ಲೆಫ್ಟಿಸ್ಟ್ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬಾ ಇರುತ್ತೇ. ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಮಕ್ಕಳು ಕ್ಯಾಪಿಟಲಿಸ್ಟ್ ಆಗಿ ಏನಾದ್ರು ಮಾಡಬಹುದು. ಇವರು ಮಾತ್ರ ಲೆಫ್ಟಿಸ್ಟಿಸ್ ನಡೆಸುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ
ಮೈಸೂರು(ಮಾ.30): ಎಡಪಂಥೀಯ ಸಾಹಿತಿಗಳು ಡಬಲ್ ಗೇಮ್ ಆಡುತ್ತಿದ್ದಾರೆ. ಎಡಪಂಥೀಯ ಸಾಹಿತಿಗಳದ್ದು ಡಬಲ್ ಗೇಮ್ ಮನಸ್ಥಿತಿ. ಇದು ಹಲವಾರು ಬಾರಿ ಸಾಬೀತಾಗಿದೆ. ತತ್ವ ಸಿದ್ಧಾಂತಗಳ ವಿಚಾರದಲ್ಲೂ ಎಡಪಂಥೀಯ ಸಾಹಿತಿಗಳು ದ್ವಿಮುಖ ನಿಲುವು ಹೊಂದಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಆರೋಪಿಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೆಫ್ಟಿಸ್ಟ್ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬಾ ಇರುತ್ತೇ. ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಮಕ್ಕಳು ಕ್ಯಾಪಿಟಲಿಸ್ಟ್ ಆಗಿ ಏನಾದ್ರು ಮಾಡಬಹುದು. ಇವರು ಮಾತ್ರ ಲೆಫ್ಟಿಸ್ಟಿಸ್ ನಡೆಸುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
undefined
ವೀರ ಸಾರ್ವಕರ್ ಅಷ್ಟೇ ಅಲ್ಲ, ಅಂಬೇಡ್ಕರ್‌ಗೂ ಕಾಟ ಕೊಟ್ಟಿದ್ದ ನೆಹರು: ಸಾಹಿತಿ ಎಸ್.ಎಲ್.ಭೈರಪ್ಪ
ಬಂಗಾಳದಲ್ಲಿ ಇರುವಷ್ಟು ಬಡತನ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ. ಲೆಫ್ಟಿಸಂ ಅನ್ನೋದು ಬರಿ ಮೋಸ ಮಾಡುವ ಕೆಲಸ. ನನ್ನನ್ನು ಇವರೆಲ್ಲಾ ಕ್ಯಾಪಿಟಲಿಸ್ಟ್ ಅಂತಾರೆ. ಅದಿಲ್ಲದಿದ್ದರೇ ದೇಶದ ಬೆಳವಣಿಗೆ ಆಗೋದೇ ಇಲ್ಲ. ಲೆಫ್ಟಿಸ್ಟ್ ಗಳೆಲ್ಲ ಅಪ್ರಾಮಾಣಿಕರು ಎಂದು ಅವರು ಕಿಡಿಕಾರಿದರು.
ಬಿಟ್ಟಿ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ
ರಾಜ್ಯ ಸರ್ಕಾರದ ಬಿಟ್ಟಿ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ದೂರಿದರು. ಕಳೆದ ಬಾರಿ ರಾಜ್ಯ ಸರ್ಕಾರದಲ್ಲಿ ಬಿಜೆಪಿಯವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಅದನ್ನು ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಗ್ಯಾರಂಟಿಗಳ ರಾಜ್ಯದ ಎಕಾನಮಿ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ. ಕೇಂದ್ರದಿಂದ ಬಂದ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ ಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಆರೋಪಿಸಿದರು.