
ಬೆಂಗಳೂರು (ಏ.8): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.
ಕೊಡಗು, ಬೆಳಗಾವಿ, ಬೀದರ್, ಮೈಸೂರು, ಶಿವಮೊಗ್ಗ, ಮಂಗಳೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 36.92 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 8 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
\\B1. ಜಿ.ಕೆ.ರೇವಣ್ ಕುಮಾರ್ ( ಸಹಾಯ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೋಕೋಪಯೋಗಿ ಇಲಾಖೆ, ಉಪ ವಿಭಾಗ, ಮೈಸೂರು):\\B 3 ಕಡೆ ದಾಳಿ, 4 ಸೈಟ್, 1 ಮನೆ, 2 ಎಕರೆ ಕೃಷಿ ಜಮೀನು, 2.96 ಕೋಟಿ ರು.ನ ಚಿನ್ನಾಭರಣ, 42.22 ಲಕ್ಷ ರು. ಮೌಲ್ಯದ ವಾಹನ ಸೇರಿ ಒಟ್ಟು 4.27 ಕೋಟಿ ರು. ಮೌಲ್ಯದ ಆಸ್ತಿ.
. ಅಜಯ್ ಸಿಂಗ್ (ಸಹಾಯಕ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿ ಕಚೇರಿ, ಬೆಳಗಾವಿ): 7 ಕಡೆ ದಾಳಿ, 7 ಸೈಟ್, 3 ಮನೆ, 12 ಎಕರೆ ಕೃಷಿ ಜಮೀನು, 6.22 ಲಕ್ಷ ರು. ನಗದು, 54.32 ಲಕ್ಷ ರು. ಮೌಲ್ಯದ ಚಿನ್ನಾಭರಣ, 19 ಲಕ್ಷ ರು.ನ ವಾಹನ, 2.35 ಕೋಟಿ ರು. ಬ್ಯಾಂಕ್ ಠೇವಣಿ ಸೇರಿದಂತೆ ಒಟ್ಟು 5.81 ಕೋಟಿ ರು. ಮೌಲ್ಯದ ಆಸ್ತಿ.
. ಬಿ.ಎನ್.ಬಾಬು (ಸಹಾಯಕ ಔಷಧ ನಿಯಂತ್ರಕ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು):\\B 6 ಕಡೆ ದಾಳಿ, 4 ಸೈಟ್, 5 ಮನೆ, 1.20 ಎಕರೆ ಕೃಷಿ ಜಮೀನು, 25.96 ಲಕ್ಷ ರು. ನಗದು, 1.66 ಕೋಟಿ ರು. ಬ್ಯಾಂಕ್ ಠೇವಣಿ ಸೇರಿ ಒಟ್ಟು 4.40 ಕೋಟಿ ರು. ಮೌಲ್ಯದ ಆಸ್ತಿ.
.ಎಚ್.ಜಿ.ಸುಶೀಲಮ್ಮ (ಸಹಾಯಕ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರ, ಚಿತ್ರದುರ್ಗ ಜಿಲ್ಲೆ ):\\B 2 ಕಡೆ ದಾಳಿ, 13 ಸೈಟ್, 6 ಮನೆ, 1 ಕಾಂಪ್ಲೆಕ್ಸ್, 34.2 ಎಕರೆ ಕೃಷಿ ಜಮೀನು, 85.90 ಲಕ್ಷ ರು. ಮೌಲ್ಯದ ಇತರೆ ವಸ್ತು ಸೇರಿ ಒಟ್ಟು 8.32 ಕೋಟಿ ರು. ಮೌಲ್ಯದ ಆಸ್ತಿ.
. ಕೆ.ಆರ್.ಶೋಭಾ (ಜಿಲ್ಲಾ ಅಧಿಕಾರಿ, ಅರಸು ಹಿಂ. ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ):\\B 6 ಕಡೆ ದಾಳಿ, 2 ಸೈಟ್, 1 ಮನೆ, 4.8 ಎಕರೆ ಕೃಷಿ ಜಮೀನು, 57.40 ಲಕ್ಷ ರು.ನ ಚಿನ್ನಾಭರಣ, 1.23 ಕೋಟಿ ರು.ನ ವಾಹನ, ಸೇರಿ ಒಟ್ಟು 3.88 ಕೋಟಿ ರು. ಮೌಲ್ಯದ ಆಸ್ತಿ.
6.ಶಿವಣ್ಣ (ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಬಳ್ಳಾರಿ):\\B 5 ಕಡೆ ದಾಳಿ, 14 ಸೈಟ್, 3 ಮನೆ, 44 ಎಕರೆ ಕೃಷಿ ಜಮೀನು, 28 ಲಕ್ಷ ರು. ನಗದು ಸೇರಿ ಒಟ್ಟು 2.82 ಕೋಟಿ ರು. ಮೌಲ್ಯದ ಆಸ್ತಿ.
7. ಕೆ.ಎಲ್.ಸುರೇಶ್ (ಹಣಕಾಸು ನಿಯಂತ್ರಕ(ನಿವೃತ್ತ), ಕರ್ನಾಟಕ ಪಶು ವಿಜ್ಞಾನ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಬೀದರ್):\\B 2 ಕಡೆ ದಾಳಿ, 2 ಸೈಟ್, 2 ಮನೆ, 3.34 ಎಕರೆ ಕೃಷಿ ಜಮೀನು ಸೇರಿ ಒಟ್ಟು 4.38 ಕೋಟಿ ರು. ಮೌಲ್ಯದ ಆಸ್ತಿ.
8. ಐ.ಕೆ.ಪುಟ್ಟಸ್ವಾಮಿ (ಸಹಾಯಕ ಕಾರ್ಯಪಾಲಕ ಅಭಿಯಂತರ, ಹಾರಂಗಿ ಉಪ ವಿಭಾಗ, ಕಾವೇರಿ ನೀರಾವರಿ ನಿಗಮ, ಹಾರಂಗಿ ಪುನರ್ವಸತಿ ವಿಭಾಗ ಕಚೇರಿ, ಕುಶಾಲನಗರ):\\B 4 ಕಡೆ ದಾಳಿ, 6 ಸೈಟ್, 1 ಮನೆ, 51.30 ಲಕ್ಷ ರು.ನ ಚಿನ್ನಾಭರಣ ಸೇರಿ ಒಟ್ಟು 2.99 ಕೋಟಿ ರು. ಮೌಲ್ಯದ ಆಸ್ತಿ.
ಪತ್ತೆಯಾದ ಅಕ್ರಮ ಆಸ್ತಿ ವಿವರ
* 21.71 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ
* 15.21 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ