ಟೊಮೆಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಯುವ ರೈತ ಮಹೇಶ್ ಹಿರೇಮಠ!

By Ravi Janekal  |  First Published Jul 15, 2023, 1:49 PM IST

: ಟೊಮೆಟೋ ಬೆಳೆಗೆ ಈಗ ಬಂಗಾರದ ಬೆಲೆ ಬಂದಿದೆ. ಎಲ್ಲೆಡೆ ಟೊಮೆಟೋಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಕೆಲವೇ ರೈತರು ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ.


ಚಿಕ್ಕೋಡಿ (ಜು.15) : ಟೊಮೆಟೋ ಬೆಳೆಗೆ ಈಗ ಬಂಗಾರದ ಬೆಲೆ ಬಂದಿದೆ. ಎಲ್ಲೆಡೆ ಟೊಮೆಟೋಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಕೆಲವೇ ರೈತರು ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವ ರೈತ ಮಹೇಶ ಹಿರೇಮಠ ಟೊಮೆಟೋ ಕೃಷಿ ಮಾಡಿ ಇಂತಹ ಅಭೂತಪೂರ್ವ ಸಾಧನೆ ಮಾಡಿದ್ದಾನೆ. 20 ಗುಂಟೆಯಲ್ಲಿ ಟೊಮೆಟೊ ಬೆಳೆದು 11 ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಜಮೀನು ಇದ್ದರೂ ಕೆಲಸ ಇಲ್ಲ ಅನ್ನೋ ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾನೆ.

Tap to resize

Latest Videos

ಕೋಲಾರ: ಟೊಮೆಟೋ ಕಳ್ಳತನ ತಪ್ಪಿಸಲು ಹೊಲದಲ್ಲೇ ಟೆಂಟ್‌ ಹಾಕಿದ ರೈತರು..!

ಬಿಎ ಪದವೀಧರ ಆಗಿರುವ ಯುವ ರೈತ ಮಹೇಶ್ ಹಿರೇಮಠ ಮಾರ್ಚ್ ತಿಂಗಳಲ್ಲಿ 20 ಗುಂಟೆ ಹೊಲದಲ್ಲಿ 3700 ಟೊಮ್ಯಾಟೊ ಸಸಿ ನಾಟಿ ಮಾಡಿದ್ದ. ಒಟ್ಟು ಎರಡು ಲಕ್ಷ ರೂ. ಖರ್ಚು ಮಾಡಿ ವೈಜ್ಞಾನಿಕ ಕೃಷಿ, ಹನಿ ನೀರಾವರಿ ಮೂಲಕ ಟೊಮ್ಯಾಟೊ ಬೆಳೆದಿರುವ ರೈತ. ಕಳೆದ 45 ದಿನಗಳಿಂದ ಟೊಮ್ಯಾಟೊ ಕೋಯ್ಲು ಆರಂಭಿಸಿದ್ದ. ಫಸಲು ಬರುತ್ತಿದ್ದಂತೆ ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಸಂಕೇಶ್ವರ ಎಪಿಎಂಸಿಗೆ ಟೊಮ್ಯಾಟೊ ಸರಬರಾಜು ಮಾಡಿದ್ದಾನೆ. ಕೇವಲ 45 ದಿನಗಳಲ್ಲಿ 20 ಟನ್ 400 ಕೆಜಿಯಷ್ಟು ಟೊಮ್ಯಾಟೊ ಇಳುವರಿಯಿಂದ ಬರೋಬ್ಬರಿ  9 ಲಕ್ಷರೂ ಆದಾಯ ಗಳಿಸಿರುವ ಯುವ ರೈತ ಮಹೇಶ ಹಿರೇಮಠ ಇತರರಿಗೆ ಮಾದರಿಯಾಗಿದ್ದಾನೆ.

click me!