ನಗರ ನಕ್ಸಲರನ್ನು ನಕ್ಸಲ್‌ ಮುಕ್ತ ಮಾಡಿ: ಬಿಜೆಪಿ ಎಂಎಲ್‌ಸಿ ರವಿಕುಮಾ‌ರ್

By Kannadaprabha News  |  First Published Jan 10, 2025, 11:39 AM IST

ಕಾಡಿನ ನಕ್ಸಲರು ಬೆಳೆಯಲು ನಾಡಿನ ನಕ್ಸಲರೇ ಕಾರಣ. ಈ ಹಿನ್ನೆಲೆಯಲ್ಲಿ ನಗರ ನಕ್ಸಲರು ನಕ್ಸಲ್ ಮುಕ್ತ ರಾಗುವಂತೆ ಮಾಡಿದರೆ ನಕ್ಸಲ್ ಮುಕ್ತ ಕರ್ನಾಟಕ ಮಾಡಲು ಸಾಧ್ಯ. ಆರು ಮಂದಿ ಕಾಡಿನ ನಕ್ಸಲರು ಶರ ಣಾಗತರಾಗಿ ನಾಡಿಗೆ ಬರುತ್ತಿರುವುದು ಸ್ವಾಗತಾರ್ಹ. ಆದರೆ ಅವರನ್ನು ಹೀರೋಗಳಂತೆ ಬಿಂಬಿಸಬಾರದು: ವಿಧಾನಪರಿಷತ್ ಸದಸ್ಯ ರವಿಕುಮಾ‌ರ್ 


ಬೆಂಗಳೂರು(ಜ.10): ನಕ್ಸಲ್ ಮುಕ್ತ ಕರ್ನಾಟಕ ಮಾಡಬೇಕೆಂದರೆ ನಗರ ನಕ್ಸಲರು ನಕ್ಸಲ್ ಮುಕ್ತರಾಗುವಂತೆ ಮಾಡಬೇಕಾದುದು ಸರ್ಕಾರದ ಕರ್ತವ್ಯ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾ‌ರ್ ತಿಳಿಸಿದ್ದಾರೆ. 

ಕಾಡಿನ ನಕ್ಸಲರು ಬೆಳೆಯಲು ನಾಡಿನ ನಕ್ಸಲರೇ ಕಾರಣ. ಈ ಹಿನ್ನೆಲೆಯಲ್ಲಿ ನಗರ ನಕ್ಸಲರು ನಕ್ಸಲ್ ಮುಕ್ತ ರಾಗುವಂತೆ ಮಾಡಿದರೆ ನಕ್ಸಲ್ ಮುಕ್ತ ಕರ್ನಾಟಕ ಮಾಡಲು ಸಾಧ್ಯ. ಆರು ಮಂದಿ ಕಾಡಿನ ನಕ್ಸಲರು ಶರ ಣಾಗತರಾಗಿ ನಾಡಿಗೆ ಬರುತ್ತಿರುವುದು ಸ್ವಾಗತಾರ್ಹ. ಆದರೆ ಅವರನ್ನು ಹೀರೋಗಳಂತೆ ಬಿಂಬಿಸಬಾರದು. ಒಂದು ವೇಳೆ ಹಾಗೆ ಬಿಂಬಿಸಿದರೆ ಅವರಿಂದ ತೊಂದರೆ ಅನುಭವಿಸಿದವರು, ಸಾವು-ನೋವಿಗೆ ಒಳಗಾದ ನಾಗರಿಕ ಕುಟುಂಬಗಳಿಗೆ ಸರ್ಕಾರವೇ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಹೇಳಿದ್ದಾರೆ. 

Tap to resize

Latest Videos

ಶರಣಾಗತಿಗೂ ಮುನ್ನ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲೇ ಬಚ್ಚಿಟ್ಟಿರುವ ನಕ್ಸಲರು!

ಅಲ್ಲದೇ, ನಕ್ಸಲರ ವಿಚಾರಕ್ಕೆ ನಗರ ನಕ್ಸಲರಿಗೆ ಸರ್ಕಾರವೇ ಪರೋಕ್ಷವಾಗಿ ಬೆಂಬಲ ನೀಡಿದಂತಾಗುತ್ತದೆ. ಆಗ ಇದನ್ನು ನಕ್ಸಲರ ಶರಣಾಗತಿಗೆ ಎನ್ನುವುದಿಲ್ಲ. ಬದಲಿಗೆ ಸರ್ಕಾರವೇ ನಕ್ಸಲರಿಗೆ ಶರಣಾಗತಿ ಆಗಿದೆ ಎನ್ನಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ. 

ಇತ್ತೀಚೆಗೆ ಪೋಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಕ್ಸಲ್ ನಾಯಕನೊಬ್ಬನನ್ನು ಎನ್‌ಕೌಂಟರ್ ಮಾಡಿದಾಗ ಮಾಜಿ ನಕ್ಸಲರೆಲ್ಲ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂದರು. ಇವರೆಲ್ಲರೂ ಕಾಂಗ್ರೆಸ್ ಪರವಾಗಿರುವ ಸ್ವಯಂಘೋಷಿತ ವಿಚಾರವಾದಿಗಳಾಗಿದ್ದಾರೆ. ಹತ್ತಾರು ವರ್ಷ ಪೊಲೀಸರಿಗೆ ಸಿಗದಿರುವವರು ನಗರ ನಕ್ಸಲರಿಗೆ ಸುಲಭವಾಗಿ ಸಿಗುತ್ತಾರೆ ಎಂದರೆ ಏನರ್ಥ? ಪೊಲೀಸರು ಸ್ಪಷ್ಟಿಕರಣ ನೀಡಬೇಕು ಎಂದಿದ್ದಾರೆ.

ಸರ್ಕಾರವೇ ನಕ್ಸಲರಿಗೆ ಶರಣಾದ ರೀತಿ ಇದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಮಟ್ಟದ ಲ್ಲಿಯೇ ನಕ್ಸಲ್ ಶರಣಾಗತಿ ಪ್ರಕ್ರಿಯೆ ನಡೆಯಬೇಕು. ಆದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದಿದೆ. ನಕ್ಸಲರು ಶರಣಾ ಗುವ ಪ್ರಕ್ರಿಯೆ ಸ್ವಾಗತಾರ್ಹವಾದರೂ, ಬುಧವಾರ ನಡೆದದ್ದು ನಕ್ಸಲ್ ಶರಣಾಗತಿ ಎನ್ನುವುದಕ್ಕಿಂತ ಸರ್ಕಾರವೇ ಶರಣಾದ ರೀತಿ ಇತ್ತು ಎಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಸಮಾಜವನ್ನು ಬೆಚ್ಚಿಬೀಳಿಸಿದೆ: ಸುನೀಲ್ ಕುಮಾರ್‌

ಕಾರ್ಕಳ:  ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜ ವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್‌ ಹೇಳಿದ್ದಾರೆ. 

ರಾಜ್ಯ ಸರ್ಕಾರದ ಮುಂದೆ 18 ಬೇಡಿಕೆಗಳನ್ನಿಟ್ಟ ನಕ್ಸಲರು

ಈ ಕುರಿತು ಟ್ವಿಟ್ ಮಾಡಿರುವ ಅವರು, ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬು ದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರಿಗೆ, ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ ಸಿಗುತ್ತದೆ ಎಂದು ಟೀಕಿಸಿದ್ದಾರೆ. 

ಭೂಗತ ಚಟುವಟಿಕೆ ನಡೆಸಿ ತಲೆಮರೆಸಿಕೊಂಡಿದ್ದ ನಕ್ಸಲರು ಶರಣಾಗಬೇಕಿರುವುದು ಸಂಬಂಧಪಟ್ಟ ಎಸ್ಪಿ ಕಚೇರಿ ಅಥವಾ ಸಬ್ ಇನ್ಸ್‌ಪೆಕ್ಟರ್ ಎದುರು. ಆದರೆ ಮುಖ್ಯಮಂತ್ರಿ ತಮ್ಮ ಅಧಿಕೃತ ಕಚೇರಿಯಲ್ಲಿ ನಕ್ಸಲರನ್ನು ಸ್ವಾಗತಿಸಲು ನಡು ಬಗ್ಗಿಸಿ ನಿಂತಿದ್ದಾರೆ. ಕರ್ನಾಟಕದಲ್ಲಿ ಕಾನೂನಿನ ಕೊಲೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.

click me!