
ಬೆಳಗಾವಿ(ಅ.25): ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಎಂಇಎಸ್ ಮುಖಂಡರನ್ನು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನಿರ್ಲಕ್ಷಿಸಿದ ಘಟನೆ ನಡೆದಿದೆ.
ಗಡಿ ವಿವಾದ ಸಂಬಂಧ ಮಹಾ ಸಿಎಂ ಮುಂದೆ ಬೇಡಿಕೆ ಮಂಡಿಸಲು ಎಂಇಎಸ್ ಮುಖಂಡರಾದ ದೀಪಕ್ ದಳವಿ, ಮಾಜಿ ಶಾಸಕ ಅರವಿಂದ್ ಪಾಟೀಲ್ ಸೇರಿ ಹಲವು ಮುಖಂಡರು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಈ ವೇಳೆ ಕರ್ನಾಟಕ ಸರ್ಕಾರ, ಕರ್ನಾಟಕ ಪೊಲೀಸರ ವಿರುದ್ಧ ಎಂಇಎಸ್ ಮುಖಂಡರು ಫಡ್ನವೀಸ್ ಬಳಿ ದೂರು ನೀಡಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬದಲಾಗಿದ್ದು, ಆದಷ್ಟು ಬೇಗ ಗಡಿ ವಿವಾದ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಫಡ್ವೀಸ್ ಅವರನ್ನು ಒತ್ತಾಯಿಸಿದರು.
ತಮ್ಮನ್ನು ಭೇಟಿಯಾಗುವುದೇ ದೊಡ್ಡ ಸಮಸ್ಯೆ ಎಂದು ಮಹಾ ಸಿಎಂ ಫಡ್ನವೀಸ್ ಮುಂದೆ ಅಳಲು ತೋಡಿಕೊಂಡ ಎಂಇಎಸ್ ಮುಖಂಡರು, ಶೀಘ್ರವೇ ಗಡಿ ವಿಚಾರವಾಗಿ ಚರ್ಚಿಸಲು ಸಭೆ ಕರೆಯುವಂತೆ ಒತ್ತಾಯಿಸಿದರು.
ಆದರೆ ಎಂಇಎಸ್ ಮುಖಂಡರಿಂದ ಕೇವಲ ಹೂಗುಚ್ಛ ಸ್ವೀಕರಿಸಿ ಅವರ ದೂರನ್ನು ನಿರ್ಲಕ್ಷಿಸಿದ ದೇವೇಂದ್ರ ಫಡ್ನವೀಸ್, ಎಂಇಎಸ್ ಮುಖಂಡರಿಗೆ ಮುಜುಗರ ಉಂಟು ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ