
ಬೆಂಗಳೂರು (ಅ.4): ಮಲ್ಲಿಕಾರ್ಜುನ ಖರ್ಗೆ ಸರ್ ಆರೋಗ್ಯವಾಗಿದ್ದಾರೆ. ಅವರಿಗೆ ರೆಸ್ಟ್ ಬೇಕಿದೆ ಎಂದು ನಟಿ ರಮ್ಯಾ ಹೇಳಿದರು. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.
ಖರ್ಗೆ ಸರ್ ಆರಾಮಿದ್ದಾರೆ ಅಷ್ಟೇ ಸಾಕು:
ಖರ್ಗೆ ಸರ್ ಈ ವಯಸ್ಸಲ್ಲಿ ದೇಶಾದ್ಯಂತ ಟೂರ್ ಮಾಡ್ತಾರೆ. ದೇಶಾದ್ಯಂತ ಚುನಾವಣೆ ರಾಲಿಗಳಲ್ಲಿ ಭಾಗಿಯಾಗುತ್ತಾರೆ. ಅವರ ನಮಗೆಲ್ಲ ಸ್ಫೂರ್ತಿ. ದೈಹಿಕ ಶಕ್ತಿಗಿಂತ ಅವರ ಸ್ಪಿರಿಟ್ ದೊಡ್ಡದು. ಸದ್ಯ ಅವರಿಗೆ ರೆಸ್ಟ್ ಬೇಕಿದೆ. ಡಾಕ್ಟರ್ ಟ್ರಾವೆಲ್ ಜಾಸ್ತಿ ಮಾಡಬಾರದು ಅಂತಾ ಹೇಳಿದ್ದಾರೆ ಎಂದರು.
ಇದನ್ನೂ ಓದಿ: Mallikarjun Kharge health update : ಮೈನರ್ ಸರ್ಜರಿ ಯಶಸ್ವಿ, ಪರ್ಮನೆಂಟ್ ಪೇಸ್ ಮೇಕರ್ ಅಳವಡಿಸಿದ ವೈದ್ಯರು!
ಖರ್ಗೆ ಸರ್ ನನ್ನ ಬಗ್ಗೆ ಕೇಳಿದ್ರು ಎಂದ ರಮ್ಯಾ:
ಖರ್ಗೆ ಸರ್ ನನ್ನ ಬಗ್ಗೆ ಕೇಳಿದರು, ಮತ್ತೆ ರಾಜಕೀಯಕ್ಕೆ ಬರುತ್ತೀರಾ 'ನಾನು ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಯೋಚಿಸಿಲ್ಲ, ಆ ರೀತಿ ರಾಜಕಾರಣಕ್ಕೆ ಬರುವ ಯೋಚನೆ ಇದ್ದರೆ ಮೊದಲು ನಿಮಗೆ ಹೇಳ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಹೃದಯ ಬಡಿತದ ವ್ಯತ್ಯಾಸವಾದ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ಜಯದೇವ ಆಸ್ಪತ್ರೆಯ ವೈದ್ಯರು ಪರ್ಮನೆಂಟ್ ಪೇಸ್‌ಮೇಕರ್ ಅಳವಡಿಸಿದ್ದಾರೆ. ಸದ್ಯ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಖರ್ಗೆ ಅವರ ನಿವಾಸಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ