ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಬೆಂಬಲಿಗರು ಕೈ ಕೈ ಮಿಲಾಯಿಸಿ ಚೇರುಗಳನ್ನು ಹಿಡಿದು ಹೊಡೆದಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಬೇಲೂರು (ಡಿ.10) : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಬೆಂಬಲಿಗರು ಕೈ ಕೈ ಮಿಲಾಯಿಸಿ ಚೇರುಗಳನ್ನು ಹಿಡಿದು ಹೊಡೆದಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಭಾರತ್ ಕನ್ವೆಷನ್ ಹಾಲ್‌ನಲ್ಲಿ ಮಾಜಿ ಸಚಿವ ಬಿ ಶಿವರಾಂ ಹಾಗೂ ಎಂಪಿ ಚುನಾವಣೆಯ ಆಕಾಂಕ್ಷಿಯಾಗಿರುವ ಜತ್ತೇನಹಳ್ಳಿ ರಾಮಚಂದ್ರ ಅವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಕಾಂಗ್ರೆಸ್ ಹಿರಿಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು. ಕಾರ್ಯಕರ್ತರ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ತಿಳಿಸಿದ ಹಿನ್ನೆಲೆಯಲ್ಲಿ ತಾಪಂ ಮಾಜಿ ಸದಸ್ಯ ನೇರ್ಲಗೆ ಸೋಮಣ್ಣನವರು ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಬಿ ಶಿವರಾಂ ಅವರು ಅಲ್ಪ ಅಂತರದಿಂದ ಸೋಲಿಗೆ ಕೆಲ ಕಾರ್ಯಕರ್ತರು ಕಾರಣ ಎಂಬ ಮಾತಿಗೆ ಸಿಟ್ಟಾದ ಗ್ರಾನೈಟ್ ರಾಜಶೇಖರ್ ಬೆಂಬಲಿಗರಾದ ಧನಪಾಲ್, ಮಂಜುನಾಥ್, ಮಲ್ಲೇಶ್, ಜಯಣ್ಣ ಸೇರಿದಂತೆ ಇತರರು ಏರು ಧ್ವನಿಯಲ್ಲಿ ಧಿಕ್ಕಾರ ಕೂಗಿ ವೇದಿಕೆ ಬಳಿ ಮುಂಭಾಗದಲ್ಲಿ ಬಂದರು.
ಡಿಕೆಶಿ ಸಿಎಂ ಆಗ್ತಾರೆ ನೊಣವಿನಕೆರೆ ಸ್ವಾಮೀಜಿ ಭವಿಷ್ಯ; ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದ ಎಂಬಿ ಪಾಟೀಲ್
ವೇದಿಕೆ ಪಕ್ಕದಲ್ಲಿದ್ದ ಎಂ ಆರ್ ವೆಂಕಟೇಶ್ ತೌಫಿಕ್ , ಜಮಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಪಟ್ಟಾಗ ಮಾತಿನ ಚಕಮಕಿ ಜೋರಾಗಿ ನಡೆಯಿತು. ಇದೇ ವೇಳೆ ಮಾತಿಗೆ ಮಾತು ನಡೆದು ಕುರ್ಚಿ ಹಿಡಿದು ಬಡಿದಾಡುವ ಹಂತಕ್ಕೆ ಮುಂದಾದರು. ಇದೇ ವೇಳೆ ನಮ್ಮ ನಾಯಕರಾದ ರಾಜಶೇಖರ್ ಅವರನ್ನು ಸಭೆಗೆ ಆಹ್ವಾನಿಸಿಲ್ಲ. ಈ ಸಭೆ ಅವಶ್ಯಕತೆ ಇಲ್ಲ ಎಂದಾಗ ಇವರ ನಡುವೆ ಹಾಗೂ ಕಾರ್ಯಕರ್ತರ ನಡುವೆ ಬಡಿದಾಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಯಿತು.
ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೆರವು ಸಿಎಂ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ಫುಲ್ ಗರಂ!
ಈ ಇಬ್ಬರ ಬೆಂಬಲಿಗರ ನಡುವಿನ ಘರ್ಷಣೆಯಿಂದ ಸುಮಾರು ೨೦ಕ್ಕೂ ಹೆಚ್ಚು ಚೇರ್‌ಗಳು ಪುಡಿಪುಡಿಯಾದವು. ರಾಜಶೇಖರ್ ಬೆಂಬಲಿಗರಾದ ಧನಪಾಲ್ ಹಾಗೂ ಮಲ್ಲೇಶ್ ಅವರಿಗೆ ತೀವ್ರವಾದ ಗಾಯಗಳಾದವು. ಇದೇ ವೇಳೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಅಲ್ಲಿದ್ದ ಕೆಲ ನಾಯಕರು ಮೂಕಪ್ರೇಕ್ಷಕರಂತೆ ಈ ಗಲಾಟೆಯನ್ನು ನೋಡುತ್ತಾ ನಿಂತರು. ರಾಜಶೇಖರ್ ಬೆಂಬಲಿಗರು ಸಭೆಯಿಂದ ಹೊರ ನಡೆದ ನಂತರ ಮತ್ತೆ ಸಭೆ ಪ್ರಾರಂಭಿಸಲಾಯಿತು.
ವಿಷಯ ತಿಳಿದು ಸ್ಥಳಕ್ಕೆ ವೃತ್ತ ನಿರೀಕ್ಷಕ ರವಿಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.