ, ಗೌರವವಿದೆ. ನಾವೂ ಮೇಲುಕೋಟೆಯ ಚಲುವನಾರಾಯಣಸ್ವಾಮಿಯನ್ನು ಪೂಜಿಸುವವರು. ಕೆರಗೋಡು ಗ್ರಾಪಂನ ಸಭಾ ನಡವಳಿಯಲ್ಲಿ ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸುವುದಕ್ಕೆ ಮಾತ್ರ ಅವಕಾಶ ಎಂದು ಅನುಮೋದಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಅದರಲ್ಲೂ ವಿಶೇಷ ದಿನಗಳಲ್ಲಿ ಮಾತ್ರ ರಾಷ್ಟ್ರಧ್ವಜ ಹಾರಿಸಲು ಕಾನೂನಿನಲ್ಲಿ ಅವಕಾಶವಿದೆ. ಕಾರಣಾಂತರದಿಂದ ಆ ಸ್ಥಳದಲ್ಲಿ ಹನುಮಧ್ವಜ ಹಾರಿಸಿರುವ ಅಲ್ಲಿನ ಯುವಕರು, ಖಾಸಗಿ ಜಾಗದಲ್ಲಿ ಹನುಮ ಧ್ವಜ ಹಾರಿಸುತ್ತೇವೆ. ಇಲ್ಲಿ ರಾಷ್ಟ್ರಧ್ವಜ ಹಾರಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಮಾತನಾಡಿದ್ದಾರೆ. ಸ್ಥಳೀಯ ಶಾಸಕರು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ರಾಷ್ಟ್ರಧ್ಜಜಾರೋಹಣ ಮಾಡಿದ್ದಾರೆ. ಆದರೂ ಇವರ ಉದ್ದೇಶವೇನು? ರಾಷ್ಟ್ರಧ್ವಜದ ವಿರುದ್ಧವಾಗಿದ್ದಾರೋ ಅಥವಾ ರಾಷ್ಟ್ರಧ್ವಜವನ್ನು ಇಳಿಸಬೇಕೆಂದು ಬಂದಿದ್ದಾರೋ ನಮಗೆ ಅರ್ಥವಾಗುತ್ತಿಲ್ಲ ಎಂದರು.
ಕೆರಗೋಡು ಗ್ರಾಮದ ಸೂಕ್ತ ಸ್ಥಳದಲ್ಲಿ ಹನುಮ ಧ್ವಜ ಹಾರಿಸಲು ನಮ್ಮ ಯಾವುದೇ ಅಭ್ಯಂತರವಿಲ್ಲ. ಸ್ಥಳೀಯ ಜನರು ಇಚ್ಛಿಸಿದರೆ ಕಾನೂನು ಬದ್ಧವಾಗಿ ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಷ್ಟ್ರಧ್ವಜ ಯಾವಾಗ ಹಾರಿಸಬೇಕು ಅನ್ನೋ ಪ್ರಜ್ಞೆ ಇಲ್ವಾ?
ಕಾಂಗ್ರೆಸ್ ಹಿಂದು ವಿರೋಧಿಯೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಹನುಮ ಧ್ವಜ, ಕೇಸರಿ ಧ್ವಜ ಯಾವುದೋ ಪಕ್ಷ, ಜಾತಿ, ವ್ಯಕ್ತಿಯದ್ದಲ್ಲ, ಹನುಮ ಧ್ವಜ ಧರ್ಮ ಧ್ವಜ. ಸಾವಿರಾರು ವರ್ಷಗಳಿಂದ ಈ ನೆಲದ ಮೇಲೆ ಗುಡಿ-ಗುಂಡಾರಗಳ ಮೆಲೆ ಹಾರಾಡುತ್ತಿರುವ ಕೇಸರಿ ಧ್ವಜ. ಸರ್ಕಾರಕ್ಕೇನು ತೊಂದರೆ ಮಾಡಿತ್ತೋ ಗೊತ್ತಿಲ್ಲ. 108 ಅಡಿ ಎತ್ತರದ ಕಂಬದ ಮೇಲೆ ಧ್ವಜ ಹಾಕಬೇಕಾದರೆ ಅಲ್ಲಿಯ ಯುವಕರ ಉತ್ಸಾಹ, ಆನಂದ ಎಂತಹದ್ದು. ಏಕಾಏಕಿ ಅದನ್ನು ತೆಗೆದುಹಾಕಿ ರಾಷ್ಟ್ರಧ್ವಜ ಹಾಕುತ್ತೀರಿ ಅಂದ್ರೆ, ರಾಷ್ಟ್ರ ಧ್ವಜ ಹಾಕೋದಕ್ಕೂ ಒಂದು ನಿಯಮವಿದೆ. ಅದನ್ನು ಉಲ್ಲಂಘನೆ ಮಾಡಿದ್ದೀರಿ. ಅಲ್ಲಿ ಇನ್ನೊಮ್ಮೆ ಕೇಸರಿ ಧ್ವಜ ಹಾಕಬಾರದು ಅನ್ನೋ ಏಕೈಕ ದೃಷ್ಟಿಯಿಂದ ರಾಷ್ಟ್ರಧ್ವಜ ಹಾಕಿದ್ದೀರಿ ಎಂದು ದೂರಿದರು.
ಕೆರಗೋಡು ಹನುಮ ಧ್ವಜ ಪ್ರಕರಣ: ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದ ಚಲುವರಾಯಸ್ವಾಮಿ
ರಾಷ್ಟ್ರಧ್ವಜ ಯಾವಾಗ ಹಾಕಬೇಕು ಅನ್ನೋ ಪ್ರಜ್ಞೆಯೂ ಇಲ್ವಾ ನಿಮಗೆ? ನಾಚಿಕೆ ಆಗಲ್ವಾ, ನೀವು ದೇಶ ದ್ರೋಹದ ಕೆಲಸ ಮಾಡಿದ್ದೀರಿ. ಇದು ಅಕ್ಷಮ್ಯ ಅಪರಾಧ. ಅದೇ ಸ್ಥಳದಲ್ಲಿ ಕೇಸರಿ ಧ್ವಜ ಹಾಕಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಇಲ್ಲಾಂದ್ರೆ ಈಗಾಗಲೆ ರಾಜ್ಯಾದ್ಯಂತ ಹೋರಾಟ ಪ್ರಾರಂಭ ಮಾಡಿದ್ದಾರೆ. ನಾವು ಇನ್ನೂ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.