ಲಿಂಗಾಯತ ಅನ್ನೋದು ಜಾತಿ ಅಲ್ಲ: ಸಾಣೇಹಳ್ಳಿ‌ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ!

Published : Dec 19, 2023, 09:11 PM IST
ಲಿಂಗಾಯತ ಅನ್ನೋದು ಜಾತಿ ಅಲ್ಲ: ಸಾಣೇಹಳ್ಳಿ‌ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ!

ಸಾರಾಂಶ

ನಾವು ಬಹಳ ಹಿಂದಿನಿಂದಲೂ ಲಿಂಗಾಯತರು, ಲಿಂಗಾಯತರು ಅಂತ ಹೇಳ್ಕೊಂಡು ಬಂದಿದ್ದೀವಿ. ಲಿಂಗಾಯತ ಅನ್ನೋದು ಒಂದು ಜಾತಿ ಅಲ್ಲ ಎಂದು ಸಾಣೇಹಳ್ಳಿ‌ ಶ್ರೀ ಹೇಳಿದ್ದಾರೆ.

ದಾವಣಗೆರೆ (ಡಿ.19): ರಾಜ್ಯದಲ್ಲಿ ಬಹಳ ಹಿಂದಿನಿಂದಲೂ ನಾವು ಲಿಂಗಾಯತರು, ಲಿಂಗಾಯತರು ಅಂತ ಹೇಳ್ಕೊಂಡು ಬಂದಿದ್ದೀವಿ. ಲಿಂಗಾಯತ ಅನ್ನೋದು ಒಂದು ಜಾತಿ ಅಲ್ಲ. ಅದೊಂದು ತತ್ವ ಮತ್ತು ಸಿದ್ದಾಂತವಾಗಿದೆ ಎಂದು ಸಾಣೇಹಳ್ಳಿ‌ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಮತ್ತು ಶರಣ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಅನ್ನೋದು ಜಾತಿ ಅಲ್ಲ. ಬಹಳ ಹಿಂದಿನಿಂದಲೂ ನಾವು ಲಿಂಗಾಯತರು, ಲಿಂಗಾಯತರು ಅಂತ ಹೇಳ್ಕೊಂಡು ಬಂದಿದ್ದೀವಿ. ಲಿಂಗಾಯತ ಅನ್ನೋದು ತತ್ವ, ಅದೊಂದು ಸಿದ್ಧಾಂತವಾಗಿದೆ. ಆ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳೋರು ಲಿಂಗಾಯತರು ಆಗಿದ್ದಾರೆ. ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡೋರು ಮಾತ್ರ ಲಿಂಗಾಯತರು ಆಗಿದ್ದಾರೆ ಎಂದರು.

ಚೈನಿ ವಸ್ತು ಖರೀದಿಸಲು ಸಾಲ ನೀಡಬಾರದು: ಶಾಸಕ ರಾಜು ಕಾಗೆ

ಲಿಂಗಾಯತ ಹಾಗೂ ಲಿಂಗಾಯತ ತನ ಎನ್ನುವುದು ಹುಟ್ಟಿನಿಂದ ಬರೋದಲ್ಲ, ಸಾಧನೆ ಮೂಲಕ ಬರುವುದಾಗಿದೆ. ನನ್ನ ತಂದೆ- ತಾಯಿ ಲಿಂಗಾಯತರು ಹಾಗಾಗಿ ನಾನು ಕೂಡ ಲಿಂಗಾಯತ ಅಂದರೆ ಆಗಲ್ಲ. ಲಿಂಗಸಾಧನೆ ಮೂಲಕ ಲಿಂಗಾಯತರು ಆಗಬೇಕು ಎಂದು ಹೇಳಿದರು. ಈ ಮೂಲಕ ಎಲ್ಲರೂ ಲಿಂಗಪೂಜೆ ಮತ್ತು ಲಿಂಗ ದೀಕ್ಷೆಯ ಅನುಸಾರ ತತ್ವ ಸಿದ್ದಾಂತದಂತೆ ನಡೆದುಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.

ವೀರಶೈವ ಮಹಾ ಅಧಿವೇಶನಕ್ಕೂ, ಜಾತಿ ಗಣತಿಗೂ ಸಂಬಂಧವಿಲ್ಲ
ಹುಬ್ಬಳ್ಳಿ (ಡಿ.19):
ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ವೀರಶೈವ ಮಹಾಧಿವೇಶನ ಮಾಡಲಾಗುತ್ತದೆ. 24ರ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಬಂದಿದೆ. ನಾನು ಭಾಗವಹಿಸುತ್ತೇನೆ. ಬರೀ ಜಾತಿಜನಗಣಿ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಎರಡು ಮೂರು ಪ್ರಮುಖ ವಿಚಾರಗಳಿಗೆ ಸಭೆ ನಡೆಯುತ್ತಿದೆ. ಅದರಲ್ಲಿ ಜಾತಿಗಣತಿ ಸಹ ಒಂದು ವಿಚಾರವಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಮತ್ತು ಎಲ್ಲಾ ಒಳಪಂಗಡಗಳ ಸೇರಿಸುವ ಬೇಡಿಕೆ ಪ್ರಮುಖ ಅಜೆಂಡಾ ಆಗಿದೆ. ಸಮಾಜ ಜಾಗೃತಿ ಮತ್ತು ಸಂಘಟನೆ ಮಾಡಲು ಏನು ಬೇಕು ಅದರ ಬಗ್ಗೆ ಚರ್ಚೆ ನಡೆಯುತ್ತದೆ. ಸಾಮಾಜಿಕ ಸಮೀಕ್ಷೆ ಉದ್ದೇಶದಿಂದ ಜಾತಿಗಣತಿ ಮಾಡಲಾಯಿತು. ಆದರೆ ಗಣತಿ ಬಗ್ಗೆ ಅಂಕಿ ಸಂಖ್ಯೆಗಳ ಬಗ್ಗೆ ಕೆಲವೊಂದು ವಿಚಾರ ಲಿಕ್ ಆಗಿ ವಿವಾದ ಆಗಿದೆ. ಹೀಗಾಗಿ ಸಿಎಂ ಎಲ್ಲಾ ಸಮುದಾಯದ ನಾಯಕರ ಸಭೆ ಕರೆದು ಮಾತನಾಡೋದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

Covid-19 ಆತಂಕ: ಅಯ್ಯಪ್ಪಸ್ವಾಮಿ ಭಕ್ತರು, ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಸರ್ಕಾರದ ಪ್ಲ್ಯಾನ್!

ಬಿಜೆಪಿವರಿಗೆ ಪದೇ ಪದೇ ನಾನೇ ಟಾರ್ಗೆಟ್ ಆಗ್ತಿದ್ದೇನೆ. ವಿಧಾನ ಸಭಾ ಚುನಾವಣಾ ಫಲಿತಾಂಶ ಪರಿಣಾಮದಿಂದ ಮತ್ತೆ ಶೆಟ್ಟರ್ ಟಾರ್ಗೆಟ್ ಆಗಿದ್ದಾರೆ. ಏನು ಪರಿಣಾಮ ಆಗಿದೆ ಅಂತ ಅವರು ಹೇಳಬೇಕು. ನಾನು ನನ್ನ ಬಗ್ಗೆ ಮಾತನಾಡಲ್ಲ. ಒಬ್ಬ ವ್ಯಕ್ತಿ ಶಕ್ತಿ ಏನು ಅಂತ ಗೊತ್ತಾದಾಗ ಅದು ಅರ್ಥವಾಗುತ್ತದೆ. ಬಿಜೆಪಿ ನಾಯಕರಿಗೆ ಮಾಜಿ ಸಚಿವ, ಶಾಸಕರಿಗೆ ಶೆಟ್ಟರ್ ಬಗ್ಗೆ ಅರ್ಥವಾಗಿದೆ. ಕಾಂಗ್ರೆಸ್ ಗೆ ಬರುವವರಲ್ಲಿ ಗೊಂದಲ ಸೃಷ್ಟಿಸೋಕೆ ನಾನು ಬಿಜೆಪಿಗೆ ಹೋಗ್ತಿದೇನೆ ಅಂತ ಹೇಳ್ತಿದಾರೆ. ಯಾವ ಬಿಜೆಪಿ ಹೈಕಮಾಂಡ್ ಇದುವರೆಗೆ ನನ್ನ ಜೊತೆಗೆ ಮಾತನಾಡಿಲ್ಲ. ಈಶ್ವರಪ್ಪ ಹೈಕಮಾಂಡ್ ಅಲ್ಲಾ, ಅರ್ಥ ಇಲ್ಲದ ಪ್ರಶ್ನೆಗೆ ಉತ್ತರ ನೀಡಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!