Breaking: ಕೆವಿ ಗೌತಮ್ ಗೆ ಕೋಲಾರ ಟಿಕೆಟ್ ನೀಡಿದ‌ ಕಾಂಗ್ರೆಸ್ ಹೈಕಮಾಂಡ್!

By Santosh Naik  |  First Published Mar 30, 2024, 11:21 AM IST

ರಮೇಶ್‌ ಕುಮಾರ್‌ ಹಾಗೂ ಕೆಎಚ್‌ ಮುನಿಯಪ್ಪ ಬಣ ಬಡಿದಾಟದ ನಡುವೆ ಕಾಂಗ್ರೆಸ್ ಹೈಕಮಾಂಡ್‌ ಕೋಲಾರ ಟಿಕೆಟ್‌ಅನ್ನು ಕೆವಿ ಗೌತಮ್‌ ಅವರಿಗೆ ನೀಡಿದೆ.


ಬೆಂಗಳೂರು (ಮಾ.30): ಕಾಂಗ್ರೆದ್‌ ಹೈಕಮಾಂಡ್‌ ಕೋಲಾರಕ್ಕೆ ಟಿಕೆಟ್‌ ಘೋಷಣೆ ಮಾಡಿದೆ. ರಮೇಶ್‌ ಕುಮಾರ್‌ ಹಾಗೂ ಸಚಿವ ಕೆಎಚ್‌ ಮುನಿಯಪ್ಪ ಅವರ ಬಣ ಬಡಿದಾಟದ ನಡುವೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕೆವಿ ಗೌತಮ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ. ಕೋಲಾರದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಮೇಶ್‌ ಕುಮಾರ್‌ ಹಾಗೂ ಸಚಿವ ಕೆಎಚ್‌ ಮುನಿಯಪ್ಪ ಅವರ ಬಣದ ನಡುವೆ ಭಾರೀ ತಿಕ್ಕಾಟ ನಡೆದಿತ್ತು. ಇನ್ನೇನು ಕೆಎಚ್‌ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್‌ ನೀಡಲಾಗಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಕೋಲಾರ ಕಾಂಗ್ರೆಸ್‌ನಲ್ಲಿ ಕೋಲಾಹಲವೇ ಆರಂಭವಾಗಿತ್ತು. ಸಚಿವ ಎಂಸಿ ಸುಧಾಕರ್‌ ಸೇರಿದಂತೆ ಹಲವು ನಾಯಕರು ಸಭಾಪತಿ ಕಚೇರಿಗೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಹಸನ ಕೂಡ ನಡೆದಿತ್ತು. ಈ ತಿಕ್ಕಾಟದಿಂದ ಬೇಸತ್ತ ಹೈಕಮಾಂಡ್‌ ಅಚ್ಚರಿಯ ಅಭ್ಯರ್ಥಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಟಿಕೆಟ್‌ ಆಯ್ಕೆಯ ಕಗ್ಗಂಟಿನ ನಡುವೆ ಬೆಂಗಳೂರು ಕೇಂದ್ರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿರುವ ಕೆವಿ ಗೌತಮ್‌ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್‌ ಕುಮಾರ್‌ ಹಾಗೂ ಮುನಿಯಪ್ಪ ಅವರ ತಿಕ್ಕಾಟದ ನಡುವೆ ಎರಡೂ ಬಣಗಳಿಗೆ ಒಪ್ಪಿಗೆಯಾಗಬಲ್ಲ ಮೂರು ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಕೆವಿ ಗೌತಮ್‌ ಅವರ ಹೆಸರೇ ಪ್ರಮುಖವಾಗಿತ್ತು. ಕೊನೆಗೆ ಇದೇ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಂತಿಮ ಮಾಡಿದೆ.

 

Latest Videos

undefined

ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ, ಡಿಕೆಶಿ ಈಗೇನು ಹೇಳ್ತಾರೆ?: ಬೊಮ್ಮಾಯಿ

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್‌ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಅವರು ಕಣಕ್ಕೆ ಇಳಿಯಲಿದ್ದಾರೆ.

Lok Sabha Election 2024: ಕಾಂಗ್ರೆಸ್‌ ಕೋಲಾರ ಸರ್ಕಸ್‌: ಮನವೊಲಿಕೆಗೆ ಸಿಎಂ, ಡಿಸಿಎಂ ಹರಸಾಹಸ


 

click me!