ರೋಲ್‌ಕಾಲ್ ಶ್ರೀಗಳಿಂದ‘ಕೈ’ ಭವಿಷ್ಯ ನಿರ್ಧಾರ ಆಗಲ್ಲ: ಬ್ರಹ್ಮಾಂಡ ಗುರೂಜಿ ವಿರುದ್ಧ ಶಾಸಕ ಕಿಡಿ

Kannadaprabha News, Ravi Janekal |   | Kannada Prabha
Published : Oct 12, 2025, 07:36 AM IST
Maddur MLA K.M. Uday on Brahmanda Guruji

ಸಾರಾಂಶ

K.M. Uday on Brahmanda Guruji :ಮದ್ದೂರು ಶಾಸಕ ಕೆ.ಎಂ.ಉದಯ್, 'ರೋಲ್ ಕಾಲ್' ಗುರೂಜಿಗಳು ಕಾಂಗ್ರೆಸ್ ಭವಿಷ್ಯ ನಿರ್ಧರಿಸುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿಗೆ ತಿರುಗೇಟು ನೀಡಿದ್ದಾರೆ.  ಪಾಂಡವಪುರದ ಕೋಡಾಲ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಎನ್.ಡಿ. ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮದ್ದೂರು (ಅ.12): ರೋಲ್ ಕಾಲ್ ಮಾಡುವ ಗುರೂಜಿಗಳಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗುವುದಿಲ್ಲ. ನಾಡಿನ ಜನರೇ ಅದನ್ನು ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಬ್ರಹ್ಮಾಂಡ ಗುರೂಜಿ ಅವರಿಗೆ ತಿರುಗೇಟು ನೀಡಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಚಾಮನಹಳ್ಳಿ, ರಾಂಪುರ, ಸೊಳ್ಳೆಪುರ, ವಳಗೆರೆಹಳ್ಳಿ ಹಾಗೂ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಿಂದ ವಳೆಗೆರೆ ಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬ್ರಹ್ಮಾಂಡ ಗುರೂಜಿ ಮಾತಿನಿಂದ ಅಧಿಕಾರಕ್ಕೆ ಬಂದಿಲ್ಲ:

ಕಾಂಗ್ರೆಸ್ ಪಕ್ಷ ತನ್ನದೇ ಆದ ತತ್ವ, ಸಿದ್ಧಾಂತ ಹೊಂದಿದೆ. ಅದನ್ನು ನೋಡಿ ಜನರು ಆಶೀರ್ವಾದ ಮಾಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸಹ ಪಕ್ಷಕ್ಕೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಮೋದಿಗೆ ವೈರಾಗ್ಯ, ಖಾವಿಧಾರಿಗೆ ಪ್ರಧಾನಿ ಭಾಗ್ಯ; ಬ್ರಹ್ಮಾಂಡ ಭವಿಷ್ಯ!

ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯದ ಮತದಾರರು ನಿರ್ಧರಿಸುತ್ತಾರೆ. ಆದರೆ, ಕೇವಲ ಬ್ರಹ್ಮಾಂಡ ಗುರೂಜಿ ಹೇಳಿದರೆಂಬ ಒಂದು ಮಾತಿನಿಂದ ಯಾವ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಬ್ರಹ್ಮಾಂಡ ಗುರೂಜಿ ಹಿನ್ನೆಲೆ ಏನು?

ಬ್ರಹ್ಮಾಂಡ ಗುರೂಜಿ ಹಿನ್ನೆಲೆ ಏನು ಎನ್ನುವುದು ನನಗೆ ಗೊತ್ತಿದೆ. ಕೇವಲ ಟಿವಿ ಮುಂದೆ ಕುಳಿತುಕೊಂಡು ಬುರುಡೆ ಜ್ಯೋತಿಷ್ಯ ಹೇಳಿ ಮಂಕು ಬೂದಿ ಎರಚಿ ಜನರನ್ನು ಯಾಮಾರಿಸಿ ರೋಲ್ ಕಾಲ್ ಮೂಲಕ ಬದುಕು ನಡೆಸುತ್ತಿರುವ ಈತನಿಗೆ ಕಾಂಗ್ರೆಸ್ ಭವಿಷ್ಯ ಹೇಳುವ ನೈತಿಕ ಹಕ್ಕಿಲ್ಲ ಎಂದು ನೇರವಾಗಿ ಜಾಡಿಸಿದರು.

ನೀರು ಬಳಕೆದಾರರ ಸಂಘಕ್ಕೆ ದೇವೇಗೌಡ ಅಧ್ಯಕ್ಷರಾಗಿ ಆಯ್ಕೆ

ಪಾಂಡವಪುರ: ತಾಲೂಕಿನ ಕೋಡಾಲ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣಪುರ ಎನ್.ಡಿ. ದೇವೇಗೌಡ (ಸುಂದ್ರಣ್ಣ) ಹಾಗೂ ಉಪಾಧ್ಯಕ್ಷರಾಗಿ ಕೋಡಾಲ ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಎನ್.ಡಿ.ದೇವೇಗೌಡ (ಸಂದ್ರಣ್ಣ) ಮಾತನಾಡಿ, ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಂಘದ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಂಘದ ವ್ಯಾಪ್ತಿಯಲ್ಲಿ ಬರುವ ಕೃಷಿ ಚಟುವಟಿಕೆಗೆ ನೀರಾವರಿ ಅನುಕೂಲಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಹರಿಸಿ ಅನುದಾನ ತಂದು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಕಾಶ್ಮೀರ ಪುರವಾಸಿನಿಯ ಉಗ್ರರೂಪ: ದೇಶದ್ರೋಹಿಗಳ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ…

ನೂತನ ಅಧ್ಯಕ್ಷ ಎನ್.ಡಿ.ದೇವೇಗೌಡ (ಸುಂದ್ರಣ್ಣ) ಹಾಗೂ ಉಪಾಧ್ಯಕ್ಷರಾಗಿ ಕೋಡಾಲ ಕೃಷ್ಣೇಗೌಡ ಅವರನ್ನು ಎಲ್ಲಾ ಮುಖಂಡರು ಅಭಿನಂದಿಸಿದರು. ಈ ವೇಳೆ ನಿರ್ದೇಶಕರಾದ ಕೆ.ಯೋಗರಾಜ್, ನರಸೇಗೌಡ, ದೇವರಾಜ್, ಜೋಗೀಗೌಡ, ವೆಂಕಟರಾಮೇಗೌಡ, ಎಂ.ಕೆ.ಪ್ರಕಾಶ್, ಪುಟ್ಟಲಕ್ಷ್ಮಮ್ಮ, ಶಂಕರೇಗೌಡ, ಕರಿಶೆಟ್ಟಿ, ಕಾರ್ಯದರ್ಶಿ ನರಸಿಂಹೇಗೌಡ, ಚುನಾವಣಾಧಿಕಾರಿ ಅನಿಲ್‌ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್