ಈ ಬಾರಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇವೆ. ನಾವು ಹೆಚ್ಚಿಗೆ ಸ್ಥಾನ ಕೇಳಿಲ್ಲ. ಕೇವಲ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿದ್ದೇವೆ. ಇದಕ್ಕೆ ಕಾರಣ ನರೇಂದ್ರ ಮೋದಿಯವರನ್ನು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಮನಗರ (ಮಾ.18): ಈ ಬಾರಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇವೆ. ನಾವು ಹೆಚ್ಚಿಗೆ ಸ್ಥಾನ ಕೇಳಿಲ್ಲ. ಕೇವಲ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿದ್ದೇವೆ. ಇದಕ್ಕೆ ಕಾರಣ ನರೇಂದ್ರ ಮೋದಿಯವರನ್ನು ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶ ಹಾಗಾಗಿ 28 ಕ್ಷೇತ್ರಗಳಲ್ಲಿ ಯಾರೇ ಸ್ಪರ್ಧಿಸಿದರೂ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇಂದು ರಾಮನಗರದಲ್ಲಿ ಕರೆದಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಹೆಚ್ಚಿನ ಮತಗಳು ಜೆಡಿಎಸ್ ಪರವಾಗಿದೆ. ಹಾಗಾಗಿ ಕೋಲಾರವೂ ನಮಗೆ ಬೇಕು ಎಂದು ಕಾರ್ಯಕರ್ತರ ಒತ್ತಡ ಇದೆ. ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳಲ್ಲಿ ಮಾತ್ರ ನಾವು ಟಿಕೇಟ್ ಕೇಳ್ತಿದ್ದೇವೆ. ಈ ಬಗ್ಗೆ ನಮ್ಮ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ಸುದ್ದಿಗೋಷ್ಠಿ ಆರಂಭದಲ್ಲೇ ಟಿಕೆಟ್ ಕಗ್ಗಂಟಿನ ಬಗ್ಗೆ ತಿಳಿಸಿದರು.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಿರೋದ್ರಿಂದ ಈ ಬಾರಿ ಕಾಂಗ್ರೆಸ್ ಮತಗಳು ಸಹ ಬಿಜೆಪಿಗೆ : ಸಂಸದ ಮುನಿಸ್ವಾಮಿ
ಬೆಂಗಳೂರು ಗ್ರಾಮಾಂತರ ಸುಮಾರು 27ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರ. ಇಲ್ಲಿ ಡಾ.ಮಂಜುನಾಥ್ ಮೈತ್ರಿ ಅಭ್ಯರ್ಥಿ ಆಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಚುನಾವಣಾ ಕಾರ್ಯ ಆರಂಭಿಸಿದ್ದಾರೆ. ಡಾ.ಮಂಜುನಾಥ್ ಅವರ ವೈದ್ಯಕೀಯ ಸೇವೆ ಹೆಸರುವಾಸಿಯಾಗಿದೆ. ಹಾಗಾಗಿ ಅವರನ್ನ ಈ ಚುನಾವಣೆಯಲ್ಲಿ ನಿಲ್ಲಿಸಬೇಕು ಅಂತ ಬಿಜೆಪಿ ವರಿಷ್ಠರು ಮನವಿ ಮಾಡಿದ್ರು. ಡಾ.ಮಂಜುನಾಥ್ ಅವರು ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದಾರೆ. ಅವರೊಬ್ಬ ಪಕ್ಷಾತೀತವಾದ ವ್ಯಕ್ತಿ. ಅವರ ಗೆಲುವಿಗೆ ಎಲ್ಲರೂ ಕೆಲಸ ಮಾಡಬೇಕು. ಅವರನ್ನ ರಾಮನಗರದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಡಾ.ಮಂಜುನಾಥ್ ಸ್ಪರ್ಧೆಗೆ ಕಾಂಗ್ರೆಸ್ ಶಾಸಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ನಾನೂ ಇಲ್ಲಿನ ಸ್ಥಳೀಯ ಶಾಸಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದು ಅವರ ಪಕ್ಷಕ್ಕೇ ಮುಳ್ಳಾಗುವ ಲಕ್ಷಣ ಕಾಣ್ತಿದೆ ಇದು ಅವರ ಪಕ್ಷಕ್ಕೇ ಮುಳ್ಳಾಗುವ ಲಕ್ಷಣ ಕಾಣ್ತಿದೆ. ಇದರಲ್ಲಿ ಕಾಂಗ್ರೆಸ್ ಸೋಲಿನ ಹತಾಸೆ ಗೊತ್ತಾಗ್ತಿದೆ. ಅವರ ಉದ್ಧಟತನದ ಹೇಳಿಕೆಗೆ ಜನ ಉತ್ತರ ಕೊಡ್ತಾರೆ ಎಂದರು.
Nikhil on Sumalatha: ನನ್ನ ವಿರುದ್ಧ ನಿಂತಿದ್ದ ಆ ತಾಯಿ ಗೆಲುವಿಗೆ ಕಾಂಗ್ರೆಸ್ ಕಾರಣ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕರು ನನ್ನ ಸೋಲಿನ ಬಗ್ಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಸ್ಪರ್ಧೆ ಮಾಡಬೇಕು ಅಂತಾ ಹೇಳಿರೋರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಕುಮಾರಸ್ವಾಮಿಯವರು ಬರಲಿ ಅನ್ನುವ ಒತ್ತಡವೂ ಇದೆ. ಆದರೆ ಇವತ್ತು ಮಂಡ್ಯದಲ್ಲಿ ಜೆಡಿಎಸ್ ಸಮರ್ಥವಾಗಿ ಬೆಳೆಸಿರೋರು ಮುಖಂಡರು, ಕಾರ್ಯಕರ್ತರು. ಹಾಗಾಗಿ ಸ್ಪರ್ಧೆ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡ್ತಾರೆ. ನನ್ನ ಆಸಕ್ತಿ ಇರೋದು ಪಕ್ಷವನ್ನ ಬಲಿಷ್ಠವಾಗಿ ಕಟ್ಟಬೇಕು ಅನ್ನೋದು ಮಾತ್ರ ಎಂದರು.