ಮದ್ಯ ಶೇ.20 ದುಬಾರಿ; ಕರ್ನಾಟಕ ಕುಡುಕರ ಸಂಘ ತೀವ್ರ ವಿರೋಧ

Published : Jul 22, 2023, 05:22 AM IST
ಮದ್ಯ ಶೇ.20 ದುಬಾರಿ; ಕರ್ನಾಟಕ ಕುಡುಕರ ಸಂಘ ತೀವ್ರ ವಿರೋಧ

ಸಾರಾಂಶ

ರಾಜ್ಯಾದ್ಯಂತ ಶುಕ್ರವಾರದಿಂದ ಮದ್ಯದ ದುಬಾರಿ ದರ ಜಾರಿಗೆ ಬಂದಿದೆ. ಬಾಟಲಿ ಮೇಲೆ ಶೇ.2ರಿಂದ ಶೇ.20ರವರೆಗೆ ಬೆಲೆ ಹೆಚ್ಚಳವಾಗಿದ್ದು, ಇದು ಸಹಜವಾಗಿ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.

ಬೆಂಗಳೂರು (ಜು.22) :  ರಾಜ್ಯಾದ್ಯಂತ ಶುಕ್ರವಾರದಿಂದ ಮದ್ಯದ ದುಬಾರಿ ದರ ಜಾರಿಗೆ ಬಂದಿದೆ. ಬಾಟಲಿ ಮೇಲೆ ಶೇ.2ರಿಂದ ಶೇ.20ರವರೆಗೆ ಬೆಲೆ ಹೆಚ್ಚಳವಾಗಿದ್ದು, ಇದು ಸಹಜವಾಗಿ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.

ಬಜೆಟ್‌ನಲ್ಲಿ ಘೋಷಿಸಿದ್ದಂತೆ ಅಬಕಾರಿ ಸುಂಕವನ್ನು ಶೇ.20ರವರೆಗೆ ಹೆಚ್ಚಿಸಿರುವ ಕಾರಣದಿಂದ ಮದ್ಯದ ದರ ಹೆಚ್ಚಾಗಿದೆ. ನಿರೀಕ್ಷೆಯಂತೆ ಶುಕ್ರವಾರದಿಂದಲೆ ಹೊಸ ದರ ಜಾರಿಗೆ ಬಂದಿದೆ. ಪಂಚತಾರಾ ಹೊಟೆಲ್‌ಗಳು ಸೇರಿ ಇತರೆಡೆ ಸವೀರ್‍ಸ್‌ ಚಾಜ್‌ರ್‍, ಸೈಡ್‌್ಸ ಸೇರಿಸಿದರೆ ಹೊಸ ದರಕ್ಕೆ ಮತ್ತಷ್ಟುಮೊತ್ತ ಸೇರ್ಪಡೆಯಾಗಲಿದೆ. ಹೀಗಾಗಿ ಟೇಬಲ್‌ ಎದುರು ಕುಳಿತುಕೊಳ್ಳುವ ಮುನ್ನ ಕಿಸೆಗೆ ಕತ್ತರಿ ಬೀಳುವ ಕುರಿತು ಯೋಚಿಸುವಂತಾಗಿದೆ ಎಂದು ಮದ್ಯಪ್ರಿಯರು ಹೇಳಿದ್ದಾರೆ.

ಕಿಂಗ್‌ಫಿಷರ್‌ ಬಿಯರ್‌ 5 ರಿಂದ 10 ರುಪಾಯಿ ಹೆಚ್ಚಳವಾಗಿದೆ. ಬಕಾರ್ಡಿ ಲೆಮನ್‌ ಸಿಟ್ರಸ್‌ 750 ಎಎಲ್‌ಗೆ .2189, ಬ್ಲ್ಯಾಕ್‌ಡಾಗ್‌ .4043 ದರ ತಲುಪಿವೆ. ಒಟಿ ವಿಸ್ಕಿ 180 ಎಂಎಲ್‌ಗೆ .87ರಿಂದ .100 ಆಗಿದೆ. ಸ್ಮಿರ್ನಾಫ್‌ ಆ್ಯಪಲ್‌/ಆರೆಂಜ್‌ 750 ಎಂಎಲ್‌ಗೆ .1839ರಿಂದ .2164ಕ್ಕೆ ಏರಿದೆ ಎಂದು ಮದ್ಯ ವರ್ತಕರು ತಿಳಿಸಿದ್ದಾರೆ. ಮೊದಲ ದಿನ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಆದರೆ, ಇನ್ನೊಂದು ವಾರ, ಹದಿನೈದು ದಿನಗಳು ಕಳೆದರೆ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದು ತಿಳಿಯಲಿದೆ ಎಂದು ಬೆಂಗಳೂರು ಮದ್ಯ ವರ್ತಕರ ಸಂಘ ತಿಳಿಸಿದೆ.

ಕೆಲವು ಮದ್ಯದ ಬೆಲೆ ಹಿಂದೆಂದೂ ಆಗದಷ್ಟುಏರಿಕೆ ಕಂಡಿದೆ. ಇದರಿಂದ ಗ್ರಾಹಕರ ಮೇಲೆ ಸಹಜವಾಗಿ ಹೊರೆ ಬೀಳಲಿದೆ. ಹಳೆಯ ಮದ್ಯದ ಸ್ಟಾಕ್‌ ಇರುವುದರಿಂದ ಕಾಯಂ, ಪರಿಚಿತ ಗ್ರಾಹಕರಿಗೆ ಹಳೆಯ ದರದಲ್ಲೇ ಮದ್ಯ ನೀಡಲಿದ್ದೇವೆ. ವೀಕೆಂಡ್‌ ಮುಗಿದ ಬಳಿಕ ಹೊಸ ದರದಲ್ಲೇ ಎಲ್ಲೆಡೆ ಮದ್ಯ ಮಾರಾಟವಾಗಲಿದೆ ಎಂದು ಮದ್ಯ ಮಾರಾಟಗಾರರು ಹೇಳಿದರು.

ಅಬಕಾರಿ ಸುಂಕ ಹೆಚ್ಚಳ; ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟುಏರಿಕೆ

ಮದ್ಯಪ್ರಿಯರ ವಿರೋಧ:

ಇನ್ನು ಈಗಾಗಲೇ ಕರ್ನಾಟಕ ಮದ್ಯಪ್ರಿಯರ ಸಂಘ ದರ ಏರಿಕೆಯನ್ನು ವಿರೋಧಿಸಿದೆ. ರಾಜ್ಯ ಸರ್ಕಾರ ಏರಿಸಿರುವ ಈ ಅಬಕಾರಿ ಸುಂಕವನ್ನು ಇಳಿಸಬೇಕು. ಇಲ್ಲವೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಅಕ್ರಮ ಮದ್ಯದ ಚಿಂತೆ

ರಾಜ್ಯದ ದಕ್ಷಿಣ ಭಾಗದಲ್ಲಿ ಮಿಲಿಟರಿಯಿಂದ ಬರುವ ಮದ್ಯದ ಅಕ್ರಮ ಸಾಗಾಟ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ನಗರಗಳ ಹೊರವಲಯದಲ್ಲಿ ಇವುಗಳ ಹೆಚ್ಚಿನ ವಹಿವಾಟು ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವುಗಳ ಬಗ್ಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ಮದ್ಯ ವರ್ತಕರ ಸಂಘ ಆಗ್ರಹಿಸಿದೆ. ಅದೇ ರೀತಿ ಗೋವಾದಿಂದ ಅಗ್ಗದ ಬೆಲೆಗೆ ಸಿಗುವ ಮದ್ಯ ಗಡಿ ಭಾಗದಲ್ಲಿರುವ ಕಾರವಾರ ಜಿಲ್ಲೆ, ಬೆಳಗಾವಿಗೆ ಹೆಚ್ಚಿನದಾಗಿ ಹರಿದುಬರುವ ಸಾಧ್ಯತೆ ಇದೆ. ಅದರಿಂದ ನಮಗೆ ನಷ್ಟವಾಗಲಿದೆ. ಅಲ್ಲದೆ, ಕಳ್ಳಬಟ್ಟಿ, ಶೇಂದಿ, ನೀರಾದಂತಹ ಅಕ್ರಮ ಚಟುವಟಿಕೆ ಹೆಚ್ಚಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಅಥಣಿ: ನಿಯಮ ಗಾಳಿಗೆ ತೂರಿ ಮದ್ಯ ಮಾರಾಟ

ಬಿಯರ್‌ ಹಳೆ ದರ ಹೊಸ ದರ

  • ಬಡ್‌ವೈಸರ್‌ ಮ್ಯಾಗ್ನಮ್‌ 330ಎಂಎಲ್‌ 125 150
  • ಕೆಎಫ್‌ ಪ್ರೀಮಿಯಂ 650ಎಂಎಲ್‌ 170 175
  • ಯುಬಿ ಪ್ರಿಮಿಯಂ 330ಎಂಎಲ್‌ 70 73
  • ಎಂಸಿಬಿ 180ಎಂಎಲ್‌ 175 204
  • ಬಕಾರ್ಡಿ ಕಾರ್ಟಾಬ್ಲಾನ್ಸಾ750 1895 2189
  • 100ಪೈಪರ್ಸ್‌180ಎಂಎಲ್‌ 589 681
  • ರಾಯಲ್‌ ಸ್ಟಾಗ್‌ 180ಎಂಎಲ್‌ 328 383

ಬಿಯರ್‌ ಹಳೆ ದರ ಹೊಸ ದರ

  • ಬಡ್‌ವೈಸರ್‌ ಮ್ಯಾಗ್ನಮ್‌ 330ಎಂಎಲ್‌ 125 150
  • ಬಡ್‌ವೈಸರ್‌ ಮ್ಯಾಗ್ನಮ್‌ 500ಎಂಎಲ್‌ಕ್ಯಾನ್‌ 160 180
  • ಬಡ್‌ವೈಸರ್‌ ಮ್ಯಾಗ್ನಮ್‌ 650ಎಂಎಲ್‌ 220 230
  • ಕೆಎಫ್‌ ಪ್ರೀಮಿಯಂ 650ಎಂಎಲ್‌ 170 175
  • ಕೆಎಫ್‌ ಸ್ಟ್ರಾಂಗ್‌ 330ಎಂಎಲ್‌ ಕ್ಯಾನ್‌ 100 105
  • ಕೆಎಫ್‌ ಸ್ಟ್ರಾಂಗ್‌ 330ಎಂಎಲ್‌ ಪೈಂಟ್‌ 95 105
  • ಕೆಎಫ್‌ ಸ್ಟ್ರಾಂಗ್‌ 650ಎಂಎಲ್‌ 170 175
  • ಯುಬಿ ಪ್ರಿಮಿಯಂ 330ಎಂಎಲ್‌ 70 73
  • ಯುಬಿ ಪ್ರಿಮಿಯಂ 650ಎಂಎಲ್‌ 135 138
  • ಯುಬಿ ಸ್ಟ್ರಾಂಗ್‌ 330 ಎಂಎಲ್‌ 70 73
  • ಯುಬಿ ಸ್ಟ್ರಾಂಗ್‌ 650 ಎಂಎಲ್‌ 135 138

ಬ್ರಾಂಡಿ ಹಳೆ ದರ (.) ಹೊಸ ದರ (.)

  • ಎಂಸಿಬಿ 180ಎಂಎಲ್‌ 175 204
  • ಎಂಸಿಬಿ 1ಲೀಟರ್‌ 906 1057
  • ಎಂಸಿಬಿ 375ಎಂಎಲ್‌ 363 423
  • ಎಂಸಿಬಿ 90ಎಂಎಲ್‌ 88 102
  • ಎಂಎಚ್‌ಬಿ 180ಎಂಎಲ್‌ 220 258
  • ಎಂಎಚ್‌ಬಿ 375ಎಂಎಲ್‌ 457 534
  • ಎಂಎಚ್‌ಬಿ 750ಎಂಎಲ್‌ 914 1067
  • ಎಂಎಚ್‌ಬಿ 90ಎಂಎಲ್‌ 130 152
  • ಮಾರ್ಫೆಸ್‌ 180ಎಂಎಲ್‌ 426 496
  • ಮಾರ್ಫೆಸ್‌60ಎಂಎಲ್‌ 146 169
  • ಮಾರ್ಫೆಸ್‌750ಎಂಎಲ್‌ 1748 2042
  • ಒಎಬಿ180ಎಂಎಲ್‌ 106 123
  • ಒಎಬಿ1ಲೀಟರ್‌ 480 550
  • ಒಎಬಿ90ಎಂಎಲ್‌ 53 61

ಜಿನ್‌ ಹಳೆ ದರ ಹೊಸ ದರ

ಕಾರ್ನಿವಲ್‌ ಜಿನ್‌ 180ಎಂಎಲ್‌ 56 63

ರಮ್‌ ಹಳೆ ದರ (.) ಹೊಸ ದರ (.)

  • ಬಕಾರ್ಡಿ ಕಾರ್ಟಾಬ್ಲಾನ್ಸಾ 750 1895 2189
  • ಬಕಾರ್ಡಿ ಲೆಮನ್‌ ಸಿಟ್ರಸ್‌ 750 1895 2189
  • ಬ್ಯಾಗ್‌ಪೈಪರ್‌ ರಮ್‌ 180ಎಂಎಲ್‌ 87 100
  • ಬ್ಯಾಗ್‌ಪೈಪರ್‌ ರಮ್‌ 90 ಎಂಎಲ್‌ 43 50
  • ಎಂಸಿ ರಮ್‌ 180 ಎಂಎಲ್‌ 137 159
  • ಎಂಸಿ ರಮ್‌ 475 ಎಂಎಲ್‌ 340 396
  • ಎಂಸಿ ರಮ್‌ 750 ಎಂಎಲ್‌ 680 793
  • ಎಂಸಿ ರಮ್‌ 90 ಎಂಎಲ್‌ 69 80
  • ಒಎಂಆರ್‌ 180 ಎಂಲ್‌ (ಟೆಟ್ರಾ) 137 159
  • ಒಎಂಆರ್‌ 375 ಎಂಎಲ್‌ 340 396
  • ಒಎಂಆರ್‌ 750 ಎಂಎಲ್‌ 680 792

ವೋಡ್ಕ ಹಳೆ ದರ ಹೊಸ ದರ

  • ರೊಮಾನೊವ್‌ ವೋಡ್ಕಾ ಆ್ಯಪ್‌ 180 ಎಂಲ್‌ 220 257
  • ರೊಮಾನೊವ್‌ ವೋಡ್ಕಾ ಆ್ಯಪ್‌ 60 ಎಂಲ್‌ 86 101
  • ರೊಮಾನೊವ್‌ ವೋಡ್ಕಾ ಆರೆಂಜ್‌ 60ಎಂಲ್‌ 220 257
  • ರೊಮಾನೊವ್‌ ವೋಡ್ಕಾ ಆರೆಂಜ್‌ 750ಎಂಲ್‌ 822 1067
  • ಸ್ಮಿರ್ನಾಫ್‌ ಆ್ಯಪಲ್‌/ಆರೆಂಜ್‌180ಎಂಎಲ್‌ 443 514
  • ಸ್ಮಿರ್ನಾಫ್‌ ಆ್ಯಪಲ್‌/ಆರೆಂಜ್‌750ಎಂಎಲ್‌ 1839 2164
  • ಸ್ಮಿರ್ನಾಫ್‌ ವೋಡ್ಕಾ60ಎಂಎಲ್‌ 150 173

ವಿಸ್ಕಿ ಹಳೆದರ(.) ಹೊಸದರ(.)

  • 100ಪೈಪರ್ಸ್‌180ಎಂಎಲ್‌ 589 681
  • 100ಪೈಪರ್ಸ್‌60ಎಂಲ್‌ 197 225
  • 100ಪೈಪರ್ಸ್‌750ಎಂಲ್‌ 2464 2808
  • 8ಪಿಎಂ ವಿಸ್ಕಿ180ಎಂಎಲ್‌ 87 100
  • 8ಪಿಎಂ ವಿಸ್ಕಿ 90ಎಂಎಲ್‌ 63 61
  • ಬ್ಯಾಗ್‌ಪೈಪರ್‌ 180ಎಂಎಲ್‌ 106 123
  • ಬ್ಯಾಗ್‌ಪೈಪರ್‌ 375ಎಂಎಲ್‌ 285 330
  • ಬ್ಯಾಗ್‌ಪೈಪರ್‌ 90ಎಂಎಲ್‌ 69 80
  • ಬ್ಲ್ಯಾಕ್‌ ಆ್ಯಂಡ್‌ ವೈಟ್‌180ಎಂಎಲ್‌ಪೆಟ್‌ 595 677
  • ಬ್ಲ್ಯಾಕ್‌ ಆ್ಯಂಡ್‌ ವೈಟ್‌375ಎಂಎಲ್‌ 1232 1404
  • ಬ್ಲ್ಯಾಕ್‌ ಆ್ಯಂಡ್‌ ವೈಟ್‌60ಎಂಎಲ್‌ 197 225
  • ಬ್ಲ್ಯಾಕ್‌ ಆ್ಯಂಡ್‌ ವೈಟ್‌750ಎಂಎಲ್‌ 2464 2808
  • ಬ್ಲ್ಯಾಕ್‌ಡಾಗ್‌12ಇಯರ್‌ 750ಎಂಎಲ್‌ 3549 4043
  • ಬ್ಲ್ಯಾಕ್‌ಡಾಗ್‌8ಇಯರ್‌ 750ಎಂಎಲ್‌ 2449 2808
  • ಬ್ಲೆಂಡರ್ಸ್‌ಪ್ರೈಡ್‌ರೇರ್‌ 180ಎಂಎಲ್‌ 455 540
  • ಬ್ಲೆಂಡರ್ಸ್‌ಪ್ರೈಡ್‌ರೇರ್‌ 60ಎಂಎಲ್‌ 150 175
  • ಬ್ಲೆಂಡರ್ಸ್‌ಪ್ರೈಡ್‌ರೇರ್‌ 750ಎಂಎಲ್‌ 1860 2155
  • ಡಿಎಸ್‌ಪಿ ಬ್ಲ್ಯಾಕ್‌ 180ಎಂಎಲ್‌ 175 204
  • ಡಿಎಸ್‌ಪಿ ಬ್ಲ್ಯಾಕ್‌ 750ಎಂಎಲ್‌ 726 846
  • ಡಿಎಸ್‌ಪಿ ಬ್ಲ್ಯಾಕ್‌ 90ಎಎಲ್‌ 94 110
  • ಡಿಎಸ್‌ಪಿ ಪ್ಲೇನ್‌375ಎಂಎಲ್‌ 340 396
  • ಡಿಎಸ್‌ಪಿ ಬ್ಲ್ಯಾಕ್‌750ಎಂಎಲ್‌ 680 792
  • ಇಂಪಿರಿಯಲ್‌ ಬ್ಲ್ಯೂ 180ಎಂಎಲ್‌ 220 257
  • ಇಂಪಿರಿಯಲ್‌ ಬ್ಲ್ಯೂ375ಎಂಎಲ್‌ 457 533
  • ಇಂಪಿರಿಯಲ್‌ ಬ್ಲ್ಯೂ 750ಎಂಎಲ್‌ 914 1067
  • ಎಂಸಿ 180ಎಂಎಲ್‌ 220 257
  • ಎಂಸಿ 375ಎಂಎಲ್‌ 457 533
  • ಎಂಸಿ 750ಎಂಎಲ್‌ 914 1067
  • ಎಂಸಿ ವಿಸ್ಕಿ 90ಎಂಎಲ್‌ (ಟೆಟ್ರಾ) 99 115
  • ಒರಿಜಿನಲ್‌ ಚಾಯ್‌್ಸ 180ಎಂಎಲ್‌ 70 80
  • ಒರಿಜಿನಲ್‌ ಚಾಯ್‌್ಸ 375ಎಂಎಲ್‌ 145 166
  • ಒರಿಜಿನಲ್‌ ಚಾಯ್‌್ಸ 750ಎಂಎಲ್‌ 291 332
  • ಒರಿಜಿನಲ್‌ ಚಾಯ್‌್ಸ 90ಎಂಎಲ್‌ 35 40
  • ಒಟಿ ವಿಸ್ಕಿ 180ಎಂಎಲ್‌ 87 100
  • ಒಟಿ ವಿಸ್ಕಿ375ಎಂಎಲ್‌ 220 255
  • ಒಟಿ ವಿಸ್ಕಿ 750ಎಂಎಲ್‌ 440 509
  • ಆರ್‌ಸಿ ವಿಸ್ಕಿ 180ಎಂಎಲ್‌ 328 383
  • ಆರ್‌ಸಿ ವಿಸ್ಕಿ 375ಎಂಎಲ್‌ 680 795
  • ಆರ್‌ಸಿ ವಿಸ್ಕಿ 750ಎಂಎಲ್‌ 1360 1591
  • ರಾಯಲ್‌ ಸ್ಟಾಗ್‌ 180ಎಂಎಲ್‌ 328 383
  • ರಾಯಲ್‌ ಸ್ಟಾಗ್‌ 60ಎಂಎಲ್‌ 109 143
  • ರಾಯಲ್‌ ಸ್ಟಾಗ್‌ 750ಎಂಎಲ್‌ 1360 1591
  • ಸಿಗ್ನೆಚರ್‌ ರೇರ್‌ 180ಎಂಎಲ್‌ 455 526

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌