ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ!

By Kannadaprabha News  |  First Published Sep 30, 2024, 1:03 PM IST

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅಭಿಯಾನಿಯೊಬ್ಬರು ರಕ್ತದಲ್ಲಿ ಸಿದ್ದರಾಮಯ್ಯ ಅವರಿಗೆ ರಕ್ತ ಪತ್ರ‌ ಬರೆದಿದ್ದಾರೆ.


ಮಂಡ್ಯ (ಸೆ.30) : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಅಭಿಯಾನಿಯೊಬ್ಬರು ರಕ್ತದಲ್ಲಿ ಸಿದ್ದರಾಮಯ್ಯ ಅವರಿಗೆ ರಕ್ತ ಪತ್ರ‌ ಬರೆದಿದ್ದಾರೆ.

ತಾಲೂಕಿನ ಮೊತ್ತಹಳ್ಳಿ ಗ್ರಾಮದ ಸಚಿನ್ ರಕ್ತದಲ್ಲಿ ಪತ್ರ ಬರೆದಿರುವ ಅಭಿಮಾನಿ. ಸಿಎಂ ಸಿದ್ದರಾಮಯ್ಯ ಅವರ ಹುಚ್ಚು ಅಭಿಮಾನಿಯಾಗಿರುವ ಸಚಿನ್ ಕೈನಿಂದ ರಕ್ತ ತೆಗೆದು ನಂತರ ರಕ್ತದಲ್ಲಿ ಪತ್ರ ಬರೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಡಿ.ದೇವರಾಜು ಅರಸು ನಂತರ ಅತಿ ಹೆಚ್ಚು ಸರ್ಕಾರಿ ಯೋಜನೆ ಬಡ ಜನರಿಗೆ ನೀಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ಬಡವರು, ದೀನ‌ ದಲಿತರ ಪರ ಕೆಲಸ ಮಾಡುತ್ತೀದ್ದೀರಿ. ಮೈಸೂರು ಮೂಡಾ ಹಗರಣದ ವಿಚಾರದಲ್ಲಿ ನೀವು ರಾಜೀನಾಮೇ ನೀಡಬಾರದು. ನಿಮ್ಮೋಂದಿಗೆ ನಾವಿದ್ದೇವೆ. ರಾಜ್ಯ ಬಡ ಜನರಿದ್ದಾರೆ ಎಂದು ಅಪ್ಪಟ ಅಭಿಮಾನಿಯಾದ ಸಚಿನ್ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಸಿಎಂ ವಿರುದ್ಧ ನಾವು ಷಡ್ಯಂತ್ರ ಮಾಡಿಲ್ಲ; ಮುಡಾ ಹಗರಣ ಬಯಲು ಮಾಡಿದ್ದೇ ಕಾಂಗ್ರೆಸ್‌ನವರು: ಯತ್ನಾಳ್

click me!