ಪ್ರಚಾರ ಕಾರ್ಯಕ್ಕೆ ಸಂಸದ ಪ್ರತಾಪ್ ಸಿಂಹ ಗೈರು! ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಹೇಳಿದ್ದೇನು?

By Ravi Janekal  |  First Published Mar 22, 2024, 4:17 PM IST

ನಮ್ಮ ಯೋಗ್ಯತೆ, ಸಾಮರ್ಥ್ಯದ ಮೇಲೆ ಜನರು ನಮಗೆ ಅಥವಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.22): ನಮ್ಮ ಯೋಗ್ಯತೆ, ಸಾಮರ್ಥ್ಯದ ಮೇಲೆ ಜನರು ನಮಗೆ ಅಥವಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.

Tap to resize

Latest Videos

ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಬಹಿರಂಗ ಪ್ರಚಾರ ಆರಂಭಿಸಿರುವ ಯದುವೀರ್ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಬಳಿಕ ಕಾವೇರಿ ಉಗಮ ಸ್ಥಾನ ತಲಕಾವೇರಿಗೂ ಭೇಟಿ ನೀಡಿದ ಅವರು ಅಲ್ಲಿ ಅಗಸ್ತ್ಯೇಶ್ವರ ಹಾಗೂ ಮಾತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. 

ಟೀಕೆ, ಸವಾಲುಗಳನ್ನು ಎದುರಿಸಿಯೇ ರಾಜಕಾರಣ ಮಾಡುವೆ: ಬಿಜೆಪಿ ಅಭ್ಯರ್ಥಿ ಯದುವೀರ್

ಈ ಸಂದರ್ಭ ಮಾತನಾಡಿದ ಅವರು ಹಳೆ ಮೈಸೂರು ಭಾಗಕ್ಕೂ ಕಾವೇರಿಗೂ ಅವಿನಾವಭಾವ ಸಂಬಂಧ ಇದೆ. ತಾಯಿ ಕಾವೇರಿ ಆಶೀರ್ವಾದ ಪಡೆಯಲು ಇಂದು ಇಲ್ಲಿಗೆ ಆಗಮಿಸಿದ್ದೇನೆ. ತಾಯಿ ಕಾವೇರಿ ಹಾಗೂ ಭಗಂಡೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ, ಪ್ರಾರ್ಥನೆ ಮೂಲಕ ನಾನು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು. 

ಪ್ರಚಾರ ಕಾರ್ಯಕ್ಕೆ ಸಂಸದ ಪ್ರತಾಪ್ ಸಿಂಹ(MP Pratap simha) ಬರುತ್ತಾರೆ ಎನ್ನುವ ವಿಶ್ವಾಸವಿತ್ತು. ಆದರೆ ಅವರು ತಲಕಾವೇರಿಗಾಗಲಿ, ಭಾಗಮಂಡಲಕ್ಕೆ ಆಗಲಿ ಬಂದಿರಲಿಲ್ಲ. ಜೊತೆಗೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಕೂಡ ಬಂದಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಯದುವೀರ್ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಪ್ರಚಾರದ ಪಟ್ಟಿ ರೆಡಿ ಮಾಡುವುದೆಲ್ಲ ಪಕ್ಷ. ಅದರಂತೆ ನಾನು ಪ್ರಚಾರಕ್ಕೆ ಬಂದಿದ್ದೇನೆ. ಪ್ರತಾಪ್ ಸಿಂಹ ಅವರು ಎಲ್ಲಿಗೆ ಹೋಗಿದ್ದಾರೆ, ಅವರ ಇಂದಿನ ಕೆಲಸಗಳು ಏನಿವೆ ಎಂಬುದು ನನಗೆ ಮಾಹಿತಿ ಇಲ್ಲ. ಆದರೆ ಅವರು ಎಲ್ಲಾ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ ಎಂದರು. 

ಇನ್ನು ಪ್ರತಾಪ್ ಸಿಂಹ ಕಳೆದ ಹತ್ತು ವರ್ಷಗಳಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ನನ್ನ ಹೆಸರು ಹೇಳಿಕೊಂಡೇ ಮತ ಕೇಳಬಹುದು ಎಂದು ಪ್ರತಾಪ್ ಸಿಂಹ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, 10 ವರ್ಷದಲ್ಲಿ ಪ್ರತಾಪ್ ಸಿಂಹ ಒಳ್ಳೆಯ ಅಡಿಪಾಯ ಹಾಕಿರುವುದರಿಂದ ಅವರು ಹೀಗೆ ಹೇಳಿದ್ದಾರೆ. ಅದು ಪಕ್ಷದ ಸಂಘಟನಾ ಕೆಲಸಕ್ಕೆ ಅನುಕೂಲ ಆಗಲಿದೆ ಎಂದಿದ್ದಾರೆ. ಇನ್ನು ಎಂ. ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ ಅವರನ್ನ ಎದುರಿಸುತ್ತೇನೆ. ನಮ್ಮ ಯೋಗ್ಯತೆ ಮೇಲೆ ಜನರು ನಮ್ಮನ್ನು ತೀರ್ಮಾನ ಮಾಡುತ್ತಾರೆ ಎಂದರು.

 ಈಗ ಯಾವ ರಾಜನೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ಹಿಂದಿನ ಕಾಲದಲ್ಲಿ ರಾಜ ರಾಣಿ ಪದವಿ ಇದ್ದದ್ದು, ಈಗ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಇದನ್ನು ಸಿದ್ದರಾಮಯ್ಯ ಅವರು ಹೇಳುವ ಮೊದಲೇ ನಾನೇ ಹೇಳಿದ್ದೇನೆ ಎಂದರು. ಇನ್ನು ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಕೊಡವ ಸಮಾಜದಲ್ಲಿ ನಡೆದ ಬಹಿರಂಗ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭವಿಷ್ಯದ ಭಾರತದಲ್ಲಿ ಒಳ್ಳೆಯ ದಿನಗಳನ್ನು ಕಾಣಬೇಕೆಂದರೆ ವಿಕಸಿತ ಭಾರತ(Vikasit bharat) ನಿರ್ಮಾಣಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಯದುವೀರ್ ಹೇಳಿದರು. 

 

Yaduveer Wadiyar: ಯದುವೀರ್ ಸ್ಪರ್ಧೆ..ಅಸಲಿ ಲೆಕ್ಕಾಚಾರ ಏನು? ಒಡೆಯರ್‌ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತಾ?

ಮೊದಲ ಬಹಿರಂಗ ಸಭೆ ನಡೆಸಿದ ಯದುವೀರ್ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮೊದಲ ಸಭೆಯಲ್ಲೇ ನನಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕಾಗಿ ಜನರಿಗೆ, ಕಾರ್ಯಕರ್ತರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದು, ಇನ್ನು ಮೂರು ದಿನಗಳ ಕಾಲ ಎಲ್ಲೆಡೆ ಸಭೆ ನಡೆಸಲಿದ್ದೇನೆ. ಕಾರ್ಯಕರ್ತರು ತುಂಬಾ ಉತ್ಸಾಹದಿಂದ ಭಾಗವಹಿಸುತ್ತಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

click me!