ಲಿಂಗಸೂರು ಶಾಸಕ ಮಾನಪ್ಪ ವಜ್ಜಲ್ ಪುತ್ರ ಶ್ರೀಮಂತರಾಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಆಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬೆಂಗಳೂರು(ಡಿ.17) ಲಿಂಗಸೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಕುಟಂಬಕ್ಕೆ ಆಘಾತ ಬರಸಿಡಿಲಿನಂತೆ ಎರಗಿದೆ. ಶಾಸಕರ 32 ವರ್ಷದ ಪುತ್ರ ಶ್ರೀಮಂತರಾಯ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದನೋವು ಕಾಣಿಸಿಕೊಂಡ ಬೆನ್ನಲ್ಲೇ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶ್ರೀಮಂತರಾಯ ಪತ್ನಿ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
32ರ ಹರೆಯದ ಶ್ರೀಮಂತರಾಯರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ.ಶ್ರೀಮಂತರಾಯ ಮೃತದೇಹವನ್ನು ಇಂದು ರಾತ್ರಿ ಲಿಂಗಸೂರಿಗೆ ರವಾನೆ ಮಾಡಲಾಗುತ್ತಿದೆ. ನಾಳೆ ಲಿಂಗಸೂರಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅಂತ್ಯಕ್ರೀಯೆ ನಡೆಸಲಾಗುತ್ತದೆ.
undefined
ಹೃದಯಾಘಾತ: ಶಾರ್ಜಾದಲ್ಲಿ 24ರ ಹರೆಯದ ಮಲೆಯಾಳಂ ನಟಿ ಲಕ್ಷ್ಮಿಕಾ ಸಂಜೀವನ್ ನಿಧನ
ಬಿಜೆಪಿ ನಾಯಕರಾಗಿರುವ ಮಾನಪ್ಪ ವಜ್ಜಲ್ ಕುಟುಂಬಕ್ಕೆ ತೀವ್ರ ಆಘಾತವಾಗಿದೆ. 32ರ ಹರೆಯದ ಪುತ್ರನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯ ಕೆಲ ಉದ್ಯಮ, ಕ್ಷೇತ್ರದಲ್ಲಿ ಸಂಚಾರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ಶ್ರೀಮಂತರಾಯ ತೊಡಗಿಸಿಕೊಂಡಿದ್ದರು.
ಮಾನಪ್ಪ ವಜ್ಜಲ್:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾನಪ್ಪ ವಜ್ಜಲ್ 58,769 ಮತಗಳ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದರು. ಲಿಂಗಸೂರಿನ ಕಾಂಗ್ರೆಸ್ ನಾಯಕ ಡಿ.ಎಸ್.ಹುಲಗೇರಿ ವಿರುದ್ಧ 2,809 ಮತಗಳ ಅಂತರದಿಂದ ಸೋಲಿಲಿಸಿದ್ದರು. ಮಾನಪ್ಪ ವಜ್ಜಲ್ ಕೆಲ ಹಲ್ಲೆ ಪ್ರಕರಣಗಳಿಂದಲೂ ಸುದ್ದಿಯಾಗಿದ್ದಾರೆ. ಉದ್ಯಮಿ ಪುತ್ರನ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲೂ ಮಾನಪ್ಪ ವಜ್ಜಲ್ ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹೊಗಳಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ತೀವ್ರ ಹೃದಯಾಘಾತಕ್ಕೆ 29 ವರ್ಷದ ಯುವಕ ಸಾವು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರಡಿಯಲ್ಲಿ ನಾನು ಸೇರಿ ಅನೇಕರು ಬೆಳೆದಿದ್ದೇವೆ. ಸಿದ್ದರಾಮಯ್ಯ ಅವರು 2ನೇ ದೇವರಾಜ ಅರಸು ಎಂದು ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದ್ದರು. ವಜ್ಜಲ್ ಅವರ ಈ ಬಹಿರಂಗ ಹೊಗಳಿಕೆ ತೀವ್ರ ಕುತೂಹಲ ಮೂಡಿಸಿತ್ತು. ಶರಣಬಸವ ಸ್ವಾಮೀಜಿಗಳ ಸ್ಮರಣೋತ್ಸವ, ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಾಗೂ ಗುರು ಕುಟೀರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬೇರೆ ಪಕ್ಷದಲ್ಲಿದ್ದರೂ ನನಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದರು ಎಂದು ಬಣ್ಣಿಸಿದ್ದರು.