ಕನಕಪುರದಲ್ಲಿ ಧಮ್ಕಿ, ಬೆದರಿಕೆ ಹೆಚ್ಚು ದಿನ ಇರೊಲ್ಲ: ಡಿಕೆ ಬ್ರದರ್ಸ್‌ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್

By Ravi Janekal  |  First Published Mar 25, 2024, 7:56 PM IST

ರಾಜಕಾರಣದಲ್ಲಿ ಯಾವುದೂ ಪರ್ಮನೆಂಟ್ ಅಲ್ಲ. ಕನಕಪುರ ಯಾರದ್ದೋ ಭದ್ರಕೋಟೆ ಅಲ್ಲ. ಇಲ್ಲಿ ಧಮ್ಕಿ ಹಾಕೊಂಡು, ಹೆದರಿಸಿಕೊಂಡು ಓಡಾಡೋದು ಹೆಚ್ಚು ದಿನ ನಡೆಯೊಲ್ಲ. ಈ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡ್ತಾರೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್ ಕೊಟ್ಟರು.


ಕನಕಪುರ (ಮಾ.25): ಕನಕಪುರದಲ್ಲಿ ನಮ್ಮದೇ ಆದ ಸಾಂಪ್ರದಾಯಿಕ ಮತಗಳಿವೆ. ಇಲ್ಲಿ ನಮ್ಮ ಪಕ್ಷ ಸದೃಢವಾಗಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಇಂದು ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್-ಬಿಜೆಪಿ ಮೈತ್ರಿ ಸಮ್ಮಿಲನ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಮಂಡ್ಯ, ಚನ್ನಪಟ್ಟಣ ಕಾರ್ಯಕರ್ತರ ಸಭೆ ಇದ್ದ ಹಿನ್ನೆಲೆ ವಿಳಂಬವಾಯ್ತು. ಮುಂದಿನ ದಿನಗಳಲ್ಲಿ ಕನಕಪುರಕ್ಕೆ ಹೆಚ್ಚು ಆದ್ಯತೆ ನೀಡಿ ಪ್ರಚಾರ ಮಾಡುತ್ತೇನೆ ಎಂದರು.

Latest Videos

undefined

'ನನಗೆ ಕ್ಷೇತ್ರ ಪರಿಚಯ ಇಲ್ಲದಿರಬಹುದು, ಆದರೆ ಜನ ಪರಿಚಯ ಇದ್ದಾರೆ': ಕಾಂಗ್ರೆಸ್ ಟೀಕೆಗೆ ಡಾ ಮಂಜುನಾಥ ತಿರುಗೇಟು

ನಮ್ಮ ಅಭ್ಯರ್ಥಿ ಡಾ ಮಂಜುನಾಥ್ ಇಲ್ಲಿನ ಕಾರ್ಯಕರ್ತರ ಹುಮ್ಮಸ್ಸು, ಉತ್ಸಾಹ ನೋಡಿ ಖುಷಿಯಾಗಿದ್ದಾರೆ. ಕನಕಪುರ ಒನ್ ಸೈಡ್ ಆಗುತ್ತೆ ಅನ್ನೋದು ಕೆಲವರ ಅಭಿಪ್ರಾಯ. ಆದರೆ ಅದು ಈ ಬಾರಿ ಹುಸಿಯಾಗುತ್ತೆ. ಏಕೆಂದರೆ ಈ ಬಾರಿ ನಮಗೆ ಇಲ್ಲಿ ಬಿಜೆಪಿ ಕಾರ್ಯಕರ್ತರೂ ಸಂಪೂರ್ಣ ಬೆಂಬಲ ಕೊಡ್ತಿದ್ದಾರೆ. ಹೀಗಾಗಿ ಈ ಬಾರಿ ಕಳೆದ ಚುನಾವಣೆಗಿಂತ ಹೆಚ್ಚಿನ ಮತಗಳು ಬರಲಿವೆ. ಡಾ ಮಂಜುನಾಥ ಗೆಲುವು ನಿಶ್ಚಿತ ಎಂದರು.

ರಾಜಕಾರಣದಲ್ಲಿ ಯಾವುದೂ ಪರ್ಮನೆಂಟ್ ಅಲ್ಲ. ಕನಕಪುರ ಯಾರದ್ದೋ ಭದ್ರಕೋಟೆ ಅಲ್ಲ. ಇಲ್ಲಿ ಧಮ್ಕಿ ಹಾಕೊಂಡು, ಹೆದರಿಸಿಕೊಂಡು ಓಡಾಡೋದು ಹೆಚ್ಚು ದಿನ ನಡೆಯೊಲ್ಲ. ಈ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡ್ತಾರೆ ಎಂದು ಪರೋಕ್ಷವಾಗಿ ಡಿಕೆ ಬ್ರದರ್ಸ್ ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್ ಕೊಟ್ಟರು.

'ಹಿಂದೂ ವಿರೋಧಿ ಕಾಗೇರಿ': ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕಾಗೇರಿ ಟ್ರೋಲ್!

ಇನ್ನು ಮಂಡ್ಯದಿಂದ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದು ಮಂಡ್ಯ, ಚನ್ನಪಟ್ಟಣದ ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೇವೆ. ಚನ್ನಪಟ್ಟಣ ಕಾರ್ಯಕರ್ತರು ಕುಮಾರಣ್ಣ ಇಲ್ಲೇ ಇರಬೇಕು ಅಂತ ಒತ್ತಡ ಹೇರುತ್ತಿದ್ದಾರೆ. ಅವರು ರಾಜ್ಯ ರಾಜಕಾರಣದಲ್ಲೇ ಇರಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಆದರೆ ಮಂಡ್ಯದವ್ರೂ ಕುಮಾರಣ್ಣ ಬರಬೇಕು ಅಂತ ಕೇಳ್ತಿದ್ದಾರೆ. ಈ ವಿಚಾರ ಅಂತಿಮವಾಗಿ ದೇವೇಗೌಡರು ನಿರ್ಧಾರ ಮಾಡ್ತಾರೆ. ನಾಳೆ ಅಭ್ಯರ್ಥಿ ಘೋಷಣೆ ಆಗುತ್ತೆ. ನಾಳೆವರೆಗೂ ತಾಳ್ಮೆಯಿಂದ ಎಲ್ಲರೂ ಕಾಯಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಇದೇ ವೇಳೆ ಕುಮಾರಣ್ಣ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ರೆ ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ವಿಚಾರ ಸಂಬಂಧ 'ಈಗ ಅದು ಅಪ್ರಸ್ತುತ ಎಂದ ನಿಖಿಲ್ ಕುಮಾರಸ್ವಾಮಿ

click me!